ಗೋವಾದಲ್ಲಿ ಈಗ ಡೀಸೆಲ್‌ಗಿಂತ ಪೆಟ್ರೋಲ್ ಬಲು ಅಗ್ಗ..!
ಗೋವಾದಲ್ಲಿ ಇದೀಗ ಪೆಟ್ರೋಲ್ ದರ 52.19 ರು.ಗಳಾಗಿದ್ದರೆ ಡೀಸೆಲ್‌ಗೆ 52.70 ರು.ಗಳಿವೆ. ಇದರಿಂದಾಗಿ ಗೋವಾದಲ್ಲಿ ಡೀಸೆಲ್‌ಗಿಂತ ಪೆಟ್ರೋಲ್ 60 ಪೈಸೆಯಷ್ಟು ಕಡಿಮೆ ಬೆಲೆಗೆ ದೊರಕುತ್ತದೆ.
ಇಡೀ ರಾಷ್ಟ್ರದಲ್ಲೇ ಗೋವಾ ಪೆಟ್ರೋಲ್ ದರ ಅತ್ಯಂತ ಕಡಿಮೆ. 2012ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಮನೋಹರ ಪಾರಿಕ್ಕರ್ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ ಚುನಾವಣಾ ಭರವೆಸಯನ್ನು ಈಡೇರಿಸುವ ಮೂಲಕ ಪೆಟ್ರೋಲ್ ಮೇಲಿನ ವ್ಯಾಟ್ ತೆರಿಗೆಯನ್ನು 0.1ಕ್ಕೆ ಇಳಿಕೆ ಮಾಡಿದ್ದರು. ಇದರಿಂದಾಗಿ ಪಟ್ರೋಲ್ ದರದಲ್ಲಿ 11 ರುಪಾಯಿಗಳಷ್ಟು ಇಳಿಕೆ ಕಂಡಿತ್ತು.
ಮುಂದುವರಿದ ಬೆಳವಣಿಗೆಯಂತೆಯೇ ಕೇಂದ್ರ ಸರಕಾರ ಪೆಟ್ರೋಲ್ ದರವನ್ನು ಕೊಂಚ ಕಡಿಮೆ ಮಾಡಿರುವುದು ಹಾಗೂ ಡೀಸೆಲ್ ದರದಲ್ಲಿ ಪ್ರತಿ ತಿಂಗಳಲ್ಲಿ ವರ್ಧನೆ ಮಾಡುತ್ತಿರುವುದರಿಂದ ಪೆಟ್ರೋಲ್ ಅಗ್ಗವಾಗಿ ಲಭಿಸಲು ಕಾರಣವಾಗಿದೆ.
ಈ ನಡುವೆ ಗೋವಾ ಕಾರು ಖರೀದಿ ಗ್ರಾಹಕರು ಮತ್ತೆ ಪೆಟ್ರೋಲ್ ಕಾರುಗಳತ್ತ ವಾಲುವ ಸಾಧ್ಯಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಡೀಸೆಲ್‌ಗಿಂತಲೂ ಪೆಟ್ರೋಲ್ ಅಗ್ಗದ ದರದಲ್ಲಿ ಲಭಿಸುತ್ತಿರುವುದು ಇದರ ಕಾರಣವಾಗಿದೆ.
ಹಾಗಾಗಿ ಇನ್ನು ಮುಂದೆ ನಮ್ಮ ಕರ್ನಾಟಕ ಗ್ರಾಹಕರು ನೆರೆಯ ಗೋವಾಕ್ಕೆ ತೆರಳಿದ್ದಲ್ಲಿ ಹಿಂತಿರುವಾಗ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸಿ ಬರಬಹುದು. ಗೋವಾ ಗಡಿಗೆ ಹತ್ತಿರವಾಗಿರುವ ಕರ್ನಾಟಕ ಹಾಗೂ ಮಹಾರಾಷ್ಟ್ರದ ವಾಹನ ಚಾಲಕರೂ ಇದರ ಲಾಭ ಪಡೆಯುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಇಂತಹ ಪ್ರವೃತ್ತಿ ಕರ್ನಾಟಕಕ್ಕೆ ನಷ್ಟವನ್ನುಂಟು ಮಾಡಲಿದೆ.


Click it and Unblock the Notifications









