ಹ್ಯುಂಡೈ ಐ10 ಸ್ಪೆಷಲ್ ಅಡಿಷನ್ ಲಾಂಚ್
2007ನೇ ಇಸವಿಯಲ್ಲಿ ಮೊದಲ ಬಾರಿಗೆ ಲಾಂಚ್ ಆಗಿದ್ದ ಹ್ಯುಂಡೈ ಐ10 ದೇಶದ್ಯಾಂತ ಭಾರಿ ಯಶಸ್ಸು ಸಾಧಿಸಿತ್ತು. ಈಗಾಗಲೇ 12 ಲಕ್ಷಕ್ಕೂ ಮಾಡೆಲ್‌ಗಳ ಮಾರಾಟ ಸಾಧಿಸಿರುವ ಹ್ಯುಂಡೈ ಇದೀಗ ನೂತನ iTech ಐ10 ಸ್ಪೆಷಲ್ ಅಡಿಷನ್ ಲಾಂಚ್ ಮಾಡಿವೆ.
ನೂತನ ಐಟೆಕ್ ಐ10 ಅನೇಕ ನೂತನ ಫೀಚರ್‌ಗಳನ್ನು ಹೊಂದಿರಲಿದ್ದು, ಈ ಬಗ್ಗೆ ಕಣ್ಣಾಯಿಸೋಣ...
ಇಂಟಿರಿಯರ್ ಫೀಚರ್ಸ್:
ಡ್ಯಾಶ್ ಬೋರ್ಡ್
ಡೋರ್ ಟ್ರಿಮ್ಸ್
ಎಸಿ ವೆಂಟ್ಸ್
ಸೀಟ್‌ಗೆ ರೆಡ್ ಕಲರ್ ಕವರ್
ನ್ಯೂ ಎಲೆಕ್ಟ್ರಾನಿಕ್ಸ್
ಸ್ಟೀರಿಂಗ್ ವೀಲ್‌ನಲ್ಲಿ ಬ್ಲೂಟೂತ್ ಕಂಟ್ರೋಲ್
ರಿ ವ್ಯೂ ಪಾರ್ಕಿಂಗ್ ಕ್ಯಾಮೆರಾ (ಹೈ ಎಂಡ್ ಐ20 ಹಾಗೂ ವರ್ನಾದಲ್ಲಿ ಲಭ್ಯವಿದೆ)
ಎಕ್ಸ್‌ಟೀರಿಯರ್
ಸ್ಪೆಷಲ್ ಬಾಡಿ ಗ್ರಾಫಿಕ್ಸ್
ಐಟೆಕ್ ಲೊಗೊ
ಕ್ರೈಸ್ಟಲ್ ವೈಟ್ ಹಾಗೂ ಗಾರ್ನೆಟ್ ರೆಡ್ ಬಾಡಿ ಕಲರ್
ನೂತನ ಸ್ಪೆಷಲ್ ಅಡಿಷನ್ ಐಟೆಕ್ ಐ10 1.1 ಲೀಟರ್ ಇರಾ ಹಾಗೂ 1.2 ಲೀಟರ್ ಮ್ಯಾಗ್ನಾ ಟಿಮ್ಸ್‌ಗಳಲ್ಲೂ ಲಭ್ಯವಿರಲಿದೆ. ಹಾಗಿದ್ದರೂ ಈ ವರೆಗೆ ಹ್ಯುಂಡೈ ಐ10 ಮಾದರಿಯ ದರವನ್ನು ಬಿಡುಗಡೆಗೊಳಿಸಿಲ್ಲ.
ಹ್ಯುಂಡೈ ಮೋಟಾರ್ ಇಂಡಿಯಾದಿಂದ ಚೆನ್ನೈನ ಘಟಕದಲ್ಲಿ ಉತ್ಪಾದನೆಗೊಳ್ಳುತ್ತಿರುವ ಐ10, ದಕ್ಷಿಣಪೂರ್ವ ಏಷಿಯಾ, ಯುರೋಪ್, ಆಸ್ಟ್ರೇಲಿಯಾ ಹಾಗೂ ಮೆಕ್ಸಿಕೊ ರಾಷ್ಟ್ರಗಳಿಗೂ ರಫ್ತಾಗಲಿದೆ.


Click it and Unblock the Notifications









