ಉಬೆರ್ ಆಟೋ ಸೇವೆ ಆರಂಭ; ಮುಂದೇನು?

Written By:

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಉದ್ಯೋಗಸ್ಥ ಮಹಿಳೆಯ ಮೇಲೆ ಕ್ಯಾಬ್ ಚಾಲಕನ ಅತ್ಯಾಚಾರ ಪ್ರಕರಣದ ಬಳಿಕ ಭಾರಿ ಹಿನ್ನೆಡೆಗೆ ತುತ್ತಾಗಿರುವ ಪ್ರತಿಷ್ಠಿತ ಕ್ಯಾಬ್ ಸಂಸ್ಥೆ ಉಬೆರ್, ಈಗ ಪ್ರಯಾಣಿಕರಿಗಾಗಿ ಆಟೋರಿಕ್ಷಾ ಸೇವೆಯನ್ನು ತೆರೆದುಕೊಂಡಿದೆ. ಪ್ರಸ್ತುತ ಈ ಸೇವೆಯು ದೆಹಲಿ ನಿವಾಸಿಗಳಿಗೆ ಮಾತ್ರ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ದೇಶದ ಇತರ ನಗರಿಗಳಿಗೂ ವ್ಯಾಪಿಸಲಿದೆ.

ಈಗಲೂ ದೇಶದ ಹಲವು ನಗರಗಳಲ್ಲಿ ಆಟೋರಿಕ್ಷಾ ಪಯಣದ ವೇಳೆ ಮೀಟರ್ ಬಳಕೆಯಾಗುತ್ತಿಲ್ಲ. ಇದಕ್ಕೊಂದು ಉತ್ತಮ ಪರಿಹಾರವಾಗಿ ಉಬೆರ್ ಮುಂದೆ ಬರುತ್ತಿದ್ದು, ರಚನಾತ್ಮಕ ಪಾವತಿ ವ್ಯವಸ್ಥೆಯನ್ನು ಒದಗಿಸಲಿದೆ.

To Follow DriveSpark On Facebook, Click The Like Button
ಆಟೋರಿಕ್ಷಾ

ಆದರೆ ಉಬೆರ್ ಟ್ಯಾಕ್ಸಿ ರೀತಿಯಲ್ಲಿ ಉಬೆರ್ ಆಟೋ ಕೆಲಸ ಮಾಡಲ್ಲ. ಉಬೆರ್ ಟ್ಯಾಕ್ಸಿಗಾಗಿ ಒನ್ ಲೈನ್ ನಲ್ಲೇ ದುಡ್ಡು ಪಾವತಿ ಮಾಡಬೇಕಾಗಿತ್ತು. ಆದರೆ ಉಬೆರ್ ಆಟೋದಲ್ಲಿ ಪ್ರಯಾಣಿಕರಿಗೆ ಸ್ಥಳದಲ್ಲೇ ಬಾಡಿಗೆ ನೀಡುವ ಸೌಲಭ್ಯ ಒದಗಿಸಲಾಗಿದೆ.

ಇನ್ನು ಯಾವುದೇ ಹೆಚ್ಚುವರಿ ಬಾಡಿಗೆಯನ್ನು ಪಡೆಯದೇ ದೆಹಲಿಯಲ್ಲಿರುವ ಸಾಮಾನ್ಯ ಆಟೋ ದರವನ್ನೇ ಅನ್ವಯ ಮಾಡಲಾಗಿದೆ. ಅಷ್ಟಕ್ಕೂ ಇವೆಲ್ಲ ಸೇವೆಗಳಿಂದ ಇದುವರೆಗೆ ಸಂಸ್ಥೆಗೆ ಉಂಟಾಗಿರುವ ಅಪಖ್ಯಾತಿಯಿಂದ ಹೊರಬರಲು ಉಬೆರ್ ಗೆ ಸಾಧ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Uber has launched its very first auto rickshaw service. Currently this facility is available only for residents of Delhi. It will soon be offered in other cities of India as well.
Story first published: Saturday, April 11, 2015, 9:26 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark