ಸಹಜ ಜೀವನದತ್ತ ಶುಮೇಕರ್; ಆದರೆ ರೇಸ್ ಇನ್ನು ಕನಸಿನ ಮಾತು

By Nagaraja

ಅಸಂಖ್ಯಾತ ಅಭಿಮಾನಿಗಳ ಪ್ರಾರ್ಥನೆಯನ್ನು ಕೊನೆಗೂ ದೇವರು ಆಲಿಸಿದ್ದಾರೆ. ಹೌದು, ರೇಸ್ ಟ್ರ್ಯಾಕ್‌ನ ಜೀವಂತ ಮಾಜಿ ದಿಗ್ಗಜ ಮೈಕಲ್ ಶುಮೇಕರ್ ಮತ್ತೆ ಸಹಜ ಜೀವನಕ್ಕೆ ಮರಳಿದ್ದಾರೆ ಎಂಬುದು ಈಗಿನ ಶುಭ ಸಮಾಚಾರ.

ಈ ಸಂಬಂಧ ಶುಮೇಕರ್ ಆಪ್ತರಲ್ಲಿ ಓರ್ವರಾಗಿರುವ ಎಫ್‌ಐಎ ಅಧ್ಯಕ್ಷ ಜೀನ್ ಟೊಡ್ಟ್ ಖುಷಿ ಸುದ್ದಿ ಬಿತ್ತರಿಸಿದ್ದು, "ಇನ್ನು ಕೆಲವೇ ಸಮಯಗಳಲ್ಲಿ ಶುಮೇಕರ್ ಸಹಜ ಜೀವನ ಪರಿಸ್ಥಿತಿಗೆ ಮರಳಿದ್ದಾರೆ" ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಮಾತು ಮುಂದುವರಿಸಿದ ಅವರು "ಸದ್ಯ ಶುಮೇಕರ್ ಕುಟುಂಬದೊಂದಿಗೆ ಇದ್ದು, ನಿಧಾನವಾಗಿಯಾದರೂ ಚಿಕಿತ್ಸೆಗೆ ಉತ್ತಮ ರೀತೀಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ" ಎಂದಿದ್ದಾರೆ.

Michael Schumacher

ಆದರೆ ಅತ್ಯಂತ ಬೇಸರ ಸಂತಿಯೆಂದರೆ ಬಲ್ಲ ಮೂಲಗಳ ಪ್ರಕಾರ ಶುಮೇಕರ್ ಅವರಿಗೆ ಮತ್ತೆ ಹಿಂದಿನ ಹಾಗೆ ರೇಸ್ ಟ್ರ್ಯಾಕ್‌ಗೆ ಇಳಿಯಲು ಸಾಧ್ಯವಿಲ್ಲ ಎಂಬುದನ್ನು ವೈದ್ಯರು ತಿಳಿಸಿರುವ ಬಗ್ಗೆಯೂ ಮಾಹಿತಿಯಿದೆ. ರೇಸ್ ಟ್ರ್ಯಾಕ್‌ಗೆ ವಿದಾಯ ಹೇಳಿದರೂ ಶುಮೇಕರ್ ರೇಸ್ ಜೊತೆಗಿನ ನಂಟು ಬಿಟ್ಟಿರಲಿಲ್ಲ.

ಫಾರ್ಮುಲಾ ಒನ್ ಜಗತ್ತಿನ ಜೀವಂತ ದಂತಕಥೆಯಾಗಿರುವ ಶುಮೇಕರ್ ಏಳು ಬಾರಿ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆದರೆ 2013 ಡಿಸೆಂಬರ್‌ನಲ್ಲಿ ಫ್ರಾನ್ಸ್‌ನ ಆಲ್ಫ್ಸ್ ಹಿಮಪರ್ವತದಲ್ಲಿ ಸಾಹಸ ಕ್ರೀಡೆ ಸ್ಕೀಯಿಂಗ್ ಮಾಡುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಜಾರಿ ಬಿದಿದ್ದರು. ಪರಿಣಾಮ ಹಿಮ ಕಲ್ಲಿಗೆ ತಲೆ ಬಡಿದಿದ್ದರಿಂದ ಗಂಭೀರ ಪೆಟ್ಟಾಗಿ ಕೋಮಾ ಸ್ಥಿತಿಗೆ ತೆರಳಿದ್ದರು. ತದಾ ಬಳಿಕ ನಡೆದ ಮ್ಯಾರಥನ್ ಚಿಕಿತ್ಸೆ ಹಾಗೂ ಅಭಿಮಾನಿಗಳ ಪ್ರಾರ್ಥನೆಯಿಂದಾಗಿ ಪ್ರಜ್ಞಾ ಸ್ಥಿತಿಗೆ ಮರಳುವಲ್ಲಿ ಯಶಸ್ವಿಯಾಗಿದ್ದರು.

Most Read Articles

Kannada
English summary
Finally, some good news surrounding Multi-championship-winning Formula 1 driver Michael Schumacher road to recovery after his tragic skiing accident last December.
Story first published: Wednesday, October 8, 2014, 11:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X