ನಿಸ್ಸಾನ್ ಆನ್‌ಲೈನ್ ಶಾಪಿಂಗ್ ಹಬ್ಬ; ಆಫರುಗಳ ಸುರಿಮಳೆ

Posted By:

ಕೆಲವು ದಿನಗಳ ಹಿಂದೆಯಷ್ಟೇ ನಿಸ್ಸಾನ್ ಕಾರುಗಳನ್ನು ಅಂತರ್ಜಾಲದಲ್ಲೂ ಖರೀದಿಸಬಹುದೆಂಬ ಮಾಹಿತಿಯನ್ನು ಹೊರಗೆಡವಿದ್ದೆವು. ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟಿರುವ ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು, 'ನಿಸ್ಸಾನ್ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ 2013' (ಜಿಎಫ್‌ಎಸ್‌ಎಫ್) ಗ್ರಾಹಕರಿಗೆ ಪರಿಚಯಿಸುತ್ತಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಭೇಟಿ ಕೊಡುತ್ತಿರಿ

ಕೇವಲ ಮೂರು ದಿನಗಳ ವರೆಗೆ ಆಫರ್ ಲಭ್ಯವಿರಲಿದೆ. ಈ ಮೂಲಕ ಗ್ರಾಹಕರಿಗೆ ನಿಸ್ಸಾನ್ ಮಾಡೆಲ್ ಖರೀದಿ ವೇಳೆ ರು. 10,000ದಿಂದ ಹಿಡಿದು 5.6 ಲಕ್ಷ ರು.ಗಳ ವರೆಗೆ ಉಳಿತಾಯ ಮಾಡುವ ಅವಕಾಶವಿದೆ. ಪ್ರಸ್ತು ಆಫರ್ ಡಿಸೆಂಬರ್ 11ರಿಂದ ಆರಂಭವಾಗಿದ್ದು, 13ರ ವರೆಗೆ ಮುಂದುವರಿಯಲಿದೆ.

Nissan Great Online Shopping Festival 2013

ಗ್ರಾಹಕರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮುಂಖಾತರ ಬುಕ್ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಜನವರಿಯಿಂದ ನಿಸ್ಸಾನ್ ದರ ಏರಿಕೆ ನೀತಿ ಜಾರಿಗೆ ಬರುವುದರಿಂದ ಕಾರು ಖರೀದಿಗಿದು ಸೂಕ್ತ ಅವಕಾಶವಾಗಿರಲಿದೆ.

ನಿಸ್ಸಾನ್ ಯಾವೆಲ್ಲ ಮಾದರಿಗಳಲ್ಲಿ ಎಷ್ಟೆಷ್ಟು ಉಳಿತಾಯ?

  • ಮೈಕ್ರಾ- ರು. 40,000 ವರೆಗೆ
  • ಮೈಕ್ರಾ ಆಕ್ಟಿವ್- ರು. 15,000 ವರೆಗೆ
  • ಇವಾಲಿಯಾ- ರು. 2,30,000 ವರೆಗೆ
  • ಟೆರನೊ- ರು. 10,000 ವರೆಗೆ
  • ಸನ್ನಿ- ರು. 75.000 ವರೆಗೆ
  • ಟಿಯಾನಾ- ರು. 5,60,000 ವರೆಗೆ

ಹೆಚ್ಚಿನ ಮಾಹಿತಿಗಾಗಿ ಭೇಟಿ ಕೊಡಿರಿ http://www.nissan-gosf.in/

English summary
Earlier this week, Nissan India announced it's intent to sell its vehicles online. Now, taking it one step further, the automaker has joined the on-going Great Online Shopping Festival (GOSF) 2013, by launching the Nissan.in/gosf site.
Story first published: Friday, December 13, 2013, 11:28 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark