ಅಭಿವೃದ್ಧಿ ಹಂತದಲ್ಲಿ ನೆಕ್ಸ್ಟ್ ಜನರೇಷನ್ ಜಾಗ್ವಾರ್
ಮುಂದಿನ ತಲೆಮಾರಿನ ಜಾಗ್ವಾರ್ ಎಕ್ಸ್‌ಎಫ್ ಮತ್ತು ಎಕ್ಸ್‌ಜೆ ಆವೃತ್ತಿಗಳು ಈಗಾಗಲೇ ಅಭಿವೃದ್ಧಿ ಹಂತದಲ್ಲಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾಗ್ವಾರ್ ವಿನ್ಯಾಸ ನಿರ್ದೇಶಕ ಇಯಾನ್ ಕ್ಯಾಲಮ್ ನೆಕ್ಸ್ಟ್ ಜನರೇಷನ್ ಜಾಗ್ವಾರ್ ತೆರೆಮರೆಯಲ್ಲಿ ಸಜ್ಜಾಗುತ್ತಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಸಮಕಾಲೀನ ಜಾಗ್ವಾರ್ ಎಕ್ಸ್‌ಎಫ್ ಆವೃತ್ತಿಯನ್ನು 2008ನೇ ಇಸವಿಯಲ್ಲಿ ಅನಾವರಣಗೊಳಿಸಲಾಗಿತ್ತು. ಬಳಿಕ 2011ರಲ್ಲಿ ಫೇಸ್‌ಲಿಫ್ಟ್ ವರ್ಷನ್ ಆಗಮನವಾಗಿತ್ತು. ಇನ್ನು ಜಾಗ್ವಾರ್ ಉತ್ತರಾಧಿಕಾರಿ 2016ರಲ್ಲಿ ಆಗಮನವಾಗುವುದು ಬಹುತೇಕ ಖಚಿತವಾಗಿದೆ.

ಸಿ-ಎಕ್ಸ್17 ಕಾನ್ಸೆಪ್ಟ್ ಅಡಿಯಲ್ಲಿ ನೂತನ ವಿನ್ಯಾಸದಲ್ಲಿ ಜಾಗ್ವಾರ್ ಸಿದ್ಧಗೊಳ್ಳಲಿದೆ. ಇದು ಪ್ರಮುಖವಾಗಿಯೂ ಬಿಎಂಡಬ್ಲ್ಯು 5 ಸಿರೀಸ್ ಕಾರಿಗೆ ಸ್ಪರ್ಧೆ ಒಡ್ಡಲಿದೆ.
ಜಾಗ್ವಾರ್ ಎಫ್-ಟೈಪ್ ಕ್ರೀಡಾ ಕಾರೆಂಬ ಪಟ್ಟ ಗಿಟ್ಟಿಸಿಕೊಂಡಿದ್ದರೆ ನೂತನ ಎಕ್ಸ್‌ಎಫ್ ಪ್ರೀಮಿಯಂ ಸಲೂನ್ ಎಂದೆನಿಸಿಕೊಳ್ಳಲಿದೆ. ಈ ಹೊಸ ಕಾರಿನ ಆಗಮನಕ್ಕೂ ಮುನ್ನ 2014ರಲ್ಲಿ ಇನ್ನೊಂದು ಫೇಸ್‌ಲಿಫ್ಟ್ ವರ್ಷನ್ ಪರಿಚಯವಾಗುವ ನಿರೀಕ್ಷೆಯಿದೆ.


Click it and Unblock the Notifications








