ಬೆಂಗಳೂರಿನಲ್ಲಿ ಅಮೇಜ್ ವೇಟಿಂಗ್ ಪಿರೇಡ್ ಇಳಿಕೆ
ಕಳೆದ ಎಪ್ರಿಲ್ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದ ಹೋಂಡಾ ಅಮೇಜ್ ಕಾಯುವಿಕೆ ಅವಧಿ ಒಂದು ಹಂತದಲ್ಲಿ ಮೂರರಿಂದ ಐದು ತಿಂಗಳುಗಳ ವರೆಗೂ ವರ್ಧಿಸಿತ್ತು. ಇದು ಗ್ರಾಹಕರಲ್ಲಿ ಅತೀವ ಬೇಸರಕ್ಕೆ ಕಾರಣವಾಗಿತ್ತು.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಈ ನಡುವೆ 50,000 ಯುನಿಟ್ ಮಾರಾಟ ದಾಖಲಿಸಿಕೊಂಡಿರುವ ಹೋಂಡಾ ಅಮೇಜ್ ಝೀರೋ ವೇಟಿಂಗ್ ಪಿರೀಡ್‌ನಲ್ಲಿ ಗ್ರಾಹಕರ ಕೈಸೇರಲಿದೆ ಎಂಬ ವರದಿ ಲಭಿಸಿದೆ.

ಬೆಂಗಳೂರು ಸೇರಿದ ಇತರ ಪ್ರಮುಖ ನಗರಗಳಲ್ಲಿ ಅಮೇಜ್ ಬುಕ್ ಮಾಡಿದ ಒಂದೆರಡು ದಿನಗಳಲ್ಲೇ ಗ್ರಾಹಕರನ್ನು ತಲುಪಲಿದೆ ಎಂದು ವಾಹನೋದ್ಯಮ ಮೂಲಗಳು ತಿಳಿಸಿದೆ. ಇದು ಗ್ರಾಹಕರಲ್ಲಿ ಖುಷಿಗೆ ಕಾರಣವಾಗಿದೆ.
ದೇಶದಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆಯುಳ್ಳ ಕಾಂಪಾಕ್ಟ್ ಸೆಡಾನ್ ಕಾರೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೇಜ್ ಮೋಡಿ ಮಾಡುವಲ್ಲಿ ಯಶಸ್ವಿಯಾಗಿತ್ತು.
ಅಂದ ಹಾಗೆ ಅಮೇಜ್ ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗುತ್ತದೆ- 1.2 ಲೀಟರ್ ಐವಿಟೆಕ್ ಪೆಟ್ರೋಲ್ ಮತ್ತು 1.5 ಲೀಟರ್ ಐಡಿಟೆಕ್ ಡೀಸೆಲ್ ಎಂಜಿನ್. ಇದರ ದೆಹಲಿ ಎಕ್ಸ್ ಶೋ ರೂಂ ದರ 5.05 ರು.ಗಳಾಗಿವೆ. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ಕಿಸಿ...


Click it and Unblock the Notifications








