ಸೋಲರಿಯದ ಛಲಗಾರ; ಕೋಮಾದಿಂದ ಎಚ್ಚೆತ್ತ ಶುಮಿ

By Nagaraja

ಅದು ರೇಸಿಂಗ್ ಟ್ರ್ಯಾಕೇ ಆಗಿರಬಹುದು ಅಥವಾ ನೈಜ ಜೀವನವೇ ಆಗಿರಬಹದು. ಮೈಕಲ್ ಶುಮೇಕರ್ ಅಂದರೆ ಅಷ್ಟು ಬೇಗ ಬದುಕನ್ನು ಬಿಟ್ಟುಕೊಡುವವರಲ್ಲ. ಏಳು ಬಾರಿಯ ವಿಶ್ವ ಚಾಂಪಿಯನ್ ಜರ್ಮನಿಯ ಶುಮೇಕರ್ ಮಗದೊಮ್ಮೆ ಸೋಲರಿಯದ ಸರದಾರ ಎನಿಸಿಕೊಂಡಿದ್ದಾರೆ.

ರೇಸಿಂಗ್ ದುನಿಯಾಕ್ಕೆ ಮೈಕಲ್ ಶೂಮಕರ್ ಅಲ್‌ವಿದಾ - ಮುಂದಕ್ಕೆ ಓದಿ

ಹೌದು, ಸ್ಕೀಯಿಂಗ್ ಅಪಘಾತದಿಂದಾಗಿ ಗಂಭೀರ ಗಾಯಗೊಂಡು ಕಳೆದ ಆರು ತಿಂಗಳಷ್ಟು ಕಾಲ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಕಳೆಯುತ್ತಿದ್ದ, ಶುಮೇಕರ್ ಕೊನೆಗೂ ಎಚ್ಚೆತ್ತುಕೊಂಡಿದ್ದು, ಪ್ರಜ್ಞಾಸ್ಥಿತಿಗೆ ಮರಳಿದ್ದಾರೆ. ಈ ಮೂಲಕ ವೈದ್ಯ ಲೋಕದ ಜೊತೆಗೆ ಜಗತ್ತಿನ ಲಕ್ಷಾಂತರ ಅಭಿಮಾನಿಗಳಲ್ಲಿ ಮಂದಹಾಸ ಮೂಡಿಸಿದ್ದಾರೆ.

ಸೋಲರಿಯದ ಛಲಗಾರ; ಕೋಮಾದಿಂದ ಎಚ್ಚೆತ್ತ ಶುಮಿ

ರೇಸ್ ಟ್ರ್ಯಾಕ್‌ನಲ್ಲಿ ಛಲ ಬಿಡದ ಚಾಲಕರಾಗಿ ಗುರುತಿಸಿಕೊಂಡಿದ್ದ ಮೈಕಲ್ ಶುಮೇಕರ್ ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳುವ ನಂಬಿಕೆ ಅಭಿಮಾನಿಗಳಲ್ಲಿತ್ತು. ಇದನ್ನು ಹುಸಿಗೊಳಿಸದ ಶುಮೇಕರ್ ಕೊನೆಗೂ ಸಾವನ್ನು ಗೆದ್ದು ಬಂದಿದ್ದು, ಆಸ್ಪತ್ರೆಯಿಂದ ಹೊರ ಬಂದಿದ್ದಾರೆ.

ಸೋಲರಿಯದ ಛಲಗಾರ; ಕೋಮಾದಿಂದ ಎಚ್ಚೆತ್ತ ಶುಮಿ

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಫ್ರಾನ್ಸ್‌ನ ಆಲ್ಫ್ಸ್ ಪರ್ವತದ ಮೆರಿಬೆಲ್ ರಿಸಾರ್ಟ್‌ನಲ್ಲಿ ಸಂಭವಿಸಿದ ಸ್ಕೇಯಿಂಗ್ ಅಪಘಾತದ ವೇಳೆ ಶುಮಿ ತಲೆ ಬಂಡೆಗಲ್ಲಿಗೆ ಬಡಿದು ಗಂಭೀರ ಗಾಯ ಮಾಡಿಕೊಂಡಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕೋಮಾ ಸ್ಥಿತಿಯಿಂದ ಹೊರಬಂದಿದ್ದು, ತಮ್ಮ ಆಪ್ತ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದ್ದಾರೆ.

ಸೋಲರಿಯದ ಛಲಗಾರ; ಕೋಮಾದಿಂದ ಎಚ್ಚೆತ್ತ ಶುಮಿ

ಎರಡು ಬಾರಿ ಲೌರೆಸ್ ವಿಶ್ವ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾಗಿರುವ ಶುಮೇಕರ್, ಅತಿ ಹೆಚ್ಚು ಬಾರಿ ಚಾಂಪಿಯನ್, ರೇಸ್ ವಿನ್, ಫಾಸಸ್ಟ್ ಲ್ಯಾಪ್, ಪೊಲ್ ಪೊಜಿಷನ್ ಮತ್ತು ಒಂದೇ ಅವಧಿಯಲ್ಲಿ ಅತ್ಯಂತ ಹೆಚ್ಚು ಗೆಲುವು (2004ರಲ್ಲಿ 13 ಬಾರಿ) ಹೀಗೆ ಹತ್ತು ಹಲವಾರು ದಾಖಲೆಗಳನ್ನು ಹೊಂದಿದ್ದಾರೆ.

ಸೋಲರಿಯದ ಛಲಗಾರ; ಕೋಮಾದಿಂದ ಎಚ್ಚೆತ್ತ ಶುಮಿ

ಫಾರ್ಮುಲಾ ಒನ್ ಇತಿಹಾಸದಲ್ಲೇ ಸರ್ವಕಾಲಿಕ ಶ್ರೇಷ್ಠ ಚಾಲಕ ಎನಿಸಿಕೊಂಡಿರುವ ಶುಮೇಕರ್, 1994, 1995, 2000, 2001, 2002, 2003 ಮತ್ತು 2004ನೇ ಇಸವಿಗಳಲ್ಲಿ ಸೇರಿದಂತೆ ಒಟ್ಟು ಏಳು ಬಾರಿ ಎಫ್1 ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.

ಸೋಲರಿಯದ ಛಲಗಾರ; ಕೋಮಾದಿಂದ ಎಚ್ಚೆತ್ತ ಶುಮಿ

ಯುನೆಸ್ಕೋದ ಚಾಲಕ ಸುರಕ್ಷತೆಯ ಬ್ರಾಂಡ್ ಅಂಬಾಸಿಡರ್ ಕೂಡಾ ಆಗಿರುವ ಶುಮೇಕರ್ ಹಲವಾರು ಮಾನವೀಯ ಕಾರ್ಯಕ್ರಮಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಲ್ಲದೆ ಸಹಾಯಾರ್ಥ ಸಂಸ್ಥೆಗಾಗಿ ಹತ್ತು ಮಿಲಿಯನ್ ಅಮೆರಿಕನ್ ಡಾಲರ್ ಸಹಾಯಾಸ್ತ ಸಲ್ಲಿಸಿದ್ದರು.

ಸೋಲರಿಯದ ಛಲಗಾರ; ಕೋಮಾದಿಂದ ಎಚ್ಚೆತ್ತ ಶುಮಿ

ರೇಸಿಂಗ್ ದುನಿಯಾಕ್ಕೆ ಶುಮೇಕರ್ ಅಲ್‌ವಿದಾ - ಮುಂದಕ್ಕೆ ಓದಿರಿ


More from DriveSpark

Article Published On: Monday, June 16, 2014, 17:05 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+