ಪರಿಪೂರ್ಣ ಆಟೋಮೊಬೈಲ್ ವೆಬ್‌ಸೈಟ್‌ಗೆ ಭೇಟಿ ಕೊಟ್ರಾ?

Posted By:

ಕನ್ನಡ ಕಾರು-ಬೈಕ್ ಪ್ರಿಯರ ಅಚ್ಚುಮೆಚ್ಚಿನ ಜಾಲತಾಣವಾಗಿರುವ ಕನ್ನಡ ಡ್ರೈವ್ ಸ್ಪಾರ್ಕ್ ಇದೀಗ ಹೊಸ ರೂಪ ಪಡೆದುಕೊಂಡಿದೆ. ಕನ್ನಡ ಡ್ರೈವ್ ಸ್ಪಾರ್ಕ್ ಇದೀಗ ಒಂದರ ಹರೆಯ. ಇದರಂತೆ ವಿನ್ಯಾಸದಲ್ಲೂ ಬದಲಾವಣೆ ತರಲಾಗಿದೆ.

ಹೊಸ ವರ್ಷದಲ್ಲಿ ಅನೇಕ ಹೊಸ ವಿಚಾರಗಳನ್ನು ರೂಢಿಸಿಕೊಳ್ಳುವುದು ಅನೇಕರ ಹಂಬಲವಾಗಿರುತ್ತದೆ. ಅದೇ ರೀತಿ ಆಟೋ ಮೊಬೈಲ್ ಜಗತ್ತಿನಲ್ಲಿ ಇಂಗ್ಲಿಂಷ್, ಹಿಂದಿ ಸೇರಿದಂತೆ ನಾಲ್ಕು ಪ್ರಾಂತೀಯ ಭಾಷೆಗಳಲ್ಲಿ ಆರಂಭವಾಗಿರುವ ಡ್ರೈವ್ ಸ್ಪಾರ್ಕ್ ಕೂಡಾ ಹೊಸ ವಿನ್ಯಾಸ ಪಡೆದುಕೊಂಡಿದೆ.

ಪ್ರಮುಖವಾಗಿಯೂ ಕಾರು ಹಾಗೂ ಬೈಕ್ ಪ್ರಿಯರ ವಿಚಾರಗಳನ್ನು ಮನಗಂಡು ಹೊಸ ಪುಟವನ್ನು ವಿನ್ಯಾಸಗೊಳಿಸಲಾಗಿದೆ. ಇದು ಒಂದೇ ನೋಟದಲ್ಲಿಯೇ ಸಂಪೂರ್ಣ ಮಾಹಿತಿಗಳನ್ನು ಓದುಗರಿಗೆ ನೀಡಲಿದೆ.

ಪರಿಪೂರ್ಣ ಆಟೋಮೊಬೈಲ್ ವೆಬ್‌ಸೈಟ್ ಎಂದೆನಿಸಿಕೊಂಡಿರುವ ಕನ್ನಡ ಡ್ರೈವ್ ಸ್ಪಾರ್ಕ್‌ನ ಹೆಡರ್ ಲೈನ್‌ನಲ್ಲಿ ನಾಲ್ಕು ಚಕ್ರದ ವಾಹನ, ದ್ವಿಚಕ್ರ ವಾಹನ, ಆಫ್ ಬೀಟ್, ಆಟೋ ಶೋ, ವಾಹನ ಸಲಹೆ, ರಿಸರ್ಚ್, ಜಾಹೀರಾತು ಹಾಗೂ ಫೋಟೋ ಸೆಕ್ಷನ್‌ ವಿಭಾಗಗಳಿದ್ದು ಇದು ಒಂದೇ ಕ್ಲಿಕ್‌ನಲ್ಲಿ ತಾಜಾ ಮಾಹಿತಿ ಒದಗಿಸಲಿದೆ.

ಇದರ ಕೆಳಗಡೆ ಸ್ಲೈಡರ್‌ನಲ್ಲಿ ಪ್ರಮುಖ ಸುದ್ದಿ, ಕಾರು ಸದ್ದು, ಬೈಕ್ ಸುದ್ದಿ, ವಿಮರ್ಶೆ ಹಾಗೂ ಫೋಟೊ ಫೀಚರ್ ವಿಭಾಗಗಳನ್ನು ಕೊಡಲಾಗಿದೆ. ಇವೆಲ್ಲವೂ ಆಟೋ ಮೊಬೈಲ್ ಜಗತ್ತಿನ ಬಗ್ಗೆ ನಿಮ್ಮ ಕ್ರೇಜ್ ಹೆಚ್ಚಿಸಲಿದೆ.

