ಹ್ಯಾಪಿ ಡ್ರೈವಿಂಗ್; ನೀವ್ಯಾಕೆ ಡ್ರೈವ್ ಸ್ಪಾರ್ಕ್ ಇಷ್ಟಪಡಬೇಕು?
ಕನ್ನಡದ ಪ್ರಪ್ರಥಮ ವಾಹನ ವೆಬ್‌ಸೈಟ್ ಆಗಿರುವ kannada.drivespark.com ತನ್ನ ಜೈತ್ರಯಾತ್ರೆ ಮುಂದುವರಿಸಿದ್ದು, ಓದುರಿಗರಿಗೆ ಆಟೋಮೊಬೈಲ್ ಜಗತ್ತಿನ ಸುದ್ದಿ ವಿಶ್ಲೇಷಣೆಯನ್ನು ವರದಿ ಮಾಡುವುದರಲ್ಲಿ ಯಶಸ್ಸು ಕಂಡಿದೆ.
ಕಾರು-ಬೈಕ್ ಪ್ರಿಯರ ಅಚ್ಚುಮೆಚ್ಚಿನ ಜಾಲತಾಣವಾಗಿರುವ ಕನ್ನಡ ಡ್ರೈವ್ ಸ್ಪಾರ್ಕ್ ಈಗಾಗಲೇ ಒಂದರ ವಸಂತವನ್ನು ದಾಟಿದ್ದು, ರಾಜ್ಯ, ದೇಶ ಸೇರಿದಂತೆ ಅಂತರಾಷ್ಟ್ರೀಯ ವಾಹನ ಸುದ್ದಿ ವಿಶೇಷಗಳನ್ನು ವಿಸೃತವಾಗಿ ಪ್ರಸ್ತುತ ಪಡಿಸುವುದು ನಮ್ಮ ಧ್ಯೇಯವಾಗಿದೆ.
ಓದುಗರ ಹಿತದೃಷ್ಟಿಯಲ್ಲಿಟ್ಟುಕೊಂಡು ನಾವಿದನ್ನು ನಾಲ್ಕು ಚಕ್ರದ ವಾಹನ ಹಾಗೂ ದಿಚಕ್ರ ವಾಹನ ಎಂಬಿ ವಿಭಾಗಗಳನ್ನು ತೆರೆದಿದ್ದೇವೆ. ಇದರ ಹೊರತಾಗಿ ರೋಚಕ ಸುದ್ದಿಗಳನ್ನು ಹೊಂದಿರುವ ಆಫ್ ಬೀಟ್, ಆಟೋ ಶೋ ಹಾಗೂ ವಾಹನ ಸಲಹೆ ವಿಭಾಗಗಳನ್ನು ಓದುಗರ ಗಮನ ಸೆಳೆಯುತ್ತಿದೆ. ಪ್ರತಿಯೊಂದು ವಿಭಾಗದ ಒಳಗಡೆ ಸಬ್ ಕ್ಯಾಟಗರಿ ಇದ್ದು ಇದು ನೇರವಾಗಿ ಆ ನಿರ್ದಿಷ್ಟ ಪುಟ ತೆರೆದುಕೊಳ್ಳಲು ನೆರವಾಗಲಿದೆ.

ಇನ್ನು ಲೇಟೆಸ್ಟ್ ಸುದ್ದಿ ಪಡೆಯುವುದು ಸುಲಭ
ನೀವು ನೇರವಾಗಿ ಕನ್ನಡ ಡ್ರೈವ್ ಸ್ಪಾರ್ಕ್ ಹೋಮ್ ಪೇಜ್‌ಗೆ ಭೇಟಿ ಕೊಟ್ಟರೆ ತಾಜಾ ವಾಹನ ಸುದ್ದಿಗಳನ್ನು ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು. ನಮ್ಮ ಟ್ವಿಟರ್ ಪೇಜ್ ಅನುಯಾಯಿ ಆಗುವ ಮೂಲಕವೂ ಲೇಟೆಸ್ಟ್ ಸುದ್ದಿ ಪಡೆಯಬಹುದು.

ಫೋರ್ ವೀಲರ್-ಟು ವೀಲರ್
ಕಾರು ಅಥವಾ ಬೈಕ್ ಬಗ್ಗೆ ಮಾಹಿತಿ ಪ್ರತ್ಯೇಕವಾಗಿ ಪಡೆಯಲು ಈ ಪೇಜ್ ಕ್ಲಿಕ್ಕಿಸಿದರೆ ಸಾಕು. ಇನ್ನು ಮಾರುತಿ ಸುಜುಕಿಗಳಂತಹ ನಿರ್ದಿಷ್ಟ ಕಾರು ಅಥವಾ ಬೈಕ್ ಬ್ರಾಂಡ್ ಅಗತ್ಯವಿದ್ದಲ್ಲಿ ಬದಿಯಲ್ಲಿ ಕೊಡಲಾಗಿರುವ ಟ್ಯಾಗ್ ಕ್ಲಿಕ್ಕಿಸಿರಿ...

