ನಾನ್ ಸ್ಟಾಪ್ ಮಹೀಂದ್ರ ಎಕ್ಸ್‌ಯುವಿ500 'ಲಿಮ್ಕಾ ದಾಖಲೆ'
ದೇಶದ ಎಸ್‌ಯುವಿ ದೈತ್ಯ ಮಹೀಂದ್ರದ ಎಕ್ಸ್‌ಯುವಿ500 ನೂತನ ಲಿಮ್ಕಾ ದಾಖಲೆ ಸ್ಥಾಪಿಸಿದೆ. ಹೌದು, ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಕಾಶ್ಮೀರದ ವರೆಗೆ ಅತ್ಯಂತ ವೇಗದಲ್ಲಿ ಚಲಿಸಿದ ಕಾರೆಂಬ ಖ್ಯಾತಿಗೆ ಪಾತ್ರವಾಗಿರುವ ಮಹೀಂದ್ರ ಎಕ್ಸ್‌ಯುವಿ500, ನೂತನ ಲಿಮ್ಕಾ ದಾಖಲೆ ರಚಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
63 ಗಂಟೆ 20 ನಿಮಿಷಗಳ ವರೆಗೆ ನಾನ್ ಸ್ಟಾಪ್ ಆಗಿ ಸಾಗಿದ್ದ ಮಹೀಂದ್ರ ಎಕ್ಸ್‌ಯುವಿ500, ಒಟ್ಟು 3,997 ಕೀ.ಮೀ.ಗಳನ್ನು ಕ್ರಮಿಕರಿಸುವ ಮೂಲಕ ಕಾಶ್ಮೀರದ ಲೇಹ್ ತಲುಪಿತ್ತು. ಇದು ಲಿಮ್ಕಾ ದಾಖಲೆ ಪುಟದಲ್ಲಿ ಸೇರುವಲ್ಲಿ ನೆರವಾಗಿದೆ.

ಝುಝುರ್ ಟಿನ್ವಾಲಾ, ಜ್ಯೋತಿ ಪಿ ಬಟ್ಟಾಚಾರ್ಯ, ಅಂಶುಮಾನ್ ಕಕಾರ್ ಮತ್ತು ನೀರಜ್ ರಸ್ತೋಗಿ ಎಂಬ ನಾಲ್ವರ ಸಂಘವು ಈ ದಾಖಲೆ ಸ್ಥಾಪಿಸಿದೆ. ಮೇಲೆ ತಿಳಿಸಿದ ಎಲ್ಲರೂ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಉದ್ಯೋಗಿಗಳಾಗಿದ್ದಾರೆ.
ಕನ್ಯಾಕುಮಾರಿಯಿಂದ 2013 ಸೆಪ್ಟೆಂಬರ್ 30ರಂದು ಆರಂಭಿಸಿದ ಪಯಣವು ಅಕ್ಟೋಬರ್ 3ರಂದು ಜಮ್ಮು ಮತ್ತು ಕಾಶ್ಮೀರವನ್ನು ತಲುಪಿತ್ತು. ಇದು ಹಿಂದಿನ ದಾಖಲೆಗಿಂತಲೂ 10 ಗಂಟೆ 27 ನಿಮಿಷಗಿಂತಲೂ ವೇಗವಾಗಿ ತಲುಪಿತ್ತು.
<center><iframe width="100%" height="450" src="//www.youtube.com/embed/1xfUktOaiPQ?rel=0" frameborder="0" allowfullscreen></iframe></center>


Click it and Unblock the Notifications