ಇನ್ನು ಫೋರ್ ವೀಲರ್ ಹಾಗೂ ಟು ವೀಲರ್ ಗ್ಯಾರೇಜ್ ನಿಮ್ಮನ್ನು ರಿಸರ್ಚ್ ಪೇಜ್‌ಗೆ ಕೊಂಡೊಯ್ಯಲಿದೆ. ಇಲ್ಲಿ ನೀವು ನಿಮ್ಮ ಕಾರು, ಬೈಕ್ ಸಂಶೋಧನೆಯನ್ನು ಮಾಡಬಹುದು. ಹಾಗೆಯೇ ಜಾಹೀರಾತಿಗೆ ತೆರಳಿದರೆ ಸೆಕೆಂಡ್ ಹ್ಯಾಂಡ್ ಕಾರು ಹಾಗೂ ಬೈಕ್ ಬಗೆಗಿನ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

ಫೋಟೋ ಗ್ಯಾಲರಿ ಸಹ ಸದ್ಯದಲ್ಲೇ ಪರಿಷ್ಕತಗೊಳ್ಳಲಿದ್ದು, ವೀಡಿಯೋ ಕೂಡಾ ಸೇರ್ಪಡೆಯಾಗಲಿದೆ. ವಿಮರ್ಶೆ ಹಾಗೂ ವಾಹನ ಸಲಹಾ ವಿಭಾಗಗಳು ನಿಮ್ಮ ಫೇವರಿಟ್ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆಯೇ ಫೇಸ್‌ಬುಕ್, ಟ್ವಿಟರ್ ಹಾಗೂ ಗೂಗಲ್ ಪ್ಲಸ್ ಪೇಜ್‌ಗಳನ್ನು ನೀಡಲಾಗಿದೆ. ಅಲ್ಲಿಗೆ ತೆರಳಿ ಲೈಕ್ ಬಟನ್ ಒತ್ತಿದರೆ ನಮ್ಮ ಸಾಮಾಜಿಕ ತಾಲಜಾಣದ ಅನುಯಾಯಿಯಾಗಬಹುದು.

ಆಟೋ ಮೊಬೈಲ್ ಸುದ್ದಿಗಳನ್ನು ಇನ್ನಿತರ ಭಾಷೆಗಳಲ್ಲೂ ಓದಬಯಸುವುದಾದರೆ ಅದಕ್ಕೂ ಆಪ್ಷನ್ ಕಲ್ಪಿಸಿಕೊಡಲಾಗಿದೆ. ಒಟ್ಟಿನಲ್ಲಿ ಹೊಸ ವರ್ಷಕ್ಕೆ ನೂತನ ಲುಕ್ ಪಡೆದುಕೊಂಡಿರುವ ಡ್ರೈವ್ ಸ್ಪಾರ್ಕ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ವ್ಯಕ್ತಪಡಿಸಿರಿ...

ಪರಿಪೂರ್ಣ ಆಟೋಮೊಬೈಲ್ ವೆಬ್‌ಸೈಟ್

ಪರಿಪೂರ್ಣ ಆಟೋಮೊಬೈಲ್ ವೆಬ್‌ಸೈಟ್

ಈ ಹಿಂದಿದ್ದ ನಾಲ್ಕು ಚಕ್ರದ ವಾಹನ, ದ್ವಿಚಕ್ರ ವಾಹನ ಹಾಗೂ ವಾಹನ ಸಲಹೆ ಸೇರಿದಂತೆ ಆಫ್ ಬೀಟ್ ಹಾಗೂ ಆಟೋ ಶೋ ಹೆಚ್ಚುವರಿ ವಿಭಾಗಗಳನ್ನು ಸೇರಿಸಿಕೊಳ್ಳಲಾಗಿದೆ. ಇದು ಆಟೋ ಮೊಬೈಲ್ ಜಗತ್ತಿನ ಆಕರ್ಷಕ, ವಿಲಕ್ಷಣ, ರೋಚಕ ಸುದ್ದಿ ಗಿಟ್ಟಿಸಿಕೊಳ್ಳುವಲ್ಲಿ ಓದುಗರಿಗೆ ನೆರವಾಗಲಿದೆ.

