ಶುಮೇಕರ್ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಿಲ್ಲ; ಅಭಿಮಾನಿಗಳಲ್ಲಿ ಆಂತಕ

By Nagaraja

ಫಾರ್ಮುಲಾ ಒನ್ ಲೆಜೆಂಡ್ ಜರ್ಮನಿಯ ಐಕಾನಿಕ್ ಮೋಟಾರುಸ್ಪೋರ್ಟ್ ರೇಸರ್ ಮೈಕಲ್ ಶುಮೇಕರ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಭವಿಸಿದ ಸ್ಕೀಯಿಂಗ್ ಅಪಘಾತದಲ್ಲಿ ತೀವ್ರ ಗಾಯಾಳುವಾಗಿ ಕೋಮಾ ಸ್ಥಿತಿಗೆ ತಲುಪಿದ್ದರು.

ಇದೀಗ ಸತತ ಐದು ತಿಂಗಳ ಚಿಕಿತ್ಸೆಗೆಯ ಬಳಿಕವೂ ಈ ಏಳು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಶುಮೇಕರ್ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲವೆಂದು ವೈದ್ಯ ಮೂಲಗಳು ತಿಳಿಸಿವೆ.

Michael Schumacher

ಈ ಎಲ್ಲ ವಿಚಾರದಿಂದಾಗಿ ಶುಮೇಕರ್‌ ಗಾಯದ ಆಳದ ಬಗ್ಗೆ ಸಂಶಯ ಮೂಡತೊಡಗಿದೆ. ಈ ಬಗ್ಗೆ ಕುಟುಂಬ ಮೂಲಗಳಿಂದ ಯಾವುದೇ ಸ್ಪಷ್ಟನೆ ಬರುತ್ತಿಲ್ಲ. ಇದರಿಂದ ಅಭಿಮಾನಿಗಳಲ್ಲಿ ತೀವ್ರ ಆತಂಕ ಮನೆ ಮಾಡುವಂತಾಗಿದೆ.

ಶುಮೇಕರ್ ಬಗ್ಗೆ ಸುಮ್ನೇ ಗಾಳಿ ಸುದ್ದಿ ಹರಡಬಾರದೆಂಬುದು ಕುಟುಂಬದ ಇರಾದೆಯಾಗಿದೆ. ಈ ಎಲ್ಲದರ ನಡುವೆಯೂ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಆಶಾದಾಯಕ ಬೆಳವಣಿಗೆ ಕಂಡುಬರದಿರುವುದು ನಿಜಕ್ಕೂ ವೈದ್ಯಲೋಕಕ್ಕೆ ಸವಾಲಾಗಿ ಪರಿಣಮಿಸುತ್ತಿದೆ.

ಕಳೆದ ಎಪ್ರಿಲ್ ತಿಂಗಳಲ್ಲಿ ಶುಮೇಕರ್ ಮ್ಯಾನೇಜರ್ ಸಬಿನ್ ಕೆಹ್ಮ್ ನೀಡಿರುವ ಹೇಳಿಕೆ ಪ್ರಕಾರ, ಐಕಾನಿಕ್ ರೇಸ್ ಪಟು ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ತಿಳಿಸಿದ್ದರು. ಆದರೆ ಇತ್ತೀಚೆಗಿನ ಬೆಳವಣಿಗೆಗಳು ಆತಂಕ ಮೂಡಿಸುತ್ತಿದ್ದು, ಶುಮೇಕರ್ ಜೀವನ್ಮರಣದ ನಡುವೆ ಹೋರಾಟ ನಡೆಸುವಂತಾಗಿದೆ.

ಘಟನೆಯ ಹಿನ್ನಲೆ ಓದಿ

More from DriveSpark

Article Published On: Friday, June 13, 2014, 11:28 [IST]
English summary
Formula One Legend and Germany's iconic motorsport figure Michael Schumacher has been in an induced coma since December. The German suffered head injuries during a skiing accident, while he was with his family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+