ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

By Nagaraja

ದೇಶದ ಮೊದಲ ಖಾಸಗಿ ಮೆಟ್ರೋ ರೈಲು ಗುರ್ಗಾಂವ್‌ನಲ್ಲಿ ತಲೆಯೆತ್ತಿದೆ. ಬರೋಬ್ಬರಿ 1100 ಕೋಟಿ ರುಪಾಯಿ ವೆಚ್ಚದ ಈ ಮಹತ್ತರ ಯೋಜನೆ ಹಮ್ಮಿಕೊಳ್ಳುವಲ್ಲಿ ರಾಪಿಡ್ ಮೆಟ್ರೋರೈಲು ಗುರ್ಗಾಂವ್ ಲಿಮಿಟೆಡ್ (- RMGL) ಯಶಸ್ವಿಯಾಗಿದೆ.

ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ

ಹರಿಯಾಣದ ಗುರ್ಗಾಂವ್ ನಗರದಲ್ಲಿ ಈ ಮೆಟ್ರೋ ಹಳಿ ಹಾದು ಹೋಗುತ್ತಿದೆ. ಇಲ್ಲಿ ಗಮನನಿಸಬೇಕಾದ ಅಂಶವೆಂದರೆ ದೆಹಲಿ ಮೆಟ್ರೋದ ಕೆಳಮುಖವಾಗಿ ಈ ರೈಲು ಹಳಿ ಹಾದು ಹೋಗುತ್ತಿದ್ದು, ಈ ನಿರ್ದಿಷ್ಟ ಯಲ್ಲೋ ಲೈನ್ ಜತೆ ಸಂಪರ್ಕ ಸಾಧಿಸಿದೆ.

ಅಂದ ಹಾಗೆ ರಾಪಿಡ್ ಮೆಟ್ರೋ ದೇಶದ ಮೊತ್ತ ಮೊದಲ ಸಂಪೂರ್ಣ ಖಾಸಗಿ ಹಣಕಾಸಿನಿಂದ ನಿರ್ಮಿತವಾದ ಮೆಟ್ರೋ ಆಗಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಆರಂಭದಲ್ಲಿ 2012ರಲ್ಲೇ ಗುರ್ಗಾಂವ್ ಮೆಟ್ರೋ ರೈಲು ಯೋಜನೆ ಉದ್ಘಾಟಿಸುವ ಯೋಜನೆ ಇತ್ತಾದರೂ ಒಂದು ವರ್ಷದಷ್ಟು ವಿಳಂಬಗೊಂಡು ಅಂದರೆ ನವೆಂಬರ್ 14ರಂದು ಲೋಕರ್ಪಣೆಯಾಗಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಕೇವಲ 30 ತಿಂಗಳ ಅವಧಿಯಲ್ಲಿ ಅಂದರೆ ಎರಡು ವರೆ ವರ್ಷಗಳಲ್ಲೇ ಗುರ್ಗಾಂವ್ ಮೆಟ್ರೋ ರೈಲು ಕಾಮಗಾರಿ ಪೂರ್ಣಗೊಳಿಸಿರುವುದು ವಿಶೇಷತೆಯಾಗಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಯೋಜನೆಯ ಮೊದಲ ಹಂತವಾಗಿ ಒಂದು ಲೇನ್ ರೂಪುಗೊಂಡಿದ್ದು, ಒಟ್ಟು ಆರು ಸ್ಟೇಷನ್‌ಗಳಿವೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಪ್ರಸ್ತುತ ಮೂರು ಬೋಗಿಗಳನ್ನು ಹೊಂದಿರುವ ಮೆಟ್ರೋ ರೈಲು ಗಂಟೆಗೆ ಸರಾಸರಿ 35 ಕೀ.ಮೀ. ವೇಗದಲ್ಲಿ ಸಂಚರಿಸುತ್ತಿದೆ. ಹಾಗೆಯೇ ಗಂಟೆಗೆ ಗರಿಷ್ಠ 80 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

