ರೆನೊ ಡಸ್ಟರ್ 4x4 ವರ್ಷನ್ ಸದ್ಯದಲ್ಲೇ ಲಾಂಚ್
ಮೂಲತ: ಡ್ಯಾಸಿಯಾ ಡಸ್ಟರ್ ಅವತಾರ ಭಾರತದಲ್ಲಿ ರೆನೊ ಡಸ್ಟರ್ ಎಂಬ ಬ್ಯಾಡ್ಜ್ ಪಡೆದಿತ್ತು. ಪ್ರಸ್ತುತ ಕಾರು ದೇಶದಲ್ಲಿ ಅತಿ ಜನಪ್ರಿಯತೆ ಪಡೆದಿರುವ ಎಸ್‌ಯುವಿ ಕಾರು ಎಂದೆನಿಸಿಕೊಳ್ಳುತ್ತಿದೆ.
ಮತ್ತೊಂದೆಡೆ ಫೋರ್ಡ್ ಇಕೊಸ್ಪೋರ್ಟ್ ಆಗಮನವಾಗಲಿರುವಂತೆಯೇ ಸೆಡ್ಡು ನೀಡಲು ರೆನೊ ಡಸ್ಟರ್ 4x4 ವರ್ಷನ್ ಬಿಡುಗಡೆಯಾಗಲಿದೆ. ಈ ಮೂಲಕ ಉತ್ತಮ ಮಾರುಕಟ್ಟೆ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದೆ.
ಡಸ್ಟರ್ 4x4 ಕಾಂಪಾಕ್ಟ್ ಎಸ್‌ಯುವಿ ವೆರಿಯಂಟ್ ಆರ್xಝಡ್ ವರ್ಷನ್‌ನಲ್ಲಿ ಈಗಾಗಲೇ ತಿರುವನಂತಪುರದಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದು, 2013 ಮಧ್ಯಂತರ ಅವಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಡಸ್ಟರ್ 4x4 ವೆರಿಯಂಟ್‌ನಲ್ಲಿ 1.5 ಲೀಟರ್ ಕೆ9ಕೆ ಟರ್ಬೊ ಡೀಸೆಲ್ ಎಂಜಿನ್ (110 ಬಿಎಚ್‌ಪಿ, 240 ಎನ್‌ಎಂ) ಆಳವಡಿಸುವ ನಿರೀಕ್ಷೆಯಿದೆ. ಹಾಗಿದ್ದರೂ ಮಹೀಂದ್ರ ಸ್ಕಾರ್ಪಿಯೊ 4x4 ಆಟೋಮ್ಯಾಟಿಕ್ ಹಾಗೂ ಟಾಟಾ ಸಫಾರಿ ಸ್ಟ್ರೋಮ್ 4x4 ವೆರಿಯಂಟ್‌ಗಿಂತಲೂ ದುಬಾರಿಯಾಗುವ ಸಾಧ್ಯತೆಯಿದೆ.


Click it and Unblock the Notifications









