ಸ್ವಾತಂತ್ರ್ಯ ಸಂಭ್ರಮದ ಬೆನ್ನಲ್ಲೇ ನಿಸ್ಸಾನ್ ಎಸ್‌ಯುವಿ ಅನಾವರಣ

Written By:

ಕೆಲವು ವಾರಗಳ ಹಿಂದೆಯಷ್ಟೇ ನಿಸ್ಸಾನ್ ಟೆರಾನೊ ಕಾಂಪಾಕ್ಟ್ ಎಸ್‌ಯುವಿ ಕಾರಿನ ರಹಸ್ಯ ಚಿತ್ರಣಗಳು ಬಿಡುಗಡೆಗೊಂಡಿದ್ದವು. ಇದೀಗ ಕಂಪನಿಯು ಈ ಬಹುನಿರೀಕ್ಷಿತ ಕಾರನ್ನು ಆಗಸ್ಟ್ 20ರಂದು ಅನಾವರಣಗೊಳಿಸುವುದಾಗಿ ತಿಳಿಸಿದೆ.

ಅಂದರೆ ಸ್ವಾತಂತ್ರ್ಯ ಸಂಭ್ರಮದ ಬೆನ್ನಲ್ಲೇ ಜರ್ಮನಿಯ ಕಾರು ತಯಾರಕ ಸಂಸ್ಥೆಯ ಎಸ್‌ಯುವಿ ಕಾರು ದೇಶಕ್ಕೆ ಪರಿಚಯವಾಗಲಿದೆ. ನಿಮ್ಮ ಮಾಹಿತಿಗಾಗಿ ರೆನೊ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡು ನಿಸ್ಸಾನ್ ಟೆರನೊ ರೂಪದಲ್ಲಿ ದೇಶಕ್ಕೆ ಎಂಟ್ರಿ ಕೊಡುತ್ತಿದೆ.

To Follow DriveSpark On Facebook, Click The Like Button

ಹಾಗಿದ್ದರೂ ಡಸ್ಟರ್‌ಗಿಂತ ಪ್ರೀಮಿಯಂ ವಿನ್ಯಾಸವನ್ನು ಟೆರನೊ ಪಡೆದುಕೊಳ್ಳಲಿದೆ. ಹಿಂದುಗಡೆ ಇದರ ವಿಭಜಿತ ಟೈಲ್ ಲೈಟ್ ಮತ್ತೊಂದು ಆಕರ್ಷಕ ಫೀಚರ್ ಆಗಿದೆ.

ಪ್ರೀಮಿಯಂ ಕಾರಾಗಿದ್ದರಿಂದ ಡಸ್ಟರ್‌ಗೆ ಸ್ಪರ್ಧೆ ಒಡ್ಡುವ ಸಾಧ್ಯತೆ ಕಡಿಮೆಯಾಗಿದೆ. ಹಾಗೆಯೇ ಡಸ್ಟರ್‌ಗೆ ಹೋಲಿಸಿದರೆ ದರ ಸ್ವಲ್ಪ ದುಬಾರಿಯಾಗಿರಲಿದೆ ಎಂದು ಆಟೋ ಮೂಲಗಳು ವರದಿ ಮಾಡಿವೆ.

English summary
Nissan has now announced that it will give Indian customers the first view of the Terrano compact SUV on August 20th.
Story first published: Friday, August 2, 2013, 12:45 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark