ಇದು ಪೈಸೆಗಳ ಲೆಕ್ಕಾಚಾರ; ಪೆಟ್ರೋಲ್, ಡೀಸೆಲ್ ಸ್ವಲ್ಪ ತುಟ್ಟಿ
ಜಾಗತಿಕ ಮಾರುಕಟ್ಟೆಯಿಂದ ತೈಲ ಆಮದು ಪ್ರಕ್ರಿಯೆ ಸ್ವಲ್ಪ ದುಬಾರಿಯಾಗಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಗೊಳಿಸಲಾಗಿದೆ. ನೂತನ ದರವು ಶುಕ್ರವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬಂದಿದೆ.
ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರ ಅನುಕ್ರಮವಾಗಿ 75 ಪೈಸ್ ಹಾಗೂ 50 ಪೈಸೆ ಹೆಚ್ಚಳವಾಗಿದೆ. ವ್ಯಾಟ್‌ನ್ನು ಈ ಹೊಸ ದರಕ್ಕೆ ಸೇರಿಸಲಾಗುತ್ತದೆ.
ಇದರೊಂದಿಗೆ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 90 ಪೈಸೆ ಏರಿಕೆಗೊಂಡು ರು. 63.99 ತಲುಪಿದೆ. ಹಾಗೆಯೇ ಡೀಸೆಲ್ ದರ ರು. 49.69ರಿಂದ 50.25 ರು.ಗಳಿಗೆ ತಲುಪಿದೆ.
ಈ ನಡುವೆ ಸಬ್ಸಿಡಿ ಸಹಿತದ 9 ಅಡುಗೆ ಅನಿಲ ಸಿಲಿಂಡರ್ ಖರೀದಿ ಬಳಿಕ ಹೆಚ್ಚುವರಿ ಸಿಲಿಂಡರ್ ಖರೀದಿಗೆ ರು. 45 ರಿಯಾಯ್ತಿ ನೀಡಲು ತೈಲ ಕಂಪನಿಗಳು ನಿರ್ಧರಿಸಿದೆ.


Click it and Unblock the Notifications









