ಮುಂದಿನ ವರ್ಷ ಬರಲಿದೆಯಂತೆ ಬೇಬಿ ಜಾಗ್ವಾರ್

ಇದೀಗ ಮತ್ತದೇ ಹೆಸರು ಉಲ್ಲೇಖಿಸಲು ಕಾರಣ ಏನೆಂದರೆ, ನಿಕಟ ಭವಿಷ್ಯ ಜಾಗ್ವಾರ್ ಬೇಬಿ ಅಲ್ಲಲ್ಲ ಬೇಬಿ ಜಾಗ್ವಾರ್ ಆಗಮನವಾಗಲಿದೆಯಂತೆ. ಮೂಲಗಳ ಪ್ರಕಾರ ಹೊಸ ಬೇಬಿ ಜಾಗ್ವಾರ್ 2014 ವರ್ಷಾಂತ್ಯದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಅಂದ ಹಾಗೆ ಎರಡು ವರ್ಷಗಳ ಹಿಂದೆ ಕಂಪನಿಯು ಬೇಬಿ ಜಾಗ್ವಾರ್ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಅಲ್ಲದೆ ಈಗಾಗಲೇ ಬ್ರಿಟನ್ ಸೇರಿದಂತೆ ಸ್ವೀಡನ್‌ನಲ್ಲೂ ಟೆಸ್ಟಿಂಗ್ ಕಾರ್ಯ ಮುಗಿಸಿದೆ.
ಹೆಸರಿನಲ್ಲೇ ಸೂಚಿಸಿರುವಂತೆಯೇ ಬೇಬಿ ಜಾಗ್ವಾರ್ ಹೆಚ್ಚು ಇಂಧನ ದಕ್ಷತೆ ಹಾಗೂ ನಿರ್ವಹಣೆಯನ್ನು ಹೊಂದಿರಲಿದೆ. ಹಾಗೆಯೇ ಇತರ ಜಾಗ್ವಾರ್ ಆವೃತ್ತಿಗಳಿಗೆ ಹೋಲಿಸಿದರೆ ದರದಲ್ಲೂ ಕಡಿತವುಂಟಾಗಲಿದ್ದು, 20ರಿಂದ 25 ಲಕ್ಷ ರು.ಗಳ ಅಸುಪಾಸಿನಲ್ಲಿ ಲಭ್ಯವಾಗಲಿದೆ. ಈ ಮೂಲಕ ಬಿಎಂಡಬ್ಲ್ಯು, ಆಡಿ ಹಾಗೂ ಮರ್ಸಿಡಿಸ್ ಬೆಂಝ್ ಎಂಟ್ರಿ ಲೆವೆಲ್ ಕಾರುಗಳಿಗೆ ಪೈಪೋಟಿ ನೀಡಲು ಜಾಗ್ವಾರ್‌ನಿಂದ ಸಾಧ್ಯವಾಗಲಿದೆ.


Click it and Unblock the Notifications








