ರೆನೊಗೆ ಜನಪ್ರಿಯ ಡಸ್ಟರ್