ದೇಶಕ್ಕೆ ಬರುತ್ತಿದೆ ಡೈನಾಮಿಕ್ ಬೆಂಝ್ ಜಿ63

ಜರ್ಮನಿಯ ಕಾರು ತಯಾರಕ ಕಂಪನಿಯಾದ ಮರ್ಸಿಡಿಸ್ ಬೆಂಝ್ 2013ನೇ ಸಾಲಿನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಹಲವಾರು ಕಾರುಗಳನ್ನು ಪರಿಚಯಿಸುವ ಯೋಜನೆ ಹಾಕಿಕೊಂಡಿದೆ. ಈ ಪೈಕಿ ಭಾರತದ ಮಾರುಕಟ್ಟೆಗೆ ಹೆಚ್ಚು ಶಕ್ತಿಯುತ ಕಾರು ಪರಿಚಯವಾಗಲಿದೆ.

ಸೆಲೆಬ್ರಿಟಿಗಳ ಪಾಲಿಗೆ ಫೇವರಿಟ್ ಎನಿಸಿಕೊಂಡಿರುವ ಈ ವಿದೇಶಿ ಕಾರು ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ದೇಶದ ಮಾರುಕಟ್ಟೆಗೆ ಆಗಮಿಸುತ್ತಿದೆ. ಇತ್ತೀಚೆಗಷ್ಟೇ ನಾವು ಕಿಮ್ ಕರ್ದಿಶಿಯಾದ ಜಿ63 ಬಗ್ಗೆ ಮಾಹಿತಿ ನೀಡಿದ್ದೇವೆ. ಇಲ್ಲಿದೆ ನೋಡಿ- ಕಿಮ್ ಕರ್ದಶಿಯಾಳ ದುಬಾರಿ ಮರ್ಸಿಡಿಸ್ ಸವಾರಿ

ಈ ಹಿಂದೆ 2012ರ ಎಪ್ರಿಲ್‌ನಲ್ಲಿ ಆಯೋಜನೆಯಾದ ಬೀಜಿಂಗ್ ಮೋಟಾರ್ ಷೋದಲ್ಲಿ ಮೊದಲ ಬಾರಿಗೆ ಮರ್ಸಿಡಿಸ್ ಜಿ63 ಎಎಂಜಿ ಕಾರನ್ನು ಮೊದಲ ಬಾರಿಗೆ ಅನಾವರಣಗೊಳಿಸಲಾಗಿತ್ತು. ಇದು ಜಿ55 ಪ್ಲಾಟ್ ಫಾರ್ಮ್‌ನಲ್ಲಿ ನಿರ್ಮಾಣವಾಗಿದೆ.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ

ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಸೈಡ್ ಮೌಂಟೆಡ್ ಎಕ್ಸ್‌ಹೋಸ್ಟ್ ಸಿಸ್ಟಂ, ಯೂನಿಕ್ ಅಲಾಯ್ ವೀಲ್ಸ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಹೊಂದಿರಲಿದೆ.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ

ಕಾರಿನ ಐಷಾರಾಮಿ ಇಂಟಿರಿಯರ್ ಭಾಗಗಳನ್ನು ನೀವು ಇಷ್ಟಪಡುವುದಾದರೆ ಖಂಡಿತವಾಗಿಯೂ ಜಿ63 ಎಎಂಜಿ ನಿಮ್ಮ ಆಕರ್ಷಣೆಗೆ ಕಾರಣವಾಗಲಿದೆ.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ

ಮುಂಬರುವ ದಿನಗಳಲ್ಲಿ ಬೆಂಝ್ ಜಿ63 ಎಎಂಜಿ ಕಾರುಗಳು ದೇಶದ ಮಾರುಕಟ್ಟೆಯಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಪಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ

ಜಿ63 ಎಎಂಜಿ ಕಾರು ಆಟೋಮ್ಯಾಟಿಕ್ ಎಎಂಜಿ ಸ್ಪೀಡ್ ಶಿಫ್ಟ್ ಪ್ಲಸ್ 7ಜಿ-ಟ್ರಾನಿಕ್ ಟ್ರಾನ್ಸ್‌ಮಿಷನ್ ಸಿಸ್ಟಂ ಹೊಂದಿದೆ.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ ಕಾರಿನ ಮತ್ತೊಂದು ಆಕರ್ಷಕ ಫೀಚರ್ ಎಂಬುದು ಇದರ ಪವರ್‌ಫುಲ್ ಎಂಜಿನ್ ಆಗಿದೆ. ಈ ಜಿ ಕ್ಲಾಸ್ ಬೆಂಝ್ ಕಾರು 5.5 ಲೀಟರ್ ವಿ8 ಬೈಟರ್ಬೊ ಎಂಜಿನ್ ಹೊಂದಿದ್ದು, ಟರ್ಕ್ಯೂ 760 ಎನ್‌ಎಂನಲ್ಲಿ 544 ಬಿಎಚ್‌ಪಿ ಉತ್ಪಾದನೆಯಾಗಲಿದೆ.

ಮರ್ಸಿಡಿಸ್ ಬೆಂಝ್ ಜಿ63 ಎಎಂಜಿ

ಒಟ್ಟಿನಲ್ಲಿ ಹೊಸ ವರ್ಷಕ್ಕೆ ಮರ್ಸಿಡಿಸ್ ಬೆಂಝ್ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುವ ತವಕದಲ್ಲಿದೆ. ಅಂದ ಹಾಗೆ ಇದರ ದರ ಬರೋಬ್ಬರಿ 1 ಕೋಟಿ ಅಸುಪಾಸಿನಲ್ಲಿರಲಿದೆ.

More from DriveSpark

Article Published On: Wednesday, January 2, 2013, 14:26 [IST]
English summary
Mercedes Benz is all set to unleash a line of new cars in 2013. We believe, one of the first cars that would hit the Indian turf would be the robust G63 AMG. The G class has emerged as a cultism among celebrities abroad
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+