ಸ್ಕೀಯಿಂಗ್ ಅಪಘಾತ; ಶುಮೇಕರ್ ತಲೆಗೆ ಗಂಭೀರ ಪೆಟ್ಟು

By Nagaraja

ಫಾರ್ಮುಲಾ ಒನ್ ಮಾಜಿ ಚಾಲಕ ಹಾಗೂ ಏಳು ಬಾರಿಯ ವಿಶ್ವ ಚಾಂಪಿಯನ್ ಮೈಕಲ್ ಶುಮೇಕರ್ ಅವರು ಹಿಮಪರ್ವತದಲ್ಲಿ ನಡೆದ ಸಾಹಸ ಕ್ರೀಡೆ ಸ್ಕೀಯಿಂಗ್ ವೇಳೆ ಜಾರಿಬಿದ್ದು ತಲೆಗೆ ಗಂಭೀರ ಪೆಟ್ಟು ಮಾಡಿಕೊಂಡ ಘಟನೆ ನಡೆದಿದೆ.

ಭಾನುವಾರ ಫ್ರಾನ್ಸ್‌ನ ಆಲ್ಫ್ಸ್ ಹಿಮಪರ್ವತದಿಂದ ವೇಗವಾಗಿ ಜಾರುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ತಲೆ ಹಿಮ ಬಂಡೆಗೆ ಬಡಿದಿದೆ. ತಕ್ಷಣವೇ ತುರ್ತು ಚಿಕಿತ್ಸೆ ನೀಡಿ ಹೆಲಿಕಾಪ್ಟರ್ ಮುಖಾಂತರ ಆಸ್ಪತ್ರೆಗೆ ಸಾಗಿಸಲಾಯಿತು.

Michael Schumacher

ಮೂಲಗಳ ಪ್ರಕಾರ ಶುಮೇಕರ್ ಸ್ಥಿತಿ ಚಿಂತಾಜನಕವಾಗಿದ್ದು, ತಲೆಗೆ ಗಂಭೀರ ಪೆಟ್ಟಾಗಿದೆ ಎನ್ನಲಾಗಿದೆ. ತಕ್ಷಣವೇ 44ರ ಹರೆಯದ ಶುಮೇಕರ್‌ಗೆ ಮೆದುಳಿನ ಶಸ್ತ್ರಚಿಕಿತ್ಸೆ ಒದಗಿಸಲಾಗಿದ್ದರೂ ಕೋಮಾವಸ್ಥೆಯಿಂದ ಇನ್ನು ಹೊರಬಂದಿಲ್ಲ ಎಂದು ತಿಳಿದು ಬಂದಿದೆ.

ರೇಸಿಂಗ್ ಜಗತ್ತಿನಲ್ಲಿ ಅಪಾರ ಸಾಧನೆ ಮೆರೆದಿರುವ ಶುಮೇಕರ್ ಅವರಿಗೆ ಸ್ಕೀಯಿಂಗ್‌ನಲ್ಲೂ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಅವರು 2013ರಲ್ಲಿ ತಮ್ಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.

More from DriveSpark

Article Published On: Monday, December 30, 2013, 9:57 [IST]
English summary
Seven-time Formula One champion Michael Schumacher was in critical condition after undergoing brain surgery following a skiing accident in the French Alps on Sunday, doctors said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+