ಐಪಿಎಲ್ ಪಂದ್ಯ ಬಳಿಕ ಬಿಎಂಟಿಸಿ ವಿಶೇಷ ಬಸ್ ಸೇವೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್ ಕ್ರಿಕೆಟ್ ಪಂದ್ಯದ ಬಳಿಕ ನಗರದ ವಿವಿಧ ಭಾಗಗಳಿಗೆ ತೆರಳುವ ಜನರಿಗಾಗಿ ಬಿಎಂಟಿಸಿ ವಿಶೇಷ ಬಸ್ ಸೇವೆ ಒದಗಿಸುತ್ತಿದೆ.
ಇದರಂತೆ ಸಾರ್ವಜನಿಕರು ಗರಿಷ್ಠ ಪ್ರಯೋಜನ ಪಡೆಯಲು ಕೋರಲಾಗಿದೆ. ಕಳೆದ ದಿನ ನಡೆದ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ರೋಚಕವಾಗಿ ಮಣಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಭಾರಂಭ ಮಾಡಿಕೊಂಡಿತ್ತು.
ಐಪಿಎಲ್ ಪಂದ್ಯ ಬಳಿಕ ಬಿಎಂಟಿಸಿ ವಿಶೇಷ ಬಸ್ ಸರ್ವಿಸ್ ಇಂತಿದೆ:
- ಜಿ1- ಮಾಣೇಕ್ ಷಾ ಪೆರೇಡ್ ಗ್ರೌಂಡ್‌ನಿಂದ ಕಾಡುಗೋಡಿ ಬಸ್ ನಿಲ್ಧಾಣ
- ಜಿ2- ಮೇಯೋಹಾಲ್‌ನಿಂದ ಸರ್ಜಾಪುರ
- ಜಿ3- ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ
- ಜಿ5- ಚಿನ್ನಸ್ವಾಮಿ ಸ್ಟೇಡಿಯಂನಿಂದ ಕಗ್ಗಲೀಪುರ
- ಜಿ6- ಚಿನ್ನಸ್ವಾಮಿ ಸ್ಟೇಡಿಯಂನಿಂದ ಕೇಂಗೇರಿ ಕೆಎಚ್‌ಬಿ ಕ್ವಾಟ್ರಸ್
- ಜಿ7- ಜಿಆರ್‌ವಿ ಪೆರೇಡ್ ಗ್ರೌಂಡ್‌ನಿಂದ ಜನಪ್ರಿಯ ಟೌನ್‌ಶಿಪ್
- ಜಿ8- ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ನೆಲಮಂಗಲ
- ಜಿ9- ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಯಲಹಂಕ ಉಪನಗರ
- ಜಿ10- ಬಿಆರ್‌ವಿ ಪೆರೇಡ್ ಗ್ರೌಂಡ್‌ನಿಂದ ಆರ್.ಕೆ. ಹೆಗಡೆ ನಗರ
- ಜಿ11- ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬಾಗಲೂರು
- ಜಿ12- ಮೇಯೋಹಾಲ್‌ನಿಂದ ಹೊಸಕೋಟೆ.
ಇವನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ; ಟ್ರಾಫಿಕ್ ನಿರ್ಬಂಧ


Click it and Unblock the Notifications









