ಪ್ರಸಕ್ತ ತಿಂಗಳಲ್ಲೇ ಮಹೀಂದ್ರ ಎಲೆಕ್ಟ್ರಿಕ್ ಕಾರು ಲಾಂಚ್

By Nagaraja

ಕೊನೆಗೂ ದೇಶದ ಅತಿ ದೊಡ್ಡ ಯುಟಿಲಿಟಿ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರ ಆಂಡ್ ಮಹೀಂದ್ರದ ಬಹುನಿರೀಕ್ಷಿತ ವಿದ್ಯುತ್ ಚಾಲಿತ ರೇವಾ ಬಿಡುಗಡೆಗೆ ಕಾಲವೂ ಕೂಡಿಬಂದಿದೆ. ಇದೇ ಮಾರ್ಚ್ ತಿಂಗಳಲ್ಲಿ ಮಹೀಂದ್ರ 'ಇ2ಒ' (E2O) ಲಾಂಚ್ ಮಾಡಲು ಕಂಪನಿ ನಿರ್ಧರಿಸಿದೆ.

2013-14ನೇ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ಘೋಷಿಸುವ ನಿರೀಕ್ಷೆಯಿದ್ದರೂ ವಿತ್ತ ಸಚಿವ ಪಿ. ಚಿದಂಬರಂ ಈ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಹಾಗಿದ್ದರೂ ಪರಿಸರ ಸ್ನೇಹಿ ಮಹೀಂದ್ರ ರೇವಾ ನಿಗದಿತ ಸಮಯದಲ್ಲಿ ಮಾರುಕಟ್ಟೆಗೆ ಅಪ್ಪಳಿಸಲು ಸಜ್ಜಾಗಿದೆ.

ಮುಂದಿನ ದಿನಗಳಲ್ಲಿ ನಗರ ಪ್ರದೇಶದ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಎಲೆಕ್ಟ್ರಿಕ್ ವಾಹನಗಳು ಬಹುದೊಡ್ಡ ಪಾತ್ರ ವಹಿಸಲಿದೆ. ಹಾಗಾಗಿ ಸರಕಾರದ ನಿರ್ಧಾರದಿಂದ ಯಾವುದೇ ಹಿನ್ನಡೆಯುಂಟಾಗಿಲ್ಲ ಎಂದು ಮಹೀಂದ್ರ ರೇವಾ ತಂತ್ರಜ್ಞಾನ ಹಾಗೂ ಯೋಜನಾ ಮುಖ್ಯಸ್ಥ ಚೇತನ್ ಮೈನಿ ತಿಳಿಸಿದ್ದಾರೆ.

ಮಹೀಂದ್ರ ಇ2ಒ ಪ್ರತಿ ಗಂಟೆಗೆ 100 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗಿದ್ದರೂ ಸ್ವಿಫ್ಟ್ ಹಾಗೂ ಐ20 ಕಾರುಗಳಿಗೆ ಹೋಲಿಸಿದರೆ ಗಾತ್ರದಲ್ಲಿ ಸ್ವಲ್ಪ ಕಿರಿದಾಗಿರುತ್ತದೆ.

ಅಂದ ಹಾಗೆ 2015-16ರ ವೇಳೆಗೆ 30 ಸಾವಿರ ಯುನಿಟ್ ಮಾರಾಟದ ಗುರಿಯನ್ನು ಹೊಂದಿದೆ. ಈ ಪೈಕಿ 15 ಸಾವಿರ ರಫ್ತು ಮಾಡುವ ಗುರಿ ಸಹ ಹೊಂದಿದೆ. ಪ್ರಸ್ತುತ ಇದು ಕಠಿಣವೆನಿಸಿದ್ದರೂ ಗ್ರಾಹಕರಿಗೆ ವಿದ್ಯುತ್ ಚಾಲಿತ ಕಾರುಗಳ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಪ್ರಾಮುಖ್ಯವಾಗಿದೆ.

More from DriveSpark

Article Published On: Monday, March 4, 2013, 14:43 [IST]
English summary
Mahindra Reva Electric Vehicles Private Limited will launch its next generation electric car, the e2O sometime this month. The e2O, which was originally also called Reva, was first revealed at the 2012 Delhi Auto Expo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+