ಭಾರಿ ಬೇಡಿಕೆ; ಫೋರ್ಡ್ ಇಕೊಸ್ಪೋರ್ಟ್ ಬುಕ್ಕಿಂಗ್ ಸ್ಥಗಿತ

By Nagaraja

ಇತ್ತೀಚೆಗಷ್ಟೇ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದ ಕಾಂಪಾಕ್ಟ್ ಎಸ್‌ಯುವಿ ಫೋರ್ಡ್ ಇಕೊಸ್ಪೋರ್ಟ್‌ಗೆ ಭಾರಿ ಬೇಡಿಕೆ ಕಂಡುಬಂದಿರುವ ಹಿನ್ನಲೆಯಲ್ಲಿ ಕೆಲವೊಂದು ನಿರ್ದಿಷ್ಟ ವೆರಿಯಂಟ್‌ಗಳ ಬುಕ್ಕಿಂಗ್ ಸ್ಥಗಿತಗೊಳಿಸಲು ಅಮೆರಿಕ ಮೂಲದ ಈ ಕಂಪನಿ ನಿರ್ಧರಿಸಿದೆ.

ಕಾರು ಖರೀದಿ ಗ್ರಾಹಕರಿಂದ ಭಾರಿ ಬೇಡಿಕೆ ಕಂಡುಬಂದಿರುವ ಹಿನ್ನಲೆಯಲ್ಲಿ ಈಗಾಗಲೇ ಕೆಲವು ನಿರ್ದಿಷ್ಟ ವೆರಿಯಂಟ್‌ಗಳ ಕಾಯುವಿಕೆ ಅವಧಿಯನ್ನು ಆರು ತಿಂಗಳುಗಳಷ್ಟು ಕಾಲ ಮುಂದೂಡಲಾಗಿದೆ. ಈ ನಡುವೆ ಕೆಲವು ವೆರಿಯಂಟ್‌ಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಟೋ ಮೂಲಗಳು ತಿಳಿಸಿವೆ.


ಡೀಲರ್‌ಶಿಪ್‌ಗಳಿಂದ ಬಂದಿರುವ ಮಾಹಿತಿ ಪ್ರಕಾರ, ಬುಕ್ಕಿಂಗ್ ಸ್ಥಗಿತಗೊಂಡಿರುವುದು ಡೀಲರುಗಳಿಂದ ಡೀಲರುಗಳಿಂದ ವಿಭಿನ್ನವಾಗಿದೆ. ಕೆಲವು ಡೀಲರುಗಳು ಎಂಟ್ರಿ ಲೆವೆಲ್ ಡೀಸೆಲ್ ವೆರಿಯಂಟ್‌ಗಳ ಬುಕ್ಕಿಂಗ್ ಸ್ಥಗಿತಗೊಳಿಸಿದ್ದರೆ ಇನ್ನು ಕೆಲವು ಡೀಲರುಗಳು ಮಿಡ್ ವೆರಿಯಂಟ್ ಹಾಗೆಯೇ ಟಾಪ್ ಎಂಡ್ ವೆರಿಯಂಟ್‌ಗಳ ಬುಕ್ಕಿಂಗನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ.

ಜೂನ್ 26ಕ್ಕೆ ಲಾಂಚ್ ಆಗಿದ್ದ ಇಕೊಸ್ಪೋರ್ಟ್ ಕೇವಲ 17 ದಿನಗಳೊಳಗೆ 30,000ಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಸಿಯಾಮ್ ವರದಿಗಳ ಪ್ರಕಾರ ಜುಲೈ ವರೆಗೆ ಕಂಪನಿಯು 8,717 ಯುನಿಟ್‌ಗಳನ್ನು ಮಾರಾಟಗೈದಿದೆ. ಇದರ ಇಕೊಬೂಸ್ಟ್ ಹಾಗೂ ತುರ್ತು ಅಪಘಾತ ಪರಿಸ್ಥಿತಿಯಲ್ಲಿ ನೆರವಿಗೆ ಬರುವ ಎಮರ್ಜನ್ಸಿ ಅಸಿಸ್ಟ್ ಸೇವೆ ಪ್ರಮುಖ ವೈಶಿಷ್ಟ್ಯವಾಗಿದೆ.


1.5 ಲೀಟರ್ ಪೆಟ್ರೋಲ್ ವೆರಿಯಂಟ್ ಇಕೊಸ್ಪೋರ್ಟ್ ದೆಹಲಿ ಎಕ್ಸ್ ಶೋ ರೂಂ ದರ 5.59 ಲಕ್ಷ ರು.ಗಳಿಂದ 8.44 ಲಕ್ಷ ರು.ಗಳ ವರೆಗಿದೆ. ಹಾಗೆಯೇ 1.5 ಲೀಟರ್ ಡೀಸೆಲ್ ಎಂಜಿನ್ ದೆಹಲಿ ಎಕ್ಸ್ ಶೋ ರೂಂ ದರ 6.69 ಲಕ್ಷ ರು.ಗಳಿಂದ 8.99 ಲಕ್ಷ ರು.ಗಳ ವರೆಗಿದೆ.

ಇಷ್ಟೆಲ್ಲ ಆದರೂ ಒಂದು ವೇಳೆ ಲಾಂಚ್ ದಿನಾಂಕವನ್ನು ಹಲವಾರು ಬಾರಿ ಮುಂದೂಡದಿದ್ದರೆ ಇಕೊಸ್ಪೋರ್ಟ್ ಇನ್ನು ಹೆಚ್ಚಿನ ಯಶ ಸಾಧಿಸಲು ನೆರವಾಗುತ್ತಿತ್ತು. ಹಾಗಿದ್ದರೂ ರೆನೊ ಡಸ್ಟರ್‌ಗೆ ಟಕ್ಕರ್ ನೀಡುವಲ್ಲಿ ಇಕೊಸ್ಪೋರ್ಟ್ ಯಶಸ್ವಿಯಾಗಿದೆ.

More from DriveSpark

Article Published On: Thursday, August 22, 2013, 12:38 [IST]
English summary
Ford India said it has stopped bookings of some of the variants of its compact sports utility vehicle 'EcoSport' in the wake of heavy demand. "We are witnessing an extended waiting period on certain variants and have temporarily stopped taking bookings on a few variants," a Ford India spokesperson said without specifying details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+