ಎಪ್ರಿಲ್‌ನಿಂದ ಲಗ್ಷುರಿ ಬೆಂಝ್ ಇನ್ನಷ್ಟು ದುಬಾರಿ!
2013 ಎಪ್ರಿಲ್ 1ರಿಂದ ಸ್ಥಳೀಯವಾಗಿ ಜೋಡಣೆಯಾಗಲಿರುವ ಹಾಗೂ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಕಾರುಗಳ ದರ ಏರಿಕೆಗೊಳಿಸಲು ಜರ್ಮನಿಯ ಪ್ರೀಮಿಯಂ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ನಿರ್ಧರಿಸಿದೆ.
ಇದರಂತೆ ದೇಶದಲ್ಲೇ ಜೋಡಣೆಯಾಗಲಿರುವ ಬೆಂಝ್ ಕಾರುಗಳ ದರ ಶೇಕಡಾ 1ರಿಂದ 4 ಹಾಗೂ ಕಂಪ್ಲೀಟ್ ಬಿಲ್ಟ್ ಯುನಿಟ್‌ಗಳ ದರ ಶೇಕಡಾ 20ರಷ್ಟು ಏರಿಕೆಯಾಗಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮರ್ಸಿಡಿಸ್ ಬೆಂಝ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಎಬೆರ್‌ಹಾರ್ಡ್ ಕೆರ್ನ್, ಕಾರಣಾಂತರಗಳಿಂದಾಗಿ ದರ ಏರಿಕೆಗೊಳಿಸಲು ಪ್ರೇರಿತರಾಗಿದ್ದೇವೆ. ಆಮದು ವೆಚ್ಚ ಕೂಡಾ ವಿಪರೀತವಾಗಿದೆ ಎಂದಿದ್ದಾರೆ.
ಕಳೆದ ಜನವರಿ ತಿಂಗಳಿನಲ್ಲಷ್ಟೇ ಬೆಂಝ್ ದರ ಶೇಕಡಾ 1ರಿಂದ 3ರಷ್ಟು ಏರಿಕೆಗೊಳಿಸಲಾಗಿತ್ತು. ಇದೀಗ 2013-14ನೇ ಸಾಲಿನ ಬಜೆಟ್ ಬಳಿಕ ಎರಡನೇ ಬಾರಿ ದರ ಏರಿಕೆ ಕಂಡುಬಂದಿದೆ. ಕೇಂದ್ರ ಬಜೆಟ್‌ನಲ್ಲಿ ಪ್ರಯಾಣಿಕ ಹಾಗೂ ಇತರ ಆಮದು ಕಾರುಗಳ ಮೇಲಿನ ಶುಲ್ಕವನ್ನು ಶೇಕಡಾ 75ರಿಂದ 100ಕ್ಕೆ ಏರಿಕೆಗೊಳಿಸಲಾಗಿತ್ತು.
ಪ್ರಸ್ತುತ ದೇಶದಲ್ಲಿ ಬೆಂಝ್ ಎಸ್‌ಯುವಿ ಎಂ ಕ್ಲಾಸ್ ಸೇರಿದಂತೆ ಸಿ ಕ್ಲಾಸ್, ಇ ಕ್ಲಾಸ್ ಹಾಗೂ ಎಸ್ ಕ್ಲಾಸ್ ಕಾರುಗಳನ್ನು ಪುಣೆಯ ಘಟಕದಲ್ಲಿ ಸ್ಥಳೀಯವಾಗಿ ಜೋಡಣೆ ಮಾಡಲಾಗುತ್ತಿದೆ.


Click it and Unblock the Notifications









