2018ರ ವೇಳೆಗೆ ಜಾಗ್ವಾರ್‌ನಿಂದ 40 ಮಾಡೆಲ್ ಬಿಡುಗಡೆ

By Nagaraja

ದೇಶದ ಅತಿದೊಡ್ಡ ವಾಹನ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಒಡೆತನದಲ್ಲಿರುವ ಬ್ರಿಟನ್‌ನ ಪ್ರಖ್ಯಾತ ಜಾಗ್ವಾರ್ ಲ್ಯಾಂಡ್ ಲೋವರ್, 2018ರ ವೇಳೆಗೆ 40 ನೂತನ ಕಾರು ಮಾಡೆಲ್‌ಗಳನ್ನು ಲಾಂಚ್ ಮಾಡಲಿರುವುದಾಗಿ ತಿಳಿಸಿದೆ. ಅಲ್ಲದೆ 2015ರ ವೇಳೆಗೆ ಕಾರು ಉತ್ಪಾದನಾ ಸಂಖ್ಯೆಯನ್ನು 7,50,000
ಕ್ಕೆ ಏರಿಸುವ ಇರಾದೆಯನ್ನು ಹೊಂದಿದೆ.

ಜಾಗ್ವಾರ್‌ನ ಈ ಎಲ್ಲ ಮಾಡೆಲ್‌ಗಳು ಸಣ್ಣ ಲಗ್ಷುರಿ ಕಾರು ಸೆಗ್ಮೆಂಟ್‌ನಲ್ಲಿ ಲಾಂಚ್ ಆಗಲಿದೆ. ಕಳೆದ ತಿಂಗಳಲ್ಲಿನ ಕಾರು ವೃದ್ಧಿ ದರವು ಜಾಗ್ವಾರ್ ಉತ್ತೇಜನ ನೀಡುವಲ್ಲಿ ಯಶಸ್ವಿಯಾಗಿತ್ತು.

ಜುಲೈ ತಿಂಗಳಲ್ಲಿ ಜಾಗ್ವಾರ್ ಶೇಕಡಾ 21ರಷ್ಟು ವೃದ್ಧಿ ದಾಖಲಿಸಿದೆ. ಈ ಪೈಕಿ ಜಾಗ್ವಾರ್ 6,157 ಹಾಗೂ ಲ್ಯಾಂಡ್ ರೋವರ್ 25,454 ಯುನಿಟ್ ಮಾರಾಟ ಸಾಧಿಸಿವೆ. ಈ ಮೂಲಕ ಕಳೆದ ವರ್ಷಕ್ಕೆ ಹೋಲಿಸಿದಾಗ ಈ ಬಾರಿ ಅನುಕ್ರಮವಾಗಿ ಶೇಕಡಾ 65 ಹಾಗೂ 14ರಷ್ಟು ಏರಿಕೆ ಸಾಧಿಸಿದೆ.

ಜಾಗ್ವಾರ್ ಕಾರುಗಳಿಗೆ ಚೀನಾದಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಕಾರು ರಫ್ತಿಗೂ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ನೂತನ ಮಾಡೆಲ್ ಲಾಂಚ್ ಮಾಡುವುದರೊಂದಿಗೆ ಬ್ರಿಟನ್ ಜನತೆಗೆ ಉದ್ಯೋಗ ಸೃಷ್ಟಿ ಮಾಡುವ ಇರಾದೆಯನ್ನು ಜಾಗ್ವಾರ್ ಹೊಂದಿದೆ.

More from DriveSpark

Article Published On: Wednesday, August 14, 2013, 14:56 [IST]
English summary
JLR Chief Ralf Speth has confirmed plans to introduce 40 new models by 2018 and to double car production to 750,000 units by 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+