ಫಾರ್ಮುಲಾ ಒನ್: ಲೂಯಿಸ್‌ ಹ್ಯಾಮಿಲ್ಟನ್‌ ಮುಡಿಗೆ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್

Written By:

ಮರ್ಸಿಡಿಸ್ ಕಾರು ಚಾಲಕ ಪ್ರಖ್ಯಾತ ರೇಸರ್ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ ಗೆಲ್ಲುವ ಮೂಲಕ ಮೊದಲ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

To Follow DriveSpark On Facebook, Click The Like Button
ಫಾರ್ಮುಲಾ ಒನ್: ಲೂಯಿಸ್‌ ಹ್ಯಾಮಿಲ್ಟನ್‌ ಮುಡಿಗೆ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್

ಪರಿಪೂರ್ಣವಾದ ಡ್ರೈವ್‌ಗೆ ಹೆಸರುವಾಸಿಯಾಗಿರುವ ಪ್ರಖ್ಯಾತ ಫಾರ್ಮುಲಾ ಒನ್ ಚಾಲಕ ಲೂಯಿಸ್‌ ಹ್ಯಾಮಿಲ್ಟನ್‌ ಅವರು ಮತ್ತೊಬ್ಬ ಹೆಸರುವಾಸಿ ಚಾಲಕರಾದ ಸೆಬಾಸ್ಟಿಯನ್ ವೆಟ್ಟೆಲ್ ಅವರನ್ನು ಕೇವಲ ಒಂದು ಹಂತ ಮುನ್ನಡೆ ಪಡೆದು ಪ್ರತಿಷ್ಠಿತ ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್ ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಫಾರ್ಮುಲಾ ಒನ್: ಲೂಯಿಸ್‌ ಹ್ಯಾಮಿಲ್ಟನ್‌ ಮುಡಿಗೆ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್

ಪ್ರಾರಂಭದಿಂದಲೂ ಸಹ ಮೇಲುಗೈ ಸಾಧಿಸುತ್ತಲೇ ಚಾಲನೆ ಮುಂದುವರೆಸಿದ ಹ್ಯಾಮಿಲ್ಟನ್ ಅವರು ಕೊನೆಗೂ ತಮ್ಮ ಶ್ರಮಕ್ಕೆ ತಕ್ಕಂತೆ ಪ್ರತಿಫಲ ಪಡೆದರು ಎನ್ನಬಹುದು.

ಫಾರ್ಮುಲಾ ಒನ್: ಲೂಯಿಸ್‌ ಹ್ಯಾಮಿಲ್ಟನ್‌ ಮುಡಿಗೆ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್

ಹ್ಯಾಮಿಲ್ಟನ್ ತಂಡದ ಮತ್ತೊಬ್ಬ ಚಾಲಕ ವಾಲ್ಟೆರಿ ಬಾಟಾಸ್ ಅವರು ಒಂಬತ್ತನೆಯ ಸ್ಥಾನದಲ್ಲಿ ಓಟ ಪ್ರಾರಂಭಿಸಿ, ಅತ್ಯದ್ಭುತ ಎಂಬಂತೆ ಎರಡನೇ ಸ್ಥಾನ ಪಡೆದು ಎಲ್ಲರ ಗಮನ ಸೆಳೆದರು.

ಫಾರ್ಮುಲಾ ಒನ್: ಲೂಯಿಸ್‌ ಹ್ಯಾಮಿಲ್ಟನ್‌ ಮುಡಿಗೆ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್

ಓಟದ ಕೊನೆಯಲ್ಲಿ ಸೆಬಾಸ್ಟಿಯನ್ ವೆಟ್ಟೆಲ್ ಅವರ ಕಾರು ಕೈಕೊಟ್ಟ ಪರಿಣಾಮ ಈ ರೇಸ್‌ನಲ್ಲಿ ಕೊಂಚ ಮಟ್ಟಿನ ಹಿನ್ನಡೆ ಅನುಭವಿಸಿದರು. ಅವರ ಕಾರಿನ ಚಕ್ರಗಳು ದೊಡ್ಡ ಮಟ್ಟದ ಲಾಕ್ ಅಪ್ ಕಾರಣದಿಂದ ವೇಗ ಹೆಚ್ಚಿಸಿಕೊಳ್ಳಲು ತಡವರಿಸಿದ್ದರ ಪರಿಣಾಮ ವೆಟ್ಟಲ್ ಅವರು ಹಿಂದೆ ಉಳಿಯಬೇಕಾಯಿತು.

ಫಾರ್ಮುಲಾ ಒನ್: ಲೂಯಿಸ್‌ ಹ್ಯಾಮಿಲ್ಟನ್‌ ಮುಡಿಗೆ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್

ರೆಡ್ ಬುಲ್ ಚಾಲಕರಾದ ಮ್ಯಾಕ್ಸ್ ವರ್ಸ್ಟಾಪೆನ್ ಮತ್ತು ಡೇನಿಯಲ್ ರಿಸ್ಕಿರ್ಡೊ ಕ್ರಮವಾಗಿ ನಾಲ್ಕನೇ ಮತ್ತು ಐದನೇ ಸ್ಥಾನ ಗಳಿಸಿದರು ಮತ್ತು ಫೋರ್ಸ್ ಇಂಡಿಯಾ ಜೋಡಿ ಎಸ್ಟೆಬಾನ್ ಓಕಾನ್ ಮತ್ತು ಸೆರ್ಗಿಯೋ ಪೆರೆಜ್ ಕ್ರಮವಾಗಿ ಎಂಟನೇ ಮತ್ತು ಒಂಬತ್ತನೇ ಸ್ಥಾನದಲ್ಲಿ ತೃಪ್ತಿ ಪಟ್ಟುಕೊಂಡರು.

ಫಾರ್ಮುಲಾ ಒನ್: ಲೂಯಿಸ್‌ ಹ್ಯಾಮಿಲ್ಟನ್‌ ಮುಡಿಗೆ ಬ್ರಿಟಿಷ್ ಗ್ರಾಂಡ್ ಪ್ರಿಕ್ಸ್

ಎಂಜಿನ್ ಘಟಕಗಳು ಮತ್ತು ಗೇರ್‌ಬಾಕ್ಸ್ ಬದಲಾವಣೆಗಳ ಕಾರಣದಿಂದಾಗಿ ಪೆನಾಲ್ಟಿ ಪಡೆದು ರಿಕಿಯಾರ್ಡೊ ಅವರು 19ನೇ ಸ್ಥಾನದಿಂದ ಪ್ರಾರಂಭಿಸಿ ಆಶ್ಚರ್ಯಕರ ರೀತಿಯಲ್ಲಿ ಚೇತರಿಕೆ ಕಂಡರು.

English summary
Mercedes driver Lewis Hamilton produced a perfect drive to win the British Grand Prix.
Please Wait while comments are loading...

Latest Photos