ನೀವು ದೇಶದ ಸುರಕ್ಷಿತ ಯುವ ಚಾಲಕರೇ?
ಯುವ ಚಾಲಕರಲ್ಲಿ ಉತ್ತಮ ರೈಡಿಂಗ್ ಕಲೆ ರೂಪಿಸಿಕೊಳ್ಳುವುದು ಹಾಗೂ ರಸ್ತೆಯ ನಿಯಮಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಈ ಮೂಲಕ ದೇಶದ ರಸ್ತೆಯನ್ನು ಇನ್ನಷ್ಟು ಸುರಕ್ಷಿತಗೊಳಿಸುವ ಇರಾದೆ ಹೊಂದಿದೆ.
ಜೂನ್ 28ರಂದು ಮಾರುತಿ ಸುಜುಕಿ ಆಟೋಕಾರ್ 'ಯಂಗ್ ಡ್ರೈವರ್ 2013' ಮೊದಲ ಹಂತವು ಯಶಸ್ವಿಯಾಗಿ ಹಮ್ಮಕೊಳ್ಳಲಾಗಿದ್ದು, ಎರಡನೇ ಹಂತದ ಡ್ರೈವಿಂಗ್ ಕಾರ್ಯಕ್ರಮ ಆರಂಭಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಯುವ ಚಾಲಕರ ಡ್ರೈವಿಂಗ್ ಕೌಶಲ್ಯಗಳನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ. ದೇಶದ್ಯಾಂತ ಪಸರಿಸಿರುವ 42 ಪ್ರಮುಖ ನಗರಗಳ ಮಾರುತಿ ಸುಜುಕಿ ಡ್ರೈವಿಂಗ್ ಶಾಲೆಗಳಲ್ಲಿ ಇದರ ಆಯ್ಕೆ ನಡೆಯಲಿದೆ.
ಎರಡನೇ ಹಂತಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರಕಿದ್ದು 550ರಷ್ಟು ಯುವ ಗ್ರಾಹಕರು ಭಾವಹಿಸಿದ್ದಾರೆ. ಈ ಪೈಕಿ ಬೆಂಗಳೂರಿನಿಂದ 255 ಚಾಲಕರು ನೊಂದಣಿ ಮಾಡಿದ್ದಾರೆ. ಮಾರುತಿ ಡ್ರೈವಿಂಗ್ ಸ್ಕೂಲ್‌ಗಳಲ್ಲಿ ಚಾಲಕರ ನಿರ್ವಹಣೆ ಆಧಾರದಲ್ಲಿ ಅಂತಿಮ 25 ಫೈನಲಿಸ್ಟ್‌ಗಳನ್ನು ಮೂರನೇ ಹಂತದಲ್ಲಿ ಆರಿಸಲಾಗುವುದು. ನಿಮ್ಮ ಮಾಹಿತಿಗಾಗಿ, ಮಾರುತಿ ಸುಜುಕಿ ಸುರಕ್ಷಿತ ಯುವ ಚಾಲಕ ಆಯ್ಕೆಗಾಗಿ ಮೊದಲ ಹಂತದಲ್ಲಿ 50,000ದಷ್ಟು ಮಂದಿ ನೊಂದಣಿ ಮಾಡಿದ್ದರು.


Click it and Unblock the Notifications









