KR ಪುರಂನಿಂದ-ವೈಟ್‌ಫೀಲ್ಡ್‌ಗೆ ಕೇವಲ 12 ನಿಮಿಷಗಳ ಪ್ರಯಾಣ... ಮಾರ್ಚ್‌ನಿಂದ ಮೆಟ್ರೋ ಸೇವೆ ಆರಂಭ
ಬೆಂಗಳೂರಿನ ಟ್ರಾಫಿಕ್ ಜಾಮ್‌ನಿಂದ ಬೇಸತ್ತಿರುವ ಸಾರ್ವಜನಿಕರು ನಮ್ಮ ಮೆಟ್ರೋದಿಂದ ನಿಟ್ಟುಸಿರು ಬಿಡುವಂತಾಗಿದೆ. ಇದೀಗ ಮತ್ತೊಂದು ಪ್ರಮುಖ ಮಾರ್ಗವಾದ ಪರ್ಪಲ್ ಲೈನ್‌ನಲ್ಲಿ ನಮ್ಮ ಮೆಟ್ರೋದ ಕೆಆರ್ ಪುರಂ-ವೈಟ್‌ಫೀಲ್ಡ್ ಮಾರ್ಗವನ್ನು ಈ ವರ್ಷದ ಮಾರ್ಚ್‌ನಲ್ಲಿ ಪ್ರಾರಂಭಿಸಲಾಗುವುದು. ಇತ್ತೀಚಿಗೆ, ಪ್ರಾಯೋಗಿಕ ಓಟದ ಸಮಯದಲ್ಲಿ, ರೈಲು 13 ಕಿ.ಮೀ ವ್ಯಾಪ್ತಿಯನ್ನು ಕೇವಲ 12 ನಿಮಿಷಗಳಲ್ಲಿ ಕ್ರಮಿಸಿದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಕೆಆರ್ ಪುರಂ- ವೈಟ್‌ಫೀಲ್ಡ್ ವಿಭಾಗವನ್ನು ಪರ್ಪಲ್ ಲೈನ್‌ನಲ್ಲಿ ಮಾರ್ಚ್ ವೇಳೆಗೆ ವಾಣಿಜ್ಯ ಕಾರ್ಯಾಚರಣೆಗಾಗಿ ತೆರೆಯಲು ಸಿದ್ಧವಾಗಿದೆ. ಆದರೆ ಅದಕ್ಕಿಂತ ಮುಂಚೆ ಕೆಲ ಪರೀಕ್ಷಾ ಹಂತಗಳನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಸುರಕ್ಷತಾ ಆಯುಕ್ತರ ಒಪ್ಪಿಗೆ ಕಡ್ಡಾಯವಾಗಿರುವುದರಿಂದ ಫೆಬ್ರವರಿ 15 ರ ನಂತರ ವಿಸ್ತರಣೆಯನ್ನು ಪರಿಶೀಲಿಸಲು BMRCL ಮೆಟ್ರೋ ರೈಲು ಸುರಕ್ಷತೆಯ ಆಯುಕ್ತರನ್ನು ಆಹ್ವಾನಿಸಲಾಗುತ್ತದೆ.

ವರದಿಯ ಪ್ರಕಾರ, ಈ ಸ್ಟ್ರೆಚ್‌ನಲ್ಲಿ ಪ್ರಾಯೋಗಿಕ ಓಟವು ಅದರ ಕೊನೆಯ ಹಂತದಲ್ಲಿದೆ. ಕಳೆದ ವಾರ ನಡೆದ ಹೈ-ಸ್ಪೀಡ್ ಪ್ರಯೋಗಗಳಲ್ಲಿ ಮೆಟ್ರೋ ರೈಲುಗಳು ಗರಿಷ್ಠ ಅನುಮತಿಸುವ 80 ಕಿ.ಮೀ ವೇಗವನ್ನು ಸಾಧಿಸಿವೆ. ನಮ್ಮ ಮೆಟ್ರೋ ಅಧಿಕಾರಿಗಳ ಪ್ರಕಾರ, ರೈಲು 12 ನಿಮಿಷಗಳಲ್ಲಿ 13 ಕಿ.ಮೀ. ದೂರವನ್ನು ಯಾವುದೇ ನಿಲುಗಡೆಯಿಲ್ಲದೆ ಪ್ರಯೋಗಗಳನ್ನು ನಡೆಸಲಾಗಿದೆ. ನಿಜವಾದ ಕಾರ್ಯಾಚರಣೆಗಳು ಇನ್ನೂ ಕೆಲವು ಹೆಚ್ಚಿನ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
KR ಪುರಂ ಮತ್ತು ವೈಟ್‌ಫೀಲ್ಡ್ ನಡುವೆ 10 ನಿಮಿಷಗಳ ಆವರ್ತನದಲ್ಲಿ ವೈಟ್‌ಫೀಲ್ಡ್ ಮಾರ್ಗದಲ್ಲಿ ರೈಲುಗಳನ್ನು ನಿರ್ವಹಿಸಲು ನಮ್ಮ ಮೆಟ್ರೋ ಯೋಜಿಸಿದೆ. ಎರಡು ಪಾಯಿಂಟ್‌ಗಳ ನಡುವೆ ಸೇವೆಗಳನ್ನು ಒದಗಿಸಲು BMRCL ಐದು ಸೆಟ್ ರೈಲುಗಳನ್ನು ತಲಾ ಆರು ಕೋಚ್‌ಗಳಂತೆ ನಿಯೋಜಿಸಲಿದೆ. ಈ ಮಾರ್ಗವು ಹೆಚ್ಚು ಟ್ರಾಫಿಕ್‌ನಿಂದ ತುಂಬಿರುವುದರಿಂದ ಮೆಟ್ರೋ ರೈಲಿಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯೆಯಿದೆ. ಹಾಗೆಯೇ ರಸ್ತೆ ಮಾರ್ಗದಲ್ಲಿ ಟ್ರಾಫಿಕ್ ಕಡೆಮೆಯಾಗುವ ನಿರೀಕ್ಷೆಯಿದೆ.
