ಎಫ್1 ಕಾರಿನಿಂದ ಸ್ಫೂರ್ತಿ ಪಡೆದ ವಿಶಿಷ್ಟ ಶೈಲಿಯ ಓಕ್ಸ್ ಟ್ರಕ್

Written By:

ಫಾರ್ಮುಲಾ ಒನ್ ಮೋಟಾರು ಕ್ರೀಡೆಯ ಹೆಸರಾಂತ ವಿನ್ಯಾಸಗಾರ ಗಾರ್ಡನ್ ಮುರ್ರೆ ಅತಿ ನೂತನ ಓಕ್ಸ್ ಫ್ಲ್ಯಾಟ್-ಪ್ಯಾಕ್ ಟ್ರಕ್ ವಿನ್ಯಾಸಗೊಳಿಸಿದ್ದಾರೆ. ಇದು ಆಫ್ರಿಕಾ ಸೇರಿದಂತೆ ಏಷ್ಯಾ ಖಂಡದ ಭೂಪ್ರದೇಶಕ್ಕೆ ಹೆಚ್ಚು ಸೂಕ್ತವೆನಿಸಲಿದೆ.

ಅಷ್ಟೇ ಯಾಕೆ ಜಗತ್ತಿನ ಮೊತ್ತ ಮೊದಲ ಫ್ಲ್ಯಾಟ್-ಪ್ಯಾಕ್ ವ್ಯಾನ್ (ಚಪ್ಪಟೆ) ಎಂಬ ಗೌರವಕ್ಕೆ ಓಕ್ಸ್ ಪಾತ್ರವಾಗಿದೆ. ಅಲ್ಲದೆ ಕೇವಲ 12 ತಾಸಿನೊಳಗೆ ಸಂಪೂರ್ಣವಾಗಿ ಜೋಡಿಸಬಹುದಾಗಿದೆ.

To Follow DriveSpark On Facebook, Click The Like Button
ಓಕ್ಸ್ ಟ್ರಕ್

ಆಫ್ರಿಕಾದ ಬಹುದೂರದ ಪ್ರದೇಶಗಳನ್ನು ಓಕ್ಸ್ ಗುರಿ ಮಾಡಲಿದ್ದು, ಕಠಿಣ ಭೂಪ್ರದೇಶಗಳಲ್ಲಿ ಆಹಾರ ಹಾಗೂ ಇತರೆ ಸಾಮಾಗ್ರಗಳನ್ನು ಸಾಗಿಸಲು ಬಳಕೆ ಮಾಡಬಹುದಾಗಿದೆ.

ಇದು ಮುರ್ರೆ ಅವರ ಎಫ್1 ಸೂಪರ್ ಕಾರಿನಷ್ಟು ವೇಗವನ್ನು ಕಾಪಾಡಿಕೊಂಡಿರಲಾರದು. ಆದರೂ ಹಗುರ ಭಾರದ ಈ ಟ್ರಕ್ ಖಂಡಿತವಾಗಿಯೂ ಸಾರಿಗೆ ಸಮಸ್ಯೆಗಳನ್ನು ನಿವಾರಿಸಲಿದೆ.

ಓಕ್ಸ್ ಟ್ರಕ್ ವಿನ್ಯಾಸದಲ್ಲಿ ಸರಳ ತಂತ್ರಗಾರಿಕೆಯನ್ನು ಬಳಕೆ ಮಾಡಲಾಗಿದೆ. ಜಾಗತಿಕ ವೆಹಿಕಲ್ ಟ್ರಸ್ಟ್ ಕಾರ್ಯಕ್ರಮದಲ್ಲೂ ಪ್ರದರ್ಶನ ಕಾಣುವ ಮೂಲಕ ಗಮನ ಸೆಳೆದಿದೆ.

ಟು ವೀಲ್ ಡ್ರೈವ್ ಚಾಲನಾ ವ್ಯವಸ್ಥೆಯನ್ನು ಹೊಂದಿರುವ ಹೊರತಾಗಿಯೂ ಓಕ್ಸ್ ಸಂಪೂರ್ಣ ಆಫ್ ರೋಡ್ ಸಾಮರ್ಥ್ಯವನ್ನು ಪೆಡದುಕೊಂಡಿದೆ. ಇನ್ನು ಹಿಂದುಗಡೆ ಬೆಂಚ್ ಸೀಟು ವ್ಯವಸ್ಥೆಯನ್ನು ಕೊಡಲಾಗಿದೆ.

ಎರಡು ಟನ್ ಭಾರವನ್ನು ಹೊತ್ತೊಯ್ಯಬಲ್ಲ ಓಕ್ಸ್ ಟ್ರಕ್ ನಲ್ಲಿ 13 ಮಂದಿ ಪ್ರಯಾಣಿಕರಿಗೂ ಆರಾಮವಾಗಿ ಸಂಚರಿಸಬಹುದಾಗಿದೆ. ಪ್ರಮುಖವಾಗಿಯೂ ಅಭಿವೃದ್ಧಿ ಹೊಂದುತ್ತಿರುವ ದೇಶವನ್ನು ಗುರಿ ಮಾಡಿದೆ.

English summary
Meet OX: The World's First Flat-Pack Truck
Story first published: Friday, September 9, 2016, 14:03 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X