4 ಲಕ್ಷ ಅಸುಪಾಸಿನಲ್ಲಿ ಹೊಸ ಅಂಬಾಸಿಡರ್ ಆಗಮನ

By Nagaraja

ನಾವು ಈ ಹಿಂದೆಯೇ ಸೂಚಿಸಿರುವಂತೆಯೇ ಹಿಂದೂಸ್ತಾನ್ ಮೋಟಾರ್ಸ್ ತನ್ನ ಜನಪ್ರಿಯ ಅಂಬಾಸಿಡರ್ ನೂತನ ಮಾಡೆಲನ್ನು ಸದ್ಯದಲ್ಲೇ ಮಾರುಕಟ್ಟೆಗೆ ಪರಿಚಯಿಸಲಿದೆ. ಮೂಲಗಳ ಪ್ರಕಾರ ವರ್ಷಾಂತ್ಯದಲ್ಲಿ ಅಥವಾ 2014 ವರ್ಷಾರಂಭದಲ್ಲಿ ಆಗಮನವಾಗಲಿದೆ.

ಸಮಕಾಲೀನ ಮಾರುಕಟ್ಟೆಯಲ್ಲಿ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಹಿಂದೂಸ್ತಾನ್ ಮೋಟಾರ್ಸ್ ನೂತನ ಅಂಬಾಸಿಡರ್ ಮಾಡೆಲ್ ಬಿಡುಗಡೆಯೊಂದಿಗೆ ಗತಕಾಲದ ವೈಭವ ಮರಳಿ ಪಡೆಯುವ ಇರಾದೆಯಲ್ಲಿದೆ.

ಸದ್ಯ ಬಂದಿರುವ ಮಾಹಿತಿ ಪ್ರಕಾರ ನೂತನ ಅಂಬಾಸಿಡರ್ ಕಾರು ದರ ನಾಲ್ಕರಿಂದ ಐದು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಅಬಕಾರಿ ಸುಂಕ ವಿನಾಯಿತಿ ಪಡೆಯುವ ಹಾಗೂ ಮಾರಾಟ ಪ್ರಗತಿ ಸಾಧಿಸುವ ಹಿನ್ನಲೆಯಲ್ಲಿ ಫೋರ್ ಸಬ್ ಮೀಟರ್ ಕಾರನ್ನು ಹಿಂದೂಸ್ತಾನ್ ಮೋಟಾರ್ಸ್ ಲಾಂಚ್ ಮಾಡುತ್ತಿದೆ.

ದೇಶದ ಅತಿ ಜನಪ್ರಿಯ ಕಾರುಗಳಲ್ಲಿ ಒಂದಾಗಿರುವ ಅಂಬಾಸಿಡರ್ 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಪಡೆಯಲಿದೆ. ಇದು ಫ್ಯಾಮಿಲಿ ಯಾತ್ರಿಕರಿಗೆ ಆರಾಮದಾಯಕ ಪಯಣವನ್ನು ನೀಡಲಿದೆ.

More from DriveSpark

Article Published On: Tuesday, April 23, 2013, 15:37 [IST]
English summary
To raise the sales of its signature product, the iconic Ambassador, the company is planning to launch a smaller variant of the car by December 2013
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+