ಸ್ವಿಫ್ಟ್ ಪ್ರತಿಸ್ಪರ್ಧಿ 'ಗ್ರಾಂಡ್ ಐ10' ಮಾರುಕಟ್ಟೆಗೆ ಭರ್ಜರಿ ಎಂಟ್ರಿ

By Nagaraja

ದೇಶದ ಎರಡನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಹ್ಯುಂಡೈ, ಅತಿ ನೂತನ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರನ್ನು ಲಾಂಚ್ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಐ10 ಹಾಗೂ ಐ20 ನಡುವೆ ಕಾಣಿಸಿಕೊಂಡಿರುವ ಗ್ರಾಂಡ್ ಐ10, ಜನಪ್ರಿಯ ಮಾರುತಿ ಸುಜುಕಿ ಸ್ವಿಫ್ಟ್ ಆವೃತ್ತಿಗೆ ನೇರ ಪೈಪೋಟಿ ನೀಡಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಐ10 ಆಗಮನವಾಗಿದೆ. ಪೆಟ್ರೋಲ್ ವೆರಿಯಂಟ್ ಪ್ರಾರಂಭಿಕ ದರ 4.29 ಲಕ್ಷ ರು. ಹಾಗೂ ಡೀಸೆಲ್ ವೆರಿಯಂಟ್ ಆರಂಭಿಕ ದರ 5.23 ಲಕ್ಷ ರು.ಗಳಾಗಿವೆ. ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ ತಲಾ ನಾಲ್ಕು ಸೇರಿದಂತೆ ಒಟ್ಟು ಎಂಟು ವೆರಿಯಂಟ್‌ಗಳಲ್ಲಿ ಐ10 ಆಗಮನವಾಗಿದೆ.

* ಇರಾ (Era)
* ಮ್ಯಾಗ್ನಾ (Magna)
* ಸ್ಪೋರ್ಟ್ಜ್ (Sportz) ಮತ್ತು
* ಆಸ್ಟಾ ಆಪ್ಷನ್ Asta (O)

5ನೇ ಹ್ಯಾಚ್‌ಬ್ಯಾಕ್

5ನೇ ಹ್ಯಾಚ್‌ಬ್ಯಾಕ್

ಗ್ರಾಂಡ್ ಐ10, ಹ್ಯುಂಡೈನಿಂದ ದೇಶಕ್ಕೆ ಪರಿಚಯವಾಗುತ್ತಿರುವ ಐದನೇ ಹ್ಯಾಚ್‌ಬ್ಯಾಕ್ ಕಾರಾಗಿದೆ. ಈ ಹಿಂದೆ ಇಯಾನ್, ಸ್ಯಾಂಟ್ರೊ, ಐ10 ಹಾಗೂ ಐ20 ದೇಶದ ಮಾರುಕಟ್ಟೆಗೆ ಪರಿಚಯಿಸಿತ್ತು.

ಎಂಜಿನ್ ಮಾಹಿತಿ

ಎಂಜಿನ್ ಮಾಹಿತಿ

ಇದರಲ್ಲಿ 1.2 ಲೀಟರ್ ಕಪ್ಪ (KAPPA) ಪೆಟ್ರೋಲ್ ಎಂಜಿನ್ ಹಾಗೂ 1.1 ಲೀಟರ್ ಯು2 ಸಿಆರ್‌ಡಿಐ (U2 CRDI) ಡೀಸೆಲ್ ಮೋಟಾರ್ ಎಂಜಿನ್ ಆಳವಡಿಸಲಾಗಿದೆ.

ಮೈಲೇಜ್

ಮೈಲೇಜ್

ಕಂಪನಿಯ ಪ್ರಕಾರ ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿ ಗ್ರಾಂಡ್ ಐ10 ಪ್ರತಿ ಲೀಟರ್‌ಗೆ 23 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವಿರಲಿದೆ.

ಬಿ ಸೆಗ್ಮೆಂಟ್

ಬಿ ಸೆಗ್ಮೆಂಟ್

ಸದ್ಯ ದೇಶದ ಗ್ರಾಹಕರು ಪ್ರೀಮಿಯಂ ಕಾರುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹ್ಯುಂಡೈ ಗ್ರಾಂಡ್ ಐ10 ಉತ್ತಮ ಆಯ್ಕೆಯಾಗಿರಲಿದೆ ಎಂದು ಕಂಪನಿ ತಿಳಿಸಿದೆ.