ನಾವು ಈಗಾಗಲೇ ನಮ್ಮ ನಾಲ್ಕು ಮೆಟ್ರೋ ರೈಲುಗಳನ್ನು ವೈಟ್‌ಫೀಲ್ಡ್ ಡಿಪೋಗೆ ಸ್ಥಳಾಂತರಿಸಿದ್ದೇವೆ. ಅವುಗಳನ್ನು ವಾಣಿಜ್ಯ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ಬಳಸಲಾಗುವುದು. ಸೇವೆಗಳನ್ನು ಪ್ರಾರಂಭಿಸಲು ಐದು ಸೆಟ್ ರೈಲುಗಳು ಸಾಕು ಎಂಬುದು ನಮ್ಮ ಅಭಿಪ್ರಾಯವಾಗಿದೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದಲ್ಲಿ, ಹೆಚ್ಚುವರಿ ರೈಲುಗಳನ್ನು ನಿಯೋಜಿಸಲಾಗುವುದು. ಎಲ್ಲದಕ್ಕೂ ನಮ್ಮ ಬಳಿ ಪೂರ್ವ ನಿಯೋಜನೆಗಳಿವೆ ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆಂದು ದಿ ಹಿಂದೂ ವರದಿ ಮಾಡಿದೆ.
ತಡರಾತ್ರಿ ರೈಲುಗಳನ್ನು ಓಡಿಸುವ ಕುರಿತು ಯಾವುದೇ ಪ್ರಸ್ತಾವನೆಗಳನ್ನು ಬಿಎಂಆರ್‌ಸಿಎಲ್ ಸ್ವೀಕರಿಸಿಲ್ಲ. ಪ್ರಸ್ತುತ ನಮ್ಮ ವೇಳಾಪಟ್ಟಿಯಂತೆ ರೈಲುಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ಹೇಳಿದರು. ಕೆಆರ್ ಪುರಂನಿಂದ ವೈಟ್‌ಫೀಲ್ಡ್‌ವರೆಗಿನ 13 ಕಿ.ಮೀ ವ್ಯಾಪ್ತಿಯು ಕೆಆರ್ ಪುರಂ-ಬೈಯಪ್ಪನಹಳ್ಳಿ ಮಾರ್ಗದ ಮೊದಲ ಹಂತವಾಗಿದೆ. ಇಡೀ ಕಾರಿಡಾರ್‌ನಲ್ಲಿ 12 ನಿಲ್ದಾಣಗಳಿವೆ - ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸದರಮಂಗಲ, ನಲ್ಲೂರಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್ಪಾಳ್ಯ, ಸರಸ್ವತಿ ನಗರ ಮತ್ತು ಕೆಆರ್ ಪುರಂ.
ಸಂಪೂರ್ಣ ಮಾರ್ಗವು ಕಾರ್ಯಗತಗೊಂಡ ನಂತರ, ಐಟಿ ಹಬ್ ವೈಟ್‌ಫೀಲ್ಡ್ ಅನ್ನು ನಗರದ ಇತರ ಭಾಗಗಳಿಗೆ ಸಂಪರ್ಕಿಸುವ ಕಾರಣ ಈ ಕಾರಿಡಾರ್‌ನಲ್ಲಿ ಪ್ರಯಾಣಿಕರ ಸಂಖ್ಯೆ ದಿನಕ್ಕೆ 2.5 ಲಕ್ಷ ಏರಿಕೆಯಾಗುವ ನಿರೀಕ್ಷೆಯಿದೆ. ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದ ಕಾನ್ಕೋರ್ಸ್ ಮಟ್ಟದಿಂದ ಇಂಟರ್ನ್ಯಾಷನಲ್ ಟೆಕ್ ಪಾರ್ಕ್ ಬೆಂಗಳೂರಿಗೆ (ITPB) ನೇರ ಪ್ರವೇಶವನ್ನು ಒದಗಿಸಲು BMRCL ಇನ್ಫೋ ಟೆಕ್ ಪಾರ್ಕ್ ಲಿಮಿಟೆಡ್ (ITPL) ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ಸಂಚಾರಕ್ಕೆ ತೊಂದರೆಯಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