5.1 ಕೀ.ಮೀ. ತನಕ ಹರಡಿರುವ ಈ ಮೈಟೋ ಹಳಿಯಲ್ಲಿ ಬೆಳಗ್ಗೆ 6.05 ಗಂಟೆಗೆ ಆರಂಭವಾಗಿ ಮಧ್ಯರಾತ್ರಿ 12.20ರ ವರೆಗೆ ರೈಲು ಸೇವೆ ಲಭ್ಯವಿರಲಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಅಲ್ಲದೆ ಪ್ರತಿ ನಾಲ್ಕು ನಿಮಿಷಗಳಿಗೊಂದು ರೈಲು ಓಡಾಡಲಿದ್ದು, ಒಟ್ಟು 800ರಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಗಂಟೆಗೆ 24,000ರಷ್ಟು ಪಯಣಿಕರನ್ನು ಸಾಗಿಸುವ ಯೋಜನೆ ಹೊಂದಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಇನ್ನು ದರದ ಬಗ್ಗೆ ಮಾತನಾಡುವುದಾದಲ್ಲಿ ಫ್ಯಾಟ್ ಟಿಕೆಟ್ ದರ 12 ರು.ಗಳಾಗಿವೆ. ಹಾಗಿದ್ದರೂ ದೆಹಲಿ ಮೆಟ್ರೋ ಪ್ರಯಾಣಿಕರು ಇದಕ್ಕಾಗಿ ಬೇರೆಯೇ ಟಿಕೆಟ್ ಖರೀದಿಸಬೇಕಾದ ಅಗತ್ಯವಿಲ್ಲ. ಅಂದರೆ ದೆಹಲಿ ಮೆಟ್ರೋ ಟೊಕನ್ ಅಥವಾ ಸ್ಮಾರ್ಟ್ ಕಾರ್ಡ್ ಕೂಡಾ ಬಳಕೆ ಮಾಡಬಹುದಾಗಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಹಾಗೆಯೇ ಗುರ್ಗಾಂವ್ ಮೆಟ್ರೋ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನು ಖಾಸಗಿ ಸಂಸ್ಥೆಯೊಂದು ವಹಿಸಿಕೊಂಡಿದೆ. ಅಷ್ಟೇ ಅಲ್ಲದೆ ಸಿಖಂಧರ್‌ಪುರ್ ಪೊಲೀಸರಿಂದಲೂ ನೆರವು ದೊರಕಲಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಇಲ್ಲಿ ಉಲ್ಲೇಖಿಸಬಹುದಾದ ಇನ್ನೊಂದು ಪ್ರಮುಖ ಅಂಶವೆಂದರೆ ಪ್ರತಿ ರೈಲು ನಿಲ್ದಾಣದಲ್ಲೂ ಮಹಿಳೆಯರಿಗಾಗಿ ವಿಶೇಷ ಸಹಾಯವಾಣಿ ಡೆಸ್ಕ್ ಇರಲಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಎಲ್ಲ ಪ್ರಯಾಣಿಕರಿಗೂ ದಿನದ 24 ಗಂಟೆಯೂ ಲಭ್ಯವಿರುವ ಉಚಿತ ಸಹಾಯವಾಣಿ ಸಂಖ್ಯೆ ಇಂತಿದೆ. +91-124-2800028

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಇನ್ನು ಪ್ರಯಾಣಿಕರ ಸುರಕ್ಷತೆಗಾಗಿ ಪ್ರತಿಯೊಂದು ಫ್ಲ್ಯಾಟ್‌ಫಾರ್ಮ್‌ನಲ್ಲೂ ಎಮರ್ಜನ್ಸಿ ಸ್ಟಾಪ್ ಪ್ಲಂಗರ್ ಲಗತ್ತಿಸಲಾಗಿರುತ್ತದೆ. ಹಾಗೆಯೇ ಬ್ಲೂ ಲೈಟ್ ಸ್ಟೇಷನ್‌ನಿಂದ ನೇರವಾಗಿ ಕಂಟ್ರೋಲ್ ರೂಂಗೆ ಸಂಪರ್ಕ ಹೊಂದಲು ಸಾಧ್ಯವಾಗಲಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಇವೆಲ್ಲದರ ಮಿಗಿಲಾಗಿ ಎಲ್ಲ ಕೋಚ್‌ಗಳಲ್ಲೂ ಟಾಕ್ ಬಟನ್ ಲಗತ್ತಿಸಲಾಗಿದ್ದು, ಇದನ್ನು ಬಳಕೆ ಮಾಡುವುದರೊಂದಿಗೆ ಚಾಲಕರೊಂದಿಗೆ ನೇರ ಸಂಪರ್ಕ ಸಾಧಿಸಬಹುದಾಗಿದೆ.

ಗುರ್ಗಾಂವ್‌ನಲ್ಲಿ ತಲೆಯೆತ್ತಿದ ದೇಶದ ಮೊದಲ ಖಾಸಗಿ ಮೆಟ್ರೋ

ಪ್ರಸ್ತುತ ಒಂದನೇ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಗುರ್ಗಾಂವ್ ಮೆಟ್ರೋ, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ವಿಸ್ತರಣೆಯಾಗಲಿದೆ.

More from DriveSpark

Article Published On: Tuesday, November 19, 2013, 4:05 [IST]
English summary
Rapid Metro, India's first fully privately financed Metro system connecting NH-8 to Delhi Metro via Cyber City, Gurgaon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+