ಆಫ್ ಬೀಟ್

ಆಫ್ ಬೀಟ್

ಹೆಸರಲ್ಲಿ ತಿಳಿಸಿದಂತೆ ಇದು ಪೂರ್ಣವಾಗಿಯೂ ಆಟೋ ರಿಲೆಟೆಡ್ ಸುದ್ದಿ ಅಲ್ಲದಿದ್ದರೂ ಸೆಲೆಬ್ರಿಟಿ ಕಾರು, ಬೈಕ್ ವಿಭಾಗಳನ್ನು ಹೊಂದಿರಲಿದೆ. ಈಗಾಗಲೇ ವರದಿ ಮಾಡಿರುವಂತೆಯೇ ಕಿಚ್ಚ ಸುದೀಪ್, ವೆಸ್ಪಾಗೆ ಮಾರುಹೋದ ರಮ್ಯಾ ಇಂತಹ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಕಾರು-ಬೈಕ್ ಕ್ರೇಜ್ ಸುದ್ದಿಗಳು ಈ ವಿಭಾಗವನ್ನು ಆವರಿಸಿಕೊಳ್ಳಲಿದೆ.

ಆಟೋ ಶೋ

ಆಟೋ ಶೋ

ವಿಶ್ವದೆಲ್ಲೆಡೆ ಅನೇಕ ಆಟೋ ಶೋಗಳು ನಡೆಯುತ್ತಿರುತ್ತವೆ. ಇವುಗಳಲ್ಲಿ ದೆಹಲಿ, ಡ್ರಿಟ್ರಾಯ್ಟ್, ಜಿನೆವಾ ಪ್ರಮುಖವಾಗಿವೆ. ಅಲ್ಲಿನ ಆಕರ್ಷಕ ಫೋಟೊ ಚಿತ್ರಣವನ್ನು ಇಲ್ಲಿ ಸಾದರಪಡಿಸಲಾಗುವುದು. ಪ್ರಸ್ತುತ ದೆಹಲಿಯನ್ನು ಮಾತ್ರ ಕೇಂದ್ರಿಕರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಆಟೋ ಶೋಗಳ ಸಬ್ ಕ್ಯಾಟಗರಿ ಆರಂಭವಾಗಲಿದೆ.

ರಿಸರ್ಚ್ ಪೇಜ್

ರಿಸರ್ಚ್ ಪೇಜ್

ನೀವು ನೂತನ ಕಾರು, ಬೈಕ್ ಖರೀದಿಸಲು ಬಯಿಸಿದ್ದರೆ ಅಥವಾ ಅವುಗಳ ದರ, ವೆರಿಯಂಟ್ ಬಗ್ಗೆ ತಿಳಿಯಬಯಿಸಿದರೆ ನಮ್ಮ ರಿಸರ್ಚ್ ಪೇಜ್ ಆ ನಿರ್ದಿಷ್ಟ ಕಾರು, ಬೈಕ್‌ನ ಬಗ್ಗೆ ನಿಖರ ಮಾಹಿತಿಯನ್ನು ನೀಡಲಿದೆ. ಹಾಗೆಯೇ ಇತರ ಕಾರು, ಬೈಕ್ ಜತೆಗಿನ ಹೋಲಿಕೆಯೂ ಸುಲಭವಾಗಲಿದೆ. ನಿಮ್ಮ ಮಾಹಿತಿಗಾಗಿ, ಬಹಳ ದಿನಗಳ ಪರಿಶ್ರಮದ ಬಳಿಕ ರಿಸರ್ಚ್ ಪೇಜ್ ಅಭಿವೃದ್ಧಿಪಡಿಸಲಾಗಿದೆ.

ವಾಹನ ಸಲಹೆ ಮತ್ತು ಜಾಹೀರಾತು

ವಾಹನ ಸಲಹೆ ಮತ್ತು ಜಾಹೀರಾತು

ಇನ್ನು ವಾಹನ ಸಲಹೆ ವಿಭಾಗದಲ್ಲಿ ಕಾರಿನ ಬಗ್ಗೆ ಟಿಪ್ಸ್ ಒಳಗೊಂಡಿರಲಿದೆ. ಇದು ನಿಮ್ಮ ಫೇವರಿಟ್ ಸೆಕ್ಷನ್ ಕೂಡಾ ಹೌದು. ಹಾಗೆಯೇ ಜಾಹೀರಾತು ವಿಭಾಗದಲ್ಲಿ ಸೆಕೆಂಡ್ ಹ್ಯಾಂಡ್ ಕಾರು, ಬೈಕ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

English summary
kannada.drivespark.com is front runner in providing automobile news in Kannada. We take this opportunity to confirm that kannada.drivespark.com has received a facelift on the occasion of completing one successful year. We urge you to check out the refreshed look and please feel free to provide us your feedback. Drivespark.com is a unique Indian auto website that offers anything and everything from the auto industry in not only in English but also in five Indian regional languages. Drivespark.com strives to provide customer focused auto news along with interesting tit bits, tips, test drives and useful information on cars and bikes. Drivespark.com is also able to provide region specific information to readers along with a broader perspective.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more