ನೆಕ್ಸ್ಟ್ ಜನರೇಷನ್ ಮಿನಿ ಬರಮಾಡಿಕೊಳ್ಳಲು ಸಜ್ಜಾಗಿರಿ!
ಮುಂದಿನ ಜನಾಂಗದ ಮಿನಿ ಕಾರನ್ನು ಬರಮಾಡಿಕೊಳ್ಳಲು ಸಜ್ಜಾಗಿರಿ. ಹೌದು ನಾಲ್ಕನೇ ಜನರೇಷನ್‌ನ ಮಿನಿ ಕಾರು ಸೆಪ್ಟೆಂಬರ್ 18ರಂದು ಅನಾವರಣಗೊಳ್ಳಲಿದೆ.
ಸೆಪ್ಟೆಂಬರ್ 18 ದಿನಾಂಕ ಆಯ್ಕೆ ಮಾಡಿಕೊಳ್ಳಲು ವಿಶೇಷ ಕಾರಣವೊಂದಿದೆ. ಯಾಕೆಂದರೆ ಈ ಹಿಂದೆ ಮಿನಿಗೆ ನೈಜ ವಿನ್ಯಾಸ ಕಲ್ಪಿಸಿಕೊಟ್ಟಿದ್ದ ಸರ್ ಅಲೆಕ್ ಇಸ್ಸಿಗಾನಿಸ್ 1959ನೇ ಇಸವಿಯ ಇದೇ ದಿನ ಜನ್ಮ ತಾಳಿದ್ದರು. ಅವರಿಗೆ ಗೌರವ ಸೂಚಿಸುವ ಸಲುವಾಗಿ ಮುಂದಿನ ಜನಾಂಗದ ಮಿನಿ ಅನಾವರಣಗೊಳಿಸಲಾಗುತ್ತಿದೆ.
ಈ ಸಂಬಂಧ ಮಿನಿ ಫೇವರಿಟ್ ಉತ್ಪಾದಕ ಘಟಕವಾಗಿರುವ ಆಕ್ಸ್‌ಫರ್ಡ್‌ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ. ಇದಾದ ಬೆನ್ನಲ್ಲೇ ನಡೆಯಲಿರುವ ಟೊಕಿಯೋ ಮೋಟಾರ್ ಶೋ ಹಾಗೂ ಲಾಸ್ ಏಜಂಲೀಸ್ ಆಟೋ ಶೋದಲ್ಲೂ ನೂತನ ಮಿನಿ ಅವತಾರವಾಗಲಿದೆ.
ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ನಾಲ್ಕನೇ ಜನರೇಷನ್ ಮಿನಿ 2014 ಮೊದಲಾರ್ಧದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. ಇದು ತನ್ನ ಮಾತೃಸಂಸ್ಥೆ ಬಿಎಂಡಬ್ಲ್ಯು ಯುಕೆಎಲ್ ಫ್ಲಾಟ್ ಫಾರ್ಮ್‌ನಲ್ಲಿ ತಯಾರಿಯಾಗಲಿದೆ. ಇದು 1.5 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.


Click it and Unblock the Notifications









