ಟಿಕೆಟ್ ಬುಕ್ಕಿಂಗ್; ಯುಎಇ ಜತೆ ಕೈಜೋಡಿಸಿದ ಕೆಎಸ್‌ಆರ್‌ಟಿಸಿ
ದೇಶದ ಅತ್ಯಂತ ವೇಗವಾಗಿ ಬೆಳೆದುಬರುತ್ತಿರುವ ಹಣಕಾಸು ಹಾಗೂ ಪ್ರಯಾಣ ಸೇವೆ ಒದಗಿಸುವ ಖಾಸಗಿ ಸಂಸ್ಥೆಯಾಗಿರುವ ಯುಇಎ ಎಕ್ಸ್‌ಚೇಂಜ್ ಜತೆ ಕೈಜೋಡಿಸಿಕೊಂಡಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಆರು ರಾಜ್ಯಗಳಲ್ಲಿ ಗ್ರಾಹಕರಿಗೆ ಟಿಕೆಟ್ ಸೌಲಭ್ಯ ಒದಗಿಸಲು ಒಪ್ಪಂದ ಮಾಡಿಕೊಂಡಿದೆ.
ಪ್ರಮುಖವಾಗಿಯೂ ನಿರಂತರ ಅವಧಿಯಲ್ಲಿ ಬೆಂಗಳೂರಿಗೆ ಪಯಣಿಸುತ್ತಿರುವ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳನ್ನು ಗುರಿಯಾಗಿರಿಸಿಕೊಂಡಿರುವ ಕೆಎಸ್‌ಆರ್‌ಟಿಸಿ, ಯುಎಇ ಎಕ್ಸ್‌ಚೇಂಜ್ ಜತೆಸೇರಿಕೊಂಡು ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಟಿಕೆಟ್ ವಿತರಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಕರ್ನಾಟಕದ ಜತೆ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ ಹಾಗೂ ಗೋವಾದಲ್ಲೂ ಈ ಸೇವೆ ಲಭಿಸಲಿದೆ.
ಮೇಲೆ ಸೂಚಿಸಲಾದ ರಾಜ್ಯಗಳ ಯುಎಇ ಎಕ್ಸ್‌ಚೇಂಜ್ ಬ್ರಾಂಚ್‌ಗಳಲ್ಲಿ ಕೆಎಸ್‌ಆರ್‌ಟಿಸಿ ಟಿಕೆಟ್ ಬುಕ್ಕಿಂಗ್ ಸೇವೆ ಲಭ್ಯವಿರಲಿದೆ. ಈ ಮೂಲಕ ಗ್ರಾಹಕರು ತಮ್ಮ ಸರದಿಗಳಲ್ಲಿ ನಿಂತು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದನ್ನು ತಪ್ಪಿಸಬಹುದು.
ಗ್ರಾಹಕರಿಗೆ ಆರಾಮದಾಯಕ ಹಾಗೂ ಐಷಾರಾಮಿ ಬಸ್ ಪಯಣವನ್ನು ಒದಗಿಸುವುದರಲ್ಲಿ ಕೆಎಸ್‌ಆರ್‌ಟಿಸಿ ದೇಶದಲ್ಲಿ ಅಗ್ರಗಣ್ಯ ಎನಿಸಿಕೊಂಡಿದೆ.


Click it and Unblock the Notifications









