ಭಾರತಕ್ಕೂ ಬರುತ್ತೆ ಬುಲೆಟ್ ಟ್ರೇನ್
ಜಪಾನ್‌ನಲ್ಲಿ ಅತ್ಯಂತ ಹೆಚ್ಚು ಯಶ ಸಾಧಿಸಿರುವ ಬುಲೆಟ್ ಟ್ರೇನ್‌ಗಳು ಭಾರತಕ್ಕೆ ಪ್ರವೇಶಿಸಲು ಕಾಲ ಸನ್ನಿಹಿತವಾಗಿದೆ. ಭಾರತದಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಟೊಕಿಯೊ ಮುಂದಾಗುತ್ತಿರುವುದರಿಂದ ಜಪಾನಿನ ಬುಲೆಟ್ ರೈಲು ತಂತ್ರಜ್ಞಾನ ಭಾರತ ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಮೂರು ದಿನಗಳ ಜಪಾನ್ ಪ್ರವಾಸದಲ್ಲಿದ್ದ ಪ್ರಧಾನಿ ಡಾ. ಮನಮೋಹನ್ ಸಿಂಗ್, ಈ ನಿಟ್ಟಿನಲ್ಲಿ ಜಪಾನ್ ಪ್ರಧಾನಿ ಶಿನ್ಜೋ ಅಬೆ ನಡುವೆ ನಡೆಸಿದ ಮಾತುಕತೆಯಲ್ಲಿ ಬುಲೆಟ್ ರೈಲು ವ್ಯವಸ್ಥೆಗೆ ಸಹಮತ ಪಡೆಯಲಾಯಿತು. ಆರ್ಥಿಕ ಹಾಗೂ ಮೂಲ ಮೂಲಸೌಕರ್ಯ ಅಭಿವೃದ್ಧಿಗೆ ಜಪಾನ್ ತಂತ್ರಜ್ಞಾನದ ಸಹಕಾರ ಮಾಡಲಿದೆ.
ಈ ಸಂದರ್ಭದಲ್ಲಿ ಉಭಯ ದೇಶಗಳು 424 ಬಿಲಿಯನ್ ಡಾಲರ್ ಸಾಲವನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಇದರಲ್ಲಿ ಮುಂಬೈ ಮೆಟ್ರೋಲ್ ರೈಲು ಯೋಜನೆ ಕೂಡ ಸೇರಿವೆ. ಹಾಗೆಯೇ ಮುಂಬೈ-ಅಹಮದಾಬಾದ್ 490 ಕೀ.ಮೀ ರೈಲು ಯೋಜನೆಗೆ ಒಂದು ಶತಕೋಟಿ ಯೆನ್ ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.
ಈ ನಡುವೆ ಮುಂಬೈ ಟ್ರೇನ್ ಯೋಜನೆ ಕೈಗೆತ್ತಿಗೊಳ್ಳಲು ಫ್ರಾನ್ಸ್ ಕೂಡಾ ಪ್ರಯತ್ನ ನಡೆಸುತ್ತಿದೆ. ಮುಂಬೈ ಹಾದಿಯಾಗಿ ಹೋಗುವ 630 ಕೀ.ಮೀ ಉದ್ದದ ಅಹಮಾದಾಬಾದ್-ಪುಣೆ ಯೋಜನೆ ಕೈಗೆತ್ತಿಕೊಳ್ಳಲು ಭಾರತೀಯ ರೈಲ್ವೇ ಜತೆ ಫ್ರಾನ್ಸ್ ಮಾತುಕತೆ ನಡೆಸಿವೆ. ಪ್ರಸ್ತುತ ವರದಿಯು ಜೂನ್ ತಿಂಗಳಲ್ಲಿ ರೈಲ್ವೇ ಮಂಡಳಿಗೆ ತಲುಪಲಿದೆ.


Click it and Unblock the Notifications









