ಗ್ರಾಂಡ್ ಐ10, 20 ದಿನಗಳಲ್ಲೇ 10,000 ಬುಕ್ಕಿಂಗ್ಸ್

By Nagaraja

ಇತ್ತೀಚೆಗಷ್ಟೇ ಭಾರತ ಮಾರುಕಟ್ಟೆ ಪ್ರವೇಶ ಪಡೆದಿದ್ದ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರು ಬಿಡುಗಡೆಯಾದ 20 ದಿನಗಳೊಳಗೆ 10,000ಕ್ಕೂ ಹೆಚ್ಚು ಮುಗಂಡ ಬುಕ್ಕಿಂಗ್ ಗಿಟ್ಟಿಸಿಕೊಳ್ಳುವ ಮೂಲಕ ದಾಖಲೆ ಸ್ಥಾಪಿಸಿದೆ.

ಐ10 ಹಾಗೂ ಐ20 ನಡುವೆ ಗುರುತಿಸಿಕೊಂಡಿರುವ ಗ್ರಾಂಡ್ ಐ10 ಸೆಪ್ಟೆಂಬರ್ 3ರಂದು ಲಾಂಚ್ ಆಗಿತ್ತು. ಈ ಮೂಲಕ ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಜನಪ್ರಿಯ ಸ್ವಿಫ್ಟ್‌ಗೆ ಪ್ರಬಲ ಪ್ರತಿಸ್ಪರ್ಧಿಯನ್ನು ಹ್ಯುಂಡೈ ರಂಗಕ್ಕಿಳಿಸಿತ್ತು. ಇದೀಗ ಹ್ಯುಂಡೈ ನಿರೀಕ್ಷೆಯಂತೆಯೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಜತೆಗೆ 70,000ದಷ್ಟು ಟೆಸ್ಟ್ ಡ್ರೈವಿಂಗ್ ಬುಕ್ಕಿಂಗ್ ದಾಖಲಾಗಿರುವುದಾಗಿ ಕಂಪನಿ ತಿಳಿಸಿದೆ.


ಗ್ರಾಂಡ್ ಐ10 ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ. ಪೆಟ್ರೋಲ್‌ನಲ್ಲಿ ಜನಪ್ರಿಯ 1.2 ಲೀಟರ್ ಕಪ್ಪ2 ಹಾಗೂ ಡೀಸೆಲ್‌ನಲ್ಲಿ 1.4 ಸಿಆರ್‌ಡಿಐ ಎಂಜಿನ್ ಆಳವಡಿಸಲಾಗಿದೆ. ಅಷ್ಟೇ ಅಲ್ಲದೆ ಗ್ರಾಂಡ್ ಐ10 ಮಾರಾಟವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಐ10 ಆವೃತ್ತಿಯಲ್ಲಿ ನೀಡಿ ಬರಲಾಗುತ್ತಿದ್ದ ಕಪ್ಪ ಎಂಜಿನ್ ಆಯ್ಕೆಯನ್ನು ಸಹ ಹ್ಯುಂಡೈ ನಿಲುಗಡೆಗೊಳಿಸಿತ್ತು.

ಭಾರತ ವಾಹನ ಅಧ್ಯಯನ ಸಂಸ್ಥೆ (ಎಆರ್‌ಎಐ) ನೀಡಿರುವ ಮಾನ್ಯತೆ ಪ್ರಕಾರ ಗ್ರಾಂಡ್ ಐ10 ಡೀಸೆಲ್ ಕಾರು 20 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಒಟ್ಟಿನಲ್ಲಿ ಕಾರು ಮಾರುಕಟ್ಟೆ ಕುಸಿದಿರುವ ಈ ಹಂತದಲ್ಲಿಯೂ ಗ್ರಾಂಡ್ ಐ10 ಉತ್ತಮ ಬುಕ್ಕಿಂಗ್ ದಾಖಲಿಸುತ್ತಿರುವುದು ವಾಹನೋದ್ಯಮ ಪಾಲಿಗೆ ಶುಭಕರವಾಗಿ ಪರಿಣಮಿಸಿದೆ.

Article Published On: Wednesday, September 25, 2013, 14:11 [IST]
English summary
Hyundai India inform us that within 20 days of the launch, the company has received 10,000 bookings for the Grand i10 hatchback.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+