ಬಿಡುಗಡೆಯಾಗಿ 8 ವರ್ಷ; 10 ಲಕ್ಷ ಮೈಲುಗಲ್ಲು ದಾಟಿದ ಸ್ವಿಫ್ಟ್
ಎಂಟು ವರ್ಷಗಳ ಹಿಂದೆ ಅಂದರೆ 2005ನೇ ಇಸವಿಯಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಿದ್ದ ಮಾರುತಿ ಸುಜುಕಿ ಸ್ವಿಫ್ಟ್ ಇದೀಗ 10 ಲಕ್ಷ ಮಾರಾಟದ ಮೈಲುಗಲ್ಲನ್ನು ತಲುಪಿದೆ. ದೇಶದ ಅತ್ಯಂತ ಜನಪ್ರಿಯ ಕಾರೆಂಬ ಖ್ಯಾತಿಗೆ ಪಾತ್ರವಾಗಿರುವ ಸ್ವಿಫ್ಟ್ 1 ಮಿಲಿಯನ್ ಯಶಸ್ವಿ ಗ್ರಾಹಕರ ಸಂಭ್ರಮದ ಹಿನ್ನಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ 'ಆರ್‌ಎಸ್' ವಿಶೇಷ ಆವೃತ್ತಿಯನ್ನು ಲಾಂಚ್ ಮಾಡಿತ್ತು.
ಈ ಸಂದರ್ಭದಲ್ಲಿ ಪ್ರತಿಕ್ರಿಸಿರುವ ಮಾರುತಿ ಸುಜುಕಿ ಮಾರ್ಕೆಟಿಂಗ್ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾಯಾಂಕ್ ಪರೀಕ್, ಪ್ರೀಮಿಯಂ ಹ್ಯಾಚ್‌ಬ್ಯಾಕ್ ಇಲ್ಲದ 2005ರ ಕಾಲಘಟ್ಟದಲ್ಲಿ ತಿಂಗಳಿಗೆ 5,000 ಯುನಿಟ್ ಸ್ವಿಫ್ಟ್ ಮಾರಾಟ ಮಾಡುವುದು ಗುರಿಯಾಗಿತ್ತು. ಆದರೆ ಸ್ವಲ್ಪ ಸಮಯದಲ್ಲೇ ಸ್ವಿಫ್ಟ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿತ್ತು ಎಂದಿದ್ದಾರೆ. ಈ ಮೂಲಕ ಕಳೆದ ಎಂಟು ವರ್ಷಗಳಿಗಿಂತಲೂ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ವಶಪಡಿಸಿಕೊಳ್ಳಲು ಸ್ವಿಫ್ಟ್ ಯಶಸ್ವಿಯಾಗಿತ್ತು.

ಭಾರತದಲ್ಲಿ ಲಾಂಚ್ ಆದ ಪ್ರಾರಂಭದ ಒಂದೆರಡು ವರ್ಷಗಳ ವರೆಗೆ ಎಸ್ಟೀಮ್‌ನಲ್ಲಿ ಬಳಕೆಯಾದ 1.3 ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಸ್ವಿಫ್ಟ್ ಲಭ್ಯವಾಗಿತ್ತು. ಬಳಿಕ ಫಿಯೆಟ್‌ನ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಳವಡಿಸಲಾಗಿತ್ತು. ತದಾ ಬಳಿಕ 1.3 ಲೀಟರ್ ಪೆಟ್ರೋಲ್ ಎಂಜಿನನ್ನು 1.2 ಲೀಟರ್ ಕೆ ಸಿರೀಸ್ ಎಂಜಿನ್‌ನಿಂದ ಬದಲಾಯಿಸಲಾಗಿತ್ತು.

ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯ ಕೊರತೆ...
ಇಷ್ಟೆಲ್ಲ ಆದರೂ ಭಾರತೀಯ ಗ್ರಾಹಕರಿಗೆ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯ ಅನುಭವ ಪಡೆಯುವ ಅವಕಾಶ ಇದುವರೆಗೆ ದೊರೆತಿಲ್ಲ. ಜಾಗತಿಕವಾಗಿ ಬಹುತೇಕ ಎಲ್ಲ ಮಾರುಕಟ್ಟೆಯಲ್ಲಿ 1.6 ಲೀಟರ್ ಸ್ಪೋರ್ಟ್ ಎಡಿಷನ್ ಲಭ್ಯವಿದೆ. ಆದರೆ ಭಾರತ ಮಾತ್ರ ಇಂದರಿಂದ ವಂಚಿತವಾಗಿದೆ.


Click it and Unblock the Notifications