ಆಫ್ ಬೀಟ್- ರೋಚಕ ಸುದ್ದಿಗಳ ಶೇಖರಣೆ
ವಾಹನ ಜಗತ್ತಿನಲ್ಲಿ ಸಂಭವಿಸುವ ಚಿತ್ರ ವಿಚಿತ್ರ ರೋಚಕ ಸುದ್ದಿಗಳ ದೊಡ್ಡ ಶೇಖರಣೆಯನ್ನು ಆಫ್ ಬೀಟ್ ಸೆಕ್ಷನ್ ತೆರೆದಿಟ್ಟುಕೊಳ್ಳಲಿದೆ. ಇಲ್ಲಿ ನಿಮ್ಮ ನೆಚ್ಚಿನ ತಾರೆಯರ ಕಾರು-ಬೈಕ್ ಲೋಕವನ್ನು ಅರಿಯಬಹುದು.

ವಾಹನ ಸಲಹೆ
ತಲೆ ಬುಡ ಗೊತ್ತಿರದ ಹೊರತು ನಾವು ಯಾವುದೇ ವಿಚಾರಕ್ಕೆ ಕೈಹಾಕಬಾರದು. ಡ್ರೈವಿಂಗ್ ಕೂಡಾ ಅಷ್ಟೇ ಸ್ವಲ್ಪನೂ ತಪ್ಪಿದರೆ ಅಪರಾಧ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ವಾಹನ ಜಗತ್ತಿನ ಅಗತ್ಯ ಸಲಹೆ ಸೂಚನೆಗಳನ್ನು ಡ್ರೈವ್ ಸ್ಪಾರ್ಕ್ ನಿಮ್ಮ ಮುಂದಿಡಲಿದೆ.

ಆಟೋ ಶೋ
ಜಗತ್ತಿನ ಯಾವುದೇ ಮೂಲೆ ಮೂಲೆಗಳಲ್ಲಿ ಆಗುವ ವಾಹನ ಪ್ರದರ್ಶನ ಮೇಳಗಳನ್ನು ಚಾಚು ತಪ್ಪದೇ ನಮ್ಮ ಡ್ರೈವ್ ಸ್ಪಾರ್ಕ್ ತಂಡ ನಿಮ್ಮ ಮುಂದಿಟ್ಟಲಿದೆ. ಹಾಗೆಯೇ ಇಲ್ಲಿ ಹೊಸ ಕಾನ್ಸೆಪ್ಟ್ ಕಾರುಗಳ ಅನಾವರಣವಾಗಲಿದೆ. ಇದಕ್ಕಾಗಿ ಮೈ ಚಳಿ ಬಿಟ್ಟು ಈ ಪುಟಕ್ಕೆ ಭೇಟಿ ಕೊಡಿರಿ.

ಹೊಸ ಕಾರು-ಹಳೆ ಕಾರು ಖರೀದಿ ಸೇಲ್ಸ್
ನೀವು ಹೊಸ ಕಾರನ್ನು ಕೊಂಡುಕೊಳ್ಳಲು ಬಯಸಿದ್ದೇ ಆದ್ಧಲ್ಲಿ ಅಥವಾ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಚ್ಛಿಸಿದ್ದಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ರಿಸರ್ಚ್ ಪೇಜ್ ನಿಮಗೆ ನೆರವು ಮಾಡಲಿದೆ. ಇನ್ನು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಹಾಗೂ ಮಾರಾಟಕ್ಕೂ ಇಲ್ಲಿ ಮುಕ್ತ ಅವಕಾಶವಿದೆ.

ಫೋಟೊ ಗ್ಯಾಲರಿ
ಇಷ್ಟಕ್ಕೂ ನೀವು ಸಂತೃಪ್ತರಾಗದಿದ್ದರೆ ನಮ್ಮ ಫೋಟೊ ಕಲೆಕ್ಷನ್ ಪೇಜ್ ನಿಮ್ಮ ಕಣ್ಮನ ತನಿಸುವಲ್ಲಿ ಖಂಡಿತ ನೆರವಾಗಲಿದೆ. ಆಂಗ್ಲ, ಹಿಂದಿ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ದ್ರಾವಿಡ ಭಾಷೆಗಳಲ್ಲಿ (ಕನ್ನಡ, ಮಳೆಯಾಳ, ತಮಿಳು, ತೆಲುಗು) ಡ್ರೈವ್ ಸ್ಪಾರ್ಕ್ ನೀವು ಓದಬಹುದು. ಇದೀಗ ಸಲಹೆ ಸೂಚನೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ. ಖಂಡಿತವಾಗಿಯೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು.


Click it and Unblock the Notifications








