ವರ್ಷದಲ್ಲಿ ನಾಲ್ಕನೇ ಬಾರಿ ಡೀಸೆಲ್ ದರದಲ್ಲಿ ಏರಿಕೆ
ಕೇಂದ್ರ ಸರಕಾರದ ಜನ ವಿರೋಧಿ ನೀತಿ ಮತ್ತೆ ಮುಂದುವರಿದಿದ್ದ, ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 1.02 ರು.ಗಳನ್ನು ಹೆಚ್ಚಳ ಮಾಡಲಾಗಿದೆ. ಈ ವರ್ಷದಲ್ಲಿ ಇದು ನಾಲ್ಕನೇ ಬಾರಿ ಡೀಸೆಲ್ ದರದಲ್ಲಿ ವರ್ಧನೆ ಕಂಡುಬಂದಿದೆ.
ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಶುಕ್ರವಾರ ಮಧ್ಯ ರಾತ್ರಿಯಿಂದಲೇ ಅನ್ವಯವಾಗುವಂತೆ ರು. 1.02 ಹೆಚ್ಚಳಗೊಳಿಸಿತ್ತು. ಡೀಸೆಲ್ ದರದ ಹೆಚ್ಚಳದಿಂದಾಗಿ ಸರಕು ಸಾಗಣೆ ವೆಚ್ಚದಲ್ಲೂ ಗಣನೀಯ ವರ್ಧನೆ ಕಂಡುಬರುವ ಸಾಧ್ಯತೆಯಿದೆ.
ತೈಲ ಸಂಸ್ಥೆಗಳಿಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಪ್ರತಿ ತಿಂಗಳು ಡೀಸೆಲ್ ದರದಲ್ಲಿ 50 ಪೈಸೆಯಷ್ಟು ಹೆಚ್ಚಳ ಮಾಡಲು ತೈಲ ಕಂಪನಿಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಎಪ್ರಿಲ್ ತಿಂಗಳಲ್ಲಿ ಡೀಸೆಲ್ ದರ ಏರಿಕೆಯಾಗಿರಲಿಲ್ಲ. ಆದರೆ ಇದೀಗ ಒಂದೇ ಬಾರಿಗೆ ಒಂದು ರುಪಾಯಿಗಳಷ್ಟು ಹೆಚ್ಚಳ ಮಾಡಿದೆ.
ಹೊಸ ದರ ಅನ್ವಯ ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರತಿ ಲೀಟರ್‌ಗೆ ರು. 49.69 ತೆರಬೇಕಾಗಿದೆ. ಈ ಹಿಂದಿನ ದರ 48.67 ರು.ಗಳಾಗಿತ್ತು.


Click it and Unblock the Notifications









