ಆಟೋರಿಕ್ಷಾಗಳಿಗೆ ಬಂತು ಜಿಪಿಎಸ್, ಡೆಬಿಡ್ ಕಾರ್ಡ್ ತಂತ್ರಾಂಶ

Written By:

ಇದು ನಿರೀಕ್ಷಿತ ಬೆಳವಣಿಗೆಯಾಗಿದೆ. ಬಹಳ ಕಾಲದಿಂದಲೇ ದೇಶದ ವಾಹನ ಪ್ರೇಮಿಗಳು ಇಂತಹದೊಂದು ತಂತ್ರಜ್ಞಾನಕ್ಕಾಗಿ ಕಾಯುತ್ತಿದ್ದರು ಅಂದರೆ ತಪ್ಪಾಗಲಾರದು.

ಹೌದು, ಕೇರಳದ ಕೊಚ್ಚಿಯಲ್ಲಿ ಆಟೋರಿಕ್ಷಾಗಳು ಸಂಪೂರ್ಣವಾಗಿಯೂ ಡಿಜಿಟಲ್‌ಮಯವಾಗಲಿದೆ. ವಾಹನೋದ್ಯಮದ ಕಾಂತ್ರಿಕಾರಿ ಬೆಳವಣಿಗೆಯೆಂದೇ ವಿಶ್ಲೇಷಿಸಬಹುದಾದ ವಿಚಾರದಲ್ಲಿ ಕೊಚ್ಚಿ ಆಟೋ ರಿಕ್ಷಾಗಳಲ್ಲಿ ಜಿಪಿಎಸ್ ಆಧಾರಿತ ಫೇರ್ ಮೀಟರ್ (ಶುಲ್ಕ ಮೀಟರ್) ಹಾಗೂ ಡೆಬಿಡ್ ಕಾರ್ಡ್ ತಂತ್ರಾಂಶಗಳನ್ನು ಪಡೆದುಕೊಳ್ಳಲಿದೆ.

Autorickshaw

ಅಲ್ಲಿನ ಜಿಲ್ಲಾಡಳಿತವು ಇಂತಹದೊಂದು ಪ್ರಯತ್ನಕ್ಕೆ ಮುಂದಾಗುತ್ತಿದ್ದು, ಇದರಿಂದ ಚಾಲಕರು ಹೆಚ್ಚು ಶುಲ್ಕ ಪಡೆಯುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಅಷ್ಟೇ ಅಲ್ಲದೆ ಡೆಬಿಡ್ ಅಥವಾ ಕ್ರೆಡಿಕ್ ಕಾರ್ಡ್ ಮುಖಾಂತರವೂ ಶುಲ್ಕ ಪಾವತಿಸುವ ವ್ಯವಸ್ಥೆಯನ್ನು ಏರ್ಪಡಿಸಲಾಗುತ್ತದೆ.

ಜಿಪಿಎಸ್ ಆಧಾರಿತ ಫೇರ್ ಮೀಟರುಗಳು, ರಿಕ್ಷಾ ಚಲಿಸುವ ಪ್ರದೇಶ ಹಾಗೂ ದೂರವನ್ನು ಲೆಕ್ಕ ಮಾಡಲಿದೆ. ಕಾರ್ಪೋರೇಷನ್, ಮುನಿಸಿಪಾಲ್ ಹಾಗೂ ಪಂಚಾಯತುಗಳ ವಿವಿಧ ಅನುಪಾತಗಳ ಶುಲ್ಕ ಇರುವುದುರಿಂದ ಜಿಪಿಎಸ್‌ನಲ್ಲಿ ಇದು ಉಲ್ಲೇಖವಾಗಲಿದೆ.

ಹಾಗಿದ್ದರೂ ಇವೆಲ್ಲವನ್ನು ಆಳವಡಿಸುವುದು ದುಬಾರಿಯಾಗಿರುವುದರಿಂದ ಜಿಲ್ಲಾಡಳಿತ ಇಂತಹದೊಂದು ವ್ಯವಸ್ಥೆ ಏರ್ಪಡಿಸಬೇಕೇ ಎಂಬ ಗೊಂದಲದಲ್ಲಿದ್ದಾರೆ. ಯಾಕೆಂದರೆ ಕಾರ್ಡ್ ಉಜ್ಜುವ ಉಪಕರಣ 5ರಿಂದ 8,000ರು.ಗಳಷ್ಟು ದುಬಾರಿಯೆನಿಸಿದೆ. ಹಾಗಿದ್ದರೂ ಬ್ಯಾಂಕ್‌ಗಳು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಮುಂದಾದರೆ ಇಂತಹದೊಂದು ಸಮಸ್ಯೆಗೆ ಪರಿಹಾರ ದೊರಕಲದೆ.

ಇದೇ ಸಂದರ್ಭದಲ್ಲಿ ಮಹಿಳೆಯ ಇನ್ನಷ್ಟು ಸುರಕ್ಷಿತ ಪ್ರಯಾಣಕ್ಕಾಗಿ ಸ್ಮಾರ್ಟ್‌ಫೋನ್ ಅಪ್ಲಿಕೇಷನ್ ಬಿಡುಗಡೆ ಮಾಡುವ ಯೋಜನೆಯು ಪರಿಗಣನೆಯಲ್ಲಿದೆ.

English summary
In what could be termed as a revolutionary step forward, autorickshaws in Kochi could become the first in the country to be equipped with GPS enabled fare meters.
Story first published: Monday, June 9, 2014, 11:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark