ಷೆವರ್ಲೆ ಮಾಲಿಕರಿಗಾಗಿ ವಿಶೇಷ ಸ್ಮಾರ್ಟ್‌ಫೋನ್ ಅಪ್ಲಿಕೇಷನ್
ನೀವು ಷೆವರ್ಲೆ ಕಾರಿನ ಹೆಮ್ಮೆಯ ಮಾಲಿಕರಾಗಿದ್ದರೆ ನಿಮಗೀಗ ವಿಶೇಷ ಸ್ಮಾರ್ಟ್ ಫೋನ್ ಅಪ್ಲಿಕೇಷನ್‌ವೊಂದನ್ನು ಈ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಿದ್ಧಪಡಿಸಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಮೈ ಷೆವರ್ಲೆ ಇಂಡಿಯಾ ಎಂದು ಹೆಸರಿಸಲ್ಪಟ್ಟಿರುವ ಅಪ್ಲಿಕೇಷನ್ ಗ್ರಾಹಕರಿಗೆ ಹೆಚ್ಚು ಆರಾಮದಾಯಕ ರೈಡಿಂಗ್ ಪ್ರದಾನ ಮಾಡಲು ನೆರವಾಗಲಿದೆ. ಈಗಾಗಲೇ ಹಲವಾರು ದೇಶಗಳಲ್ಲಿ ಮೈ ಷೆವರ್ಲೆ ಇಂಡಿಯಾ ಸೌಲಭ್ಯ ಒದಗಿಸಿರುವ ಸಂಸ್ಥೆಯು ಭಾರತದಲ್ಲಿಯೂ ಇದನ್ನು ಕಾರ್ಯರೂಪಕ್ಕೆ ತಂದಿದೆ.

ನೀವೀಗ ನಿಮ್ಮ ಷೆವರ್ಲೆ ಕಾರನ್ನು ಮೊಬೈಲ್ ಅಪ್ಲಿಕೇಷನ್ ಮೂಲಕ ಸರ್ವಿಸ್ ದಿನಾಂಕವನ್ನು ಮುಂಗಡವಾಗಿ ಬುಕ್ಕಿಂಗ್ ಮಾಡಬಹುದಾಗಿದೆ. ಹಾಗೆಯೇ ಹತ್ತಿರವಿರುವ ಷೆವರ್ಲೆ ಸರ್ವೀಸ್ ಸೆಂಟರ್ ಬಗ್ಗೆಯೂ ಮಾಹಿತಿ ಕಲೆ ಹಾಕಬಹುದಾಗಿದೆ.
ಇದರ ಜತೆಗೆ ಪಾರ್ಕಿಂಗ್ ರಿಮೈಂಡ್ ಕೂಡಾ ಸೆಟ್ಟಿಂಗ್ ಮಾಡುವ ಅವಕಾಶವಿದೆ. ಒಟ್ಟಿನಲ್ಲಿ ಮಾಲಿಕರಿಗೆ ಬೇಕಾದ ಎಲ್ಲ ವಿವರಗಳನ್ನು ಈ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಮೂಲಕ ನಿಮ್ಮದಾಗಿಸಬಹುದಾಗಿದೆ.


Click it and Unblock the Notifications