ಪೆಟ್ರೋಲ್ ವೆರಿಯಂಟ್

ಪೆಟ್ರೋಲ್ ವೆರಿಯಂಟ್

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಇರಾ: ರು. 4.29,900

ಮ್ಯಾಗ್ನಾ: ರು. 4,49,400

ಸ್ಪೋರ್ಟ್ಜ್: ರು. 4,88,800

ಆಸ್ಟಾ ಆಪ್ಷನ್: ರು. 5,47,800

ಡೀಸೆಲ್ ವೆರಿಯಂಟ್

ಡೀಸೆಲ್ ವೆರಿಯಂಟ್

ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಇರಾ: ರು. 5,23,700

ಮ್ಯಾಗ್ನಾ: ರು. 5,43,200

ಸ್ಪೋರ್ಟ್ಜ್: ರು. 5,82,600

ಆಸ್ಟಾ: ರು. 6,41,600

ಮೇಡ್ ಇನ್ ಇಂಡಿಯಾ

ಮೇಡ್ ಇನ್ ಇಂಡಿಯಾ

ಹ್ಯುಂಡೈ ಪ್ರಕಾರ, ಗ್ರಾಂಡ್ ಐ10 'ಮೇಡ್ ಇನ್ ಇಂಡಿಯಾ' ಕಾರಾಗಿದ್ದು, ಯುರೋಪ್ ವರ್ಷನ್‌ಗಿಂತ ಸಂಪೂರ್ಣ ವಿಭಿನ್ನವಾಗಿದ್ದು, ಈ ಸೆಗ್ಮೆಂಟ್‌ನಲ್ಲಿ ಇದೇ ಮೊದಲ ಬಾರಿಗೆ ಎಸಿ ವೆಂಟ್ಸ್ ನೀಡಲಾಗುತ್ತಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ನೂತನ ಐ10 ಗ್ರಾಂಡ್, ಸ್ವಯಂಚಾಲಿತ ಮಡಚಬಹುದಾದ ಹೊರಂಗಿನ ಮಿರರ್, ಮ್ಯೂಸಿಕ್ ಸಿಸ್ಟಂ ಜತೆ 1 ಜಿಬಿ ಮೆಮರಿ ಸ್ಟೋರೆಜ್, ರಿಯರ್ ಎಸಿ ವೆಂಟ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಕೂಲ್ಡ್ ಗ್ಲೋವ್ ಬಾಕ್ಸ್, 14 ಇಂಚು ಅಲಾಯ್ ವೀಲ್, ಸ್ಟಾರ್ಟ್/ಸ್ಟಾಪ್ ಬಟನ್, ಸ್ಮಾರ್ಟ್ ಕೀ, ಏರ್ ಬ್ಯಾಗ್ ಹಾಗೂ ಎಬಿಎಸ್ ತಂತ್ರಜ್ಞಾನಗಳನ್ನು ಹೊಂದಿರಲಿದೆ.

ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿ

ಮಾರುತಿ ಸ್ವಿಫ್ಟ್ ಪ್ರತಿಸ್ಪರ್ಧಿ

ಪ್ರಸ್ತುತ ದೇಶದ ನಂ. 1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಜನಪ್ರಿಯ ಸ್ವಿಫ್ಟ್ ಆವೃತ್ತಿಗೆ ಗ್ರಾಂಡ್ ಐ10 ಪೈಪೋಟಿ ನೀಡಲಿದೆ.

ಗ್ರಾಂಡ್ ಐ10

ಗ್ರಾಂಡ್ ಐ10

ಇದೀಗ ಗ್ರಾಂಡ್ ಐ10 ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ.

More from DriveSpark

Article Published On: Tuesday, September 3, 2013, 14:15 [IST]
English summary
Hyundai India has launched the all new Grand i10 with a starting price of Rs 4.29 lakh for petrol variant and Rs 5.23 lakh for diesel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+