ಜಿಪ್ಸಿ ಫೇಸ್ ಔಟ್; ಇಂಡಿಯನ್ ಆರ್ಮಿ ರೇಸ್‌ನಲ್ಲಿ ಸ್ಕಾರ್ಪಿಯೊ, ಸಫಾರಿ

3,000 ಕೋಟಿ ರು.ಗಳಷ್ಟು ಮೌಲ್ಯದ ಈ ಬೃಹತ್ ಯೋಜನೆಯಲ್ಲಿ ದೇಶದ ಮುಂಚೂಣಿಯ ಕಂಪನಿಗಳಾದ ಮಹೀಂದ್ರ ಸ್ಕಾರ್ಪಿಯೊ ಹಾಗೂ ಟಾಟಾ ಸಫಾರಿ ಪೈಪೋಟಿಯಲ್ಲಿದೆ. ಪ್ರಮುಖವಾಗಿ ಭಾರತೀಯ ಸೇನೆಗೆ ಆಧುನಿಕ ತಂತ್ರಜ್ಞಾನದ ವಾಹನಗಳನ್ನು ಪೂರೈಸುವುದು ಇದರ ಯೋಜನೆಯಾಗಿದೆ.
ಇಂಡಿಯನ್ ಆರ್ಮಿಯಲ್ಲಿ ಈ ವರೆಗೆ 25 ಸಾವಿರದಷ್ಟು ಮಾರುತಿ ಜಿಪ್ಸಿ ಯುಟಿಲಿಟಿ ವಾಹನಗಳನ್ನು ಬಳಕೆ ಮಾಡಲಾಗಿತ್ತು. ಈ ಹಗುರ ವಾಹನಗಳನ್ನು ಭಯೋತ್ಪಾದನಾ ನಿಗ್ರಹ ಹಾಗೂ ಇತರ ಭದ್ರತಾ ಕಾರ್ಯಾಚರಣೆಗೆ ಬಳಸಲಾಗಿತ್ತು.
ಪ್ರಸ್ತು ಮುಂದಿನ ವಾರ ಬೇಸಿಗೆ ಪ್ರಯೋಗ ರಾಜಸ್ತಾನದ ಜೋಧ್‌ಪುರ್ ಹಾಗೂ ಚಳಿಗಾಲದ ಪ್ರಯೋಗವು ವರ್ಷಾಂತ್ಯದಲ್ಲಿ ಸಿಕ್ಕಿಂನಲ್ಲಿ ನಡೆಯಲಿದ್ದು, ಇದರಲ್ಲಿ ಮಿಲಿಟರಿ ವರ್ಷನ್ ಮಹೀಂದ್ರ ಸ್ಕಾರ್ಪಿಯೊ ಹಾಗೂ ಟಾಟಾ ಸಫಾರಿ ಪರೀಕ್ಷೆಯಾಗಲಿದೆ.
ಪೆಟ್ರೋಲ್ ದರ ಏರಿಕೆ ಜಿಪ್ಸಿ ಮೂಲೆಗುಂಪು ಆಗಲು ಪ್ರಮುಖ ಕಾರಣವಾಗಿತ್ತು. ಯಾಕೆಂದರೆ ಜಿಪ್ಸಿ ಪೆಟ್ರೋಲ್ ಆಶ್ರಯಿಸಿಕೊಂಡಿದೆ. ಸದ್ಯ ಭಾರತೀಯ ಸೇನೆಗೆ 30 ಸಾವಿರದಷ್ಟು 4x4 ಹಗುರ ವಾಹನಗಳ ಅಗತ್ಯವಿದ್ದು, ಈ ನಿಟ್ಟಿನಲ್ಲಿ 2017ರ ವೇಳೆಗೆ ಹಂತ ಹಂತವಾಗಿ ಜಿಪ್ಸಿ ತೊರೆಯಲು ಭಾರತೀಯ ಸೇನೆ ಗುರಿಯಾಗಿರಿಸಿದೆ.


Click it and Unblock the Notifications








