ಮದುರೈ, ತ್ರಿಚಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ
ದೇಶದಲ್ಲೇ ಅತಿ ದೊಡ್ಡ ಪ್ರಯಾಣಿಕ ಸಾರಿಗೆ ವ್ಯವಸ್ಥೆ ಹೊಂದಿರುವ ನಮ್ಮೆಲ್ಲರ ಹೆಮ್ಮೆಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕಎಸ್‌ಆರ್‌ಟಿಸಿ) ಸದ್ಯದಲ್ಲೇ ನೆರೆಯ ತಮಿಳುನಾಡಿನ ಮದುರೈ ಹಾಗೂ ತ್ರಿಚಿ ಪ್ರದೇಶಗಳಿಗೆ ತನ್ನ ಸೇವೆಯನ್ನು ಆರಂಭಿಸಲಿದೆ.
ಬೆಂಗಳೂರಿನಿಂದ ರಾತ್ರಿ 10.00ಕ್ಕೆ ಹೊರಡಲಿರುವ ವೋಲ್ವೋ ಮಲ್ಟಿ ಎಕ್ಸಲ್ ಬಸ್ ಮರುದಿನ ಬೆಳಗ್ಗೆ 6.15ಕ್ಕೆ ಮದುರೈ ತಲುಪಲಿದೆ. ಹಾಗೆಯೇ ರಾತ್ರಿ 9.30 ಮದುರೈನಿಂದ ಹೊರಡಲಿರುವ ಬಸ್ ಮರುದಿನ ಬೆಳಗ್ಗೆ 6ಕ್ಕೆ ಬೆಂಗಳೂರು ತಲುಪಲಿದೆ. ಪ್ರಸ್ತುತ ಸೇವೆಯು ಜೂನ್ 18ರಿಂದ ಆರಂಭವಾಗಲಿದ್ದು, ಪ್ರಯಾಣ ದರ 725 ರು. ಆಗಿದೆ.
ನಿಮ್ಮ ಟಿಕೆಟ್ ಕಾಯ್ದಿರಿಸಲು ಕೆಎಸ್‌ಆರ್‌ಟಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿರಿ. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 080-44554422
ಕೆಎಸ್‌ಆರ್‌ಟಿಸಿಯಿಂದ ಮದುರೈ, ತ್ರಿಚಿ, ರಾಯಚೂರು, ಹೈದರಾಬಾದ್ ಹಾಗೂ ಹಂಪಿ ಸರ್ವೀಸ್‌ಗಳ ವೇಳಾಪಟ್ಟಿ ಇಂತಿದೆ.
ಬೆಂಗಳೂರು-ಮದುರೈ (ವೋಲ್ವೋ ಮಲ್ಟಿ ಎಕ್ಸೆಲ್)
ಹೊರಡುವ ಸಮಯ: ರಾತ್ರಿ 9.30ಕ್ಕೆ (ಬೆಂಗಳೂರು), ರಾತ್ರಿ 10ಕ್ಕೆ (ಮದುರೈ)
ಆಗಮನ ಸಮಯ: ಬೆಳಗ್ಗೆ 6.15 (ಮದುರೈ), ಬೆಳಗ್ಗೆ 6.00 (ಬೆಂಗಳೂರು)
ದರ ಮಾಹಿತಿ: ರು. 725
ಬೆಂಗಳೂರು-ತ್ರಿಚಿ (ವೋಲ್ವೋ ಮಲ್ಟಿ ಎಕ್ಸೆಲ್)
ಹೊರಡುವ ಸಮಯ: ಮಧ್ಯಾಹ್ನ 1.00, ರಾತ್ರಿ 10.45ಕ್ಕೆ (ಬೆಂಗಳೂರು), ರಾತ್ರಿ 10.45, ಬೆಳಗ್ಗೆ 10.00ಕ್ಕೆ (ತ್ರಿಚಿ)
ಆಗಮನ ಸಮಯ: ರಾತ್ರಿ 7.45 ಹಾಗೂ ಬೆಳಗ್ಗೆ 5.15 (ತ್ರಿಚಿ), ಬೆಳಗ್ಗೆ 5.30 ಹಾಗೂ ಸಂಜೆ 4.45 (ಬೆಂಗಳೂರು)
ದರ ಮಾಹಿತಿ: ರು. 650
ಬೆಂಗಳೂರು-ರಾಯಚೂರು (ವೋಲ್ವೋ ಮಲ್ಟಿ ಎಕ್ಸೆಲ್)
ಹೊರಡುವ ಸಮಯ: ರಾತ್ರಿ 9.45ಕ್ಕೆ (ಬೆಂಗಳೂರು), ರಾತ್ರಿ 9.30 (ರಾಯಚೂರು)
ಆಗಮನ ಸಮಯ: ಬೆಳಗ್ಗೆ 6.00 (ರಾಯಚೂರು), ಬೆಳಗ್ಗೆ 6.00 (ಬೆಂಗಳೂರು)
ದರ ಮಾಹಿತಿ: ರು. 700
ಬೆಂಗಳೂರು-ಹೈದರಾಬಾದ್ (ವೋಲ್ವೋ ಮಲ್ಟಿ ಎಕ್ಸೆಲ್)
ಹೊರಡುವ ಸಮಯ: ಬೆಳಗ್ಗೆ 7.30ಕ್ಕೆ (ಬೆಂಗಳೂರು), ಬೆಳಗ್ಗೆ 6.30 (ಹೈದರಾಬಾದ್)
ಆಗಮನ ಸಮಯ: ಸಂಜೆ 5.00 (ಹೈದರಾಬಾದ್), ಸಂಜೆ 4.00 (ಬೆಂಗಳೂರು)
ದರ ಮಾಹಿತಿ: ರು. 950
ಬೆಂಗಳೂರು-ಹಂಪಿ (ಹವಾನಿಯಂತ್ರಣ ರಹಿತ ಸ್ಲೀಪರ್ ಬಸ್)
ಹೊರಡುವ ಸಮಯ: ರಾತ್ರಿ 11.00ಕ್ಕೆ (ಬೆಂಗಳೂರು), ರಾತ್ರಿ 8ಕ್ಕೆ (ಹಂಪಿ)
ಆಗಮನ ಸಮಯ: ಬೆಳಗ್ಗೆ 6.30 (ಹಂಪಿ), ಬೆಳಗ್ಗೆ 4.30 (ಬೆಂಗಳೂರು)
ದರ ಮಾಹಿತಿ: ರು. 545


Click it and Unblock the Notifications









