2014 ಇಂಡಿಯನ್ ಗ್ರ್ಯಾನ್ ಪ್ರಿ ಎಫ್1 ರೇಸ್ ರದ್ದು
ಕ್ರೀಡಾ ಪ್ರೇಮಿಗಳಿಗೆ ಬೇಸರದ ಸುದ್ದಿಯೆಂಬಂತೆ 2014ನೇ ಸಾಲಿನ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್ ರದ್ದಾಗಿದೆ. ಫಾರ್ಮುಲಾ ಒನ್ ಮುಖ್ಯಸ್ಥ ಬೆರ್ನಿ ಎಕ್ಲೆಸ್ಟೋನ್ ಇದನ್ನು ಖಚಿತಪಡಿಸಿದ್ದಾರೆ.
ಹಾಗಿದ್ದರೂ ಕ್ರೀಡಾ ಪ್ರೇಮಿಗಳ ಈ ನಿರುತ್ಸಾಹ ತುಂಬಾ ಸಮಯದ ವರೆಗೆ ಇರಲ್ಲ. ಯಾಕೆಂದರೆ 2014ರಲ್ಲಿ ನಡೆಯಬೇಕಾಗಿದ್ದ ಎಫ್1 ರೇಸ್ ಒಂದು ವರ್ಷ ವಿಳಂಬವಾಗಿ ಅಂದರೆ 2015ರಲ್ಲಿ ಸಾಗಲಿದೆ ಎಂಬುದನ್ನು ಸಹ ಎಕ್ಲೋಸ್ಟೋನ್ ಖಚಿತಪಡಿಸಿದ್ದಾರೆ.
ಗ್ರೇಟರ್ ನೋಯ್ಡಾದ ಬುದ್ಧ ಅಂತರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ 2011ರಲ್ಲಿ ಭರ್ಜರಿ ಎಂಟ್ರಿ ಕೊಟ್ಟಿದ್ದ ಇಂಡಿನಯ್ ಗ್ರ್ಯಾನ್ ಪ್ರಿ ಎಫ್1 ರೇಸ್‌ನ ದ್ವಿತೀಯ ಆವೃತ್ತಿಯು 2015 ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಅಂದರೆ ಇದೀಗ ನಿಗದಿಯಾಗಿದ್ದ 2014 ಅಕ್ಟೋಬರ್ ಬದಲು 2015ರ ಆರಂಭದಲ್ಲಿ ಆಗಮನವಾಗಲಿದೆ.
ನಿಮಗೆಲ್ಲರಿಗೂ ತಿಳಿದಂತೆ ಆಸ್ಟ್ರೇಲಿಯಾ ಗ್ರ್ಯಾನ್ ಪ್ರಿಯೊಂದಿಗೆ ಫಾರ್ಮುಲಾ ಒನ್ ಸೀಸನ್ ಆರಂಭವಾಗುತ್ತದೆ. ಇದನ್ನು ಮಲೇಷ್ಯಾ ಹಾಗೂ ಚೀನಾ ಹಿಂಬಾಲಿಸುತ್ತವೆ. ಇದಾದ ಬಳಿಕ ಯುರೋಪ್ ಖಂಡದತ್ತ ಮುಂದುವರಿಯುವ ಎಫ್1, ಕೊನೆಗೆ ಏಷ್ಯಾದ ಇತರ ದೇಶಗಳಾದ ಸಿಂಗಾಪುರ, ಕೊರಿಯಾ, ಜಪಾನ್ ಮೂಲಕ ಭಾರತವನ್ನು ಪ್ರವೇಶಿಸುತ್ತದೆ.
ಆದರೆ ಇದೀಗ ಚೀನಾ ಗ್ರ್ಯಾನ್ ಪ್ರಿ ಜತೆಗೆ ಭಾರತವನ್ನು ಸೇರಿಸಿಕೊಳ್ಳಲು ಆಯೋಜಕರು ಯೋಜನೆಯಿರಿಸಿದ್ದಾರೆ. ಅಂದರೆ ಮುಂದಿನ ಆರು ತಿಂಗಳೊಳಗೆ ಎಫ್1 ರೇಸ್ ಭಾರತಕ್ಕೆ ಕಾಲಿಡಲಿದೆ. ಆದರೆ ಈ ಕಡಿಮೆ ಅವಧಿಯಲ್ಲಿ ಎಫ್1 ಆಯೋಜಿಸುವುದು ಕಠಿಣವಾಗಿದ್ದರಿಂದ ಒಂದು ವರ್ಷದಷ್ಟು ಮುಂದೂಡಲ್ಪಟ್ಟಿದೆ. ಅಂದ ಹಾಗೆ 2014ನೇ ಎಫ್1 ಆವೃತ್ತಿಯಲ್ಲಿ 20 ಟೂರ್ನಮೆಂಟ್‌ಗಳು ನಡೆಯುವ ಸಂಭವವಿದೆ.


Click it and Unblock the Notifications









