2015ರಲ್ಲಿ ಮೆಕ್‌ಲ್ಯಾರೆನ್ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರು

By Nagaraja

2015 ಮೆಕ್‌ಲ್ಯಾರೆನ್ ಪಿ13 ಸ್ಪೋರ್ಟ್ಸ್ ಕಾರಿನ ಹೆಚ್ಚಿನ ಮಾಹಿತಿಗಳು ಹೊರಬಂದಿದೆ. ಮೆಕ್‌ಲ್ಯಾರೆನ್‌ನ ಈ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಕಾರು ಎಂಪಿ4-12ಸಿ ಆವೃತ್ತಿಯ ಕೆಳಗಡೆ ಗುರುತಿಸಿಕೊಳ್ಳಲಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಪ್ರಮುಖವಾಗಿ ಪೋರ್ಷೆ 911, ಜಾಗ್ವಾರ್ ಎಫ್ ಟೈಪ್ ಮತ್ತು ಮರ್ಸಿಡಿಸ್ ಎಸ್‌ಎಲ್‌ಎಸ್ ಎಎಂಜಿ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಳ್ಳಲಿದೆ. ಪಿ1 ಹೈಪರ್‌ಕಾರಿನಿಂದ ಸ್ಪೂರ್ತಿ ಪಡೆದು ವಿನ್ಯಾಸ ರಚಿಸಲಾಗಿದ್ದು, ಡಿಸೈನ್ ಮುಖ್ಯಸ್ಥ ಫ್ರಾಂಕ್ ಸ್ಟೆಫೆನ್ಸನ್ ಸೂತ್ರಧಾರಿ ಎನಿಸಿಕೊಂಡಿದ್ದಾರೆ.


ಮೆಕ್‌ಲ್ಯಾರೆನ್ ಪಿ13 ಸ್ಪೋರ್ಟ್ಸ್ ಕಾರು, 12ಸಿ ಟ್ವಿನ್ ಟರ್ಬೊ 3.8 ಲೀಟರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 444 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಇದು ಕಾರ್ಬನ್ ಫೈಬರ್ ಮೊನೊಸೆಲ್ ಚಾಸೀಸ್‌ನಿಂದ ನಿರ್ಮಾಣವಾಗಲಿದೆ. ಇದು ಎಂಪಿ4-12ಸಿ ಆವೃತ್ತಿಯಲ್ಲಿರುವುದಕ್ಕೆ ಸಮಾನವಾಗಿದೆ. ಹಾಗೆಯೇ ಇದರಿಂದ ನಿರ್ಮಾಣ ವೆಚ್ಚ ಕಡಿತಗೊಳಿಸಲು ನೆರವಾಗಲಿದೆ.


2015ರ ಸಾಲಿನಲ್ಲೇ 2500ರಷ್ಟು ಯುನಿಟ್ ಮಾರಾಟ ಗುರಿ ತಲುಪುವುದು ಕಂಪನಿ ಇರಾದೆಯಾಗಿದೆ. ಇದರ ದರ 197,000 ಅಮೆರಿಕನ್ ಡಾಲರ್ ಅಸುಪಾಸಿನಲ್ಲಿರಲಿದೆ.

ಆರಂಭದಲ್ಲಿ ಮೆಕ್‌ಲ್ಯಾರೆನ್ ಪಿ13 ಕೂಪೆ ಮಾದರಿ ಲಾಂಚ್ ಆಗಲಿದ್ದು, ಇದನ್ನು ಕನ್ವರ್ಟಿಬಲ್ ವರ್ಷನ್ ಹಿಂಬಾಲಿಸಲಿದೆ. ಮುಂದಿನ ವರ್ಷ ನಡೆಯಲಿರುವ ಪ್ಯಾರಿಸ್ ಆಟೋ ಶೋದಲ್ಲಿ ಪ್ರದರ್ಶನ ಕಾಣಲಿರುವ ಈ ಆಕರ್ಷಕ ಕಾರು 2015ರಲ್ಲಿ ರಸ್ತೆ ತಲುಪುವ ನಿರೀಕ್ಷೆಯಿದೆ.

McLaren P13

More from DriveSpark

Article Published On: Thursday, December 12, 2013, 15:20 [IST]
English summary
The first official details of the McLaren P13 have been released. For those listening to that name for the first time, the P13 is a 2015 model that will be McLaren's entry level sports car, placed below MP4-12C.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+