1.66 ಲಕ್ಷ ಫೋರ್ಡ್ ಕಾರುಗಳು ಹಿಂಪಡೆತ

ದೇಶದ ಅತಿದೊಡ್ಡ ರಿಕಾಲ್ ಎಂದೇ ವ್ಯಾಖ್ಯಾನಿಸಲ್ಪಡುವ ಪ್ರಕರಣವೊಂದರಲ್ಲಿ ಅಮೆರಿಕ ಮೂಲದ ಫೋರ್ಡ್ ಕಂಪನಿಯು, 1.66 ಲಕ್ಷ ಯುನಿಟ್‌ಗಳಷ್ಟು ಫಿಗೊ ಹಾಗೂ ಕ್ಲಾಸಿಕ್ ಸೆಡಾನ್ ಆವೃತ್ತಿಗಳನ್ನು ವಾಪಾಸ್ ಕರೆಯಿಸಿಕೊಂಡಿದೆ.

ರಿಯರ್ ಟ್ವಿಸ್ಟ್ ಬೀಮ್ (ಆರ್‌ಟಿಬಿ) ಮತ್ತು ಪವರ್ ಅಸಿಸ್ಟಡ್ ಸ್ಟೀರಿಂಗ್‌ನಲ್ಲಿ (ಪಿಎಎಸ್) ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಭಾರಿ ಪ್ರಮಾಣದ ರಿಕಾಲ್ ದಾಖಲಾಗಿದೆ.


2011 ಜನವರಿಯಿಂದ 2012 ಜೂನ್ ಅವಧಿಯಲ್ಲಿ ಉತ್ಪಾದನೆಯಾಗಿರುವ 1,31,922ಗಳಷ್ಟು ಫಿಗೊ ಹಾಗೂ 22,453 ಯುನಿಟ್ ಫೋರ್ಡ್ ಕ್ಲಾಸಿಕ್ ಹಿಂಪಡೆಯಲಾಗುತ್ತಿದೆ. ಇದರ ಜತೆಗೆ 2010 ಜನವರಿಯಿಂದ ಆಗಸ್ಟ್ ಹಾಗೂ 2011 ಮಾರ್ಚ್‌ನಿಂದ ನವೆಂಬರ್‌ ವರೆಗೆ ಉತ್ಪಾದನೆಯಾದ 34,099 ಯುನಿಟ್‌ಗಳನ್ನು (30,681 ಫಿಗೊ, 3418 ಕ್ಲಾಸಿಕ್) ವಾಪಾಸ್ ಕರೆಯಿಸಿಕೊಳ್ಳಲಾಗಿದೆ.

ಆರ್‌ಟಿಬಿ ಹಾಗೂ ಪಿಎಎಸ್ ಸಮಸ್ಯೆಯಿಂದಾಗಿ ಇದುವರೆಗೆ ಯಾವುದೇ ಅಪಘಾತ ಪ್ರಕರಣಗಳು ದಾಖಲಾಗಿಲ್ಲ. ಹಾಗಿದ್ದರೂ ಮುಂಜಾಗ್ರತಾ ಕ್ರಮವಾಗಿ ಕಾರುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಇತ್ತೀಚೆಗಷ್ಟೇ 972 ಇಕೊಸ್ಪೋರ್ಟ್ ಯುನಿಟ್‌ಗಳನ್ನು ಫೋರ್ಡ್ ಹಿಂಪಡೆಯಲಾಗಿತ್ತು. ಇದರ ಬೆನ್ನಲ್ಲೇ ಫಿಗೊ ಹಾಗೂ ಕ್ಲಾಸಿಕ್ ಸೆಡಾನ್ ಕಾರುಗಳನ್ನು ವಾಪಾಸ್ ಪಡೆಯಲಾಗುತ್ತಿದೆ.

More from DriveSpark

Article Published On: Monday, September 16, 2013, 11:07 [IST]
English summary
In what is one of the largest ever recall in Indian automobile history, Ford India has issued a recall of 1,66,000 Figo hatchback and Classic sedan units (previously, Fiesta).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+