ಬೆಂಗ್ಳೂರಲ್ಲಿ ಮೈಟಿವಿಎಸ್ 4ನೇ ಸರ್ವೀಸ್ ಔಟ್ಲೆಟ್ ಆರಂಭ

ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಟಿವಿಎಸ್, ಬೆಂಗಳೂರಿನಲ್ಲಿ ತನ್ನ ನಾಲ್ಕನೇ ಮಲ್ಟಿ ಬ್ರಾಂಡ್ ಕಾರು ಸರ್ವೀಸ್ ಸೌಲಭ್ಯ ಆರಂಭಿಸಿದೆ. ಈ ಮೂಲಕ ಬೆಂಗಳೂರಿನಲ್ಲಿ ನಾಲ್ಕನೇ ಹಾಗೂ ರಾಜ್ಯದ್ಯಾಂತ ಒಟ್ಟಾರೆಯಾಗಿ ಏಳನೇ ಓಟ್ಲೆಟ್ ತೆರೆದುಕೊಂಡಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ನಗರದಲ್ಲಿ ನೂತನ ಮೈಟಿವಿಎಸ್ (ಟಿವಿಎಸ್ ಬ್ರಾಂಡ್ ಹೆಸರು) ಘಟಕ ಆರಂಭಗೊಂಡಿದೆ. ಇದರೊಂದಿಗೆ ದೇಶದ್ಯಾಂತ ತನ್ನ ಔಟ್ಲೆಟ್ ಸಂಖ್ಯೆಯನ್ನು 79ಕ್ಕೆ ಏರಿಸಿದೆ. ನೂತನ ಸೌಲಭ್ಯ ಮೂಲಕ ಎಲ್ಲ ಕಾರು ಬ್ರಾಂಡ್‌ಗಳನ್ನು ಕೈಗೆಟುಕುವ ವೆಚ್ಚಗಳಲ್ಲಿ ಸರ್ವೀಸ್ ಮಾಡಿಕೊಡಲಾಗುವುದು. ನೂತನ ಔಟ್ಲೆಟ್ 25,000 ಚದರ ಅಡಿ ಪ್ರದೇಶದಲ್ಲಿ ಹರಡಿಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಟಿವಿಎಸ್ ಆಟೋಮೊಬೈಲ್ ಸೊಲ್ಯೂಷನ್ ಲಿಮಿಟೆಡ್ ಸಿಇಒ ಹಾಗೂ ಅಧ್ಯಕ್ಷ ಸಂಜಯ್ ನಿಗಮ್, ಉದ್ಯಾನ ನಗರಿಯಲ್ಲಿ ಆರಂಭವಾಗಿರುವ ನಾಲ್ಕನೇ ಘಟಕವು ಗ್ರಾಹಕರ ನಂಬಿಕೆಯನ್ನು ವೃದ್ಧಿಸಲಿದೆ ಎಂದು ಹೇಳಿದ್ದಾರೆ. ಹಾಗೆಯೇ ಮುಂದಿನ ಎರಡು ಮೂರು ವರ್ಷಗಳಲ್ಲಿ ರಾಜ್ಯದ ಇನ್ನಷ್ಟು ನಗರಗಳಿಗೆ ವಿಸ್ತರಿಸುವ ಯೋಜನೆ ವ್ಯಕ್ತಪಡಿಸಿದರು.

ನೂತನ ಸರ್ವೀಸ್ ಘಟಕದಲ್ಲಿ ಎಲ್ಲ ರೀತಿಯ ಆಧುನಿಕ ಸೌಲಭ್ಯಗಳಿರಲಿದ್ದು, 3ಡಿ ವೀಲ್ ಜೋಡಣೆ, ವೀಲ್ ಸಮತೋಲನ, ಎಂಜಿನ್ ಸ್ಕ್ಯಾನರ್, ಎಸಿ ಗ್ಯಾಸ್ ರಿಚಾರ್ಜರ್ ಮುಂತಾದ ಸೇವೆಗಳನ್ನು ಹೊಂದಿರಲಿದೆ. ಇದರ ಜತೆಗೆ ವಿಸ್ತರಿತ ಗ್ಯಾರಂಟಿ ಸೌಲಭ್ಯ ಹಾಗೂ 24x7 ರೋಡ್ ಅಸಿಸ್ಟಂಟ್ ಸರ್ವೀಸ್ ಸೇವೆಯನ್ನು ಖಾತ್ರಿಪಡಿಸುತ್ತಿದೆ. ಉಳಿದಂತೆ ಬೆಂಗಳೂರಿನಲ್ಲಿರುವ ಇತರ ಮೂರು ಔಟ್‌ಲೆಟ್‌ಗಳು ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ ಹಾಗೂ ವೈಟ್ ಫೀಲ್ಡ್ ರಸ್ತೆಗಳಲ್ಲಿ ಸ್ಥಿತಗೊಂಡಿದೆ.

More from DriveSpark

Article Published On: Monday, June 17, 2013, 14:44 [IST]
English summary
MyTVS (brand name for TVS Automobile Solutions Ltd.), India’s largest chain of multi-brand car service network, announced the inauguration of its new multi-brand car service facility in the Electronic City, Bengaluru. This is the 4th outlet in Bengaluru and 7th outlet in the State of Karnataka taking the tally of total number of outlets to 79 across India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+