ಬಜಾಜ್ ಆಟೋರಿಕ್ಷಾ ಪ್ರತಿಸ್ಪರ್ಧಿ 'ಆಪೆ ಸಿಟಿ' ಲಾಂಚ್

By Nagaraja

ಭಾರತದಲ್ಲಿ ಎಲ್ಲೇ ತಿರುಗಾಡಿದರೂ ನಮಗೆ ಬಜಾಟ್ ಆಟೋರಿಕ್ಷಾಗಳು ಕಾಣಸಿಗುತ್ತವೆ. ಆದರೆ ಇದೀಗ ಬಜಾಜ್ ಆಟೋಗೆ ಪ್ರತಿಸ್ಪರ್ಧಿಯೊಂದು ತಲೆದೋರಿದ್ದು, ಪಿಯಾಜಿಯೊ ನೂತನ 'ಆಪೆ ಸಿಟಿ' ತ್ರಿಚಕ್ರ ಪ್ರಯಾಣಿಕ ವಾಹನವನ್ನು ಲಾಂಚ್ ಮಾಡಿದೆ.

ಇಟಲಿಯ ದೈತ್ಯ ವಾಹನ ತಯಾರಕ ಕಂಪನಿಯಿಂದ ಬಿಡುಗಡೆಗೊಂಡಿರುವ ಆಪೆ ಸಿಟಿ, ಎಲ್‌ಪಿಜಿ, ಸಿಎನ್‌ಜಿ ಹಾಗೂ ಪೆಟ್ರೋಲ್ ವೆರಿಯಂಟ್‌ಗಳು 1.10 ಲಕ್ಷ ರು.ಗಳಿಂದ ಆರಂಭವಾಗಿ 1.25 ಲಕ್ಷ ರು.ಗಳ ವರೆಗಿನ ದರಗಳಲ್ಲಿ ಲಭ್ಯವಾಗಲಿದೆ.

ವೆರಿಯಂಟ್ (ದರ ಮಾಹಿತಿ- ಎಕ್ಸ್ ಶೋ ರೂಂ ಮುಂಬೈ)

  • ಆಪೆ ಸಿಟಿ ಎಲ್‌ಪಿಜಿ- 1.10 ಲಕ್ಷ ರು.
  • ಆಪೆ ಸಿಟಿ ಸಿಎನ್‌ಜಿ- 1.23 ಲಕ್ಷ ರು.
  • ಆಪೆ ಸಿಟಿ ಪೆಟ್ರೋಲ್- 1.25 ಲಕ್ಷ ರು

ದೇಶದ ತ್ರಿಚಕ್ರ ಪ್ರಯಾಣಿಕ ವಾಹನ ವಿಭಾಗದಲ್ಲಿ ಬಜಾಜ್ ಆಟೋ ಅತಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಇದೀಗ ದೀರ್ಘ ಕಾಲದ ನಾಯಕ ಬಜಾಜ್ ಆಟೋಗೆ ಹೇಗೆ ಪ್ರತಿಸ್ಪರ್ಧಿ ಒಡ್ಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಗ್ರಾಹಕರಿಗೆ ಅಗತ್ಯವಾದ ಪರಿಸರ ಸ್ನೇಹಿ, ಹೆಚ್ಚು ಇಂಧನ ಕ್ಷಮತೆಯ ಆರಾಮದಾಯಕ ತ್ರಿಚಕ್ರ ವಾಹನ ನಿರ್ಮಿಸಲು ಆದ್ಯತೆ ಕೊಡಲಾಗಿದೆ.

ನೂತನ ಪಿಯಾಜಿಯೊ ಆಪೆ ಸಿಟಿ 200ಸಿಸಿ, 3 ವಾಲ್ವೆ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ನಿಕಟ ಪ್ರತಿಸ್ಪರ್ಧಿಗಿಂತ ಶೇಕಡಾ 10ರಷ್ಟು ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಇದೇ ಸಂದರ್ಭದಲ್ಲಿ ನಾಲ್ಕು ಉಚಿತ ಸರ್ವೀಸ್ ಜತೆಗೆ 12 ತಿಂಗಳು ಅಥವಾ 36000 ಕೀ.ಮೀ ತನಕ ಪ್ರಯಾಣದ ವಾರಂಟಿಯನ್ನು ಪಿಯೊಜಿಯೊ ಖಾತ್ರಿಪಡಿಸುತ್ತಿದೆ.

More from DriveSpark

Article Published On: Thursday, March 14, 2013, 11:16 [IST]
English summary
Piaggio launched ‘Ape City’ for indian market to take down Bajaj’s auto rickshaws. LPG, CNG and Petrol variants available for Rs. 1.10 – 1.25 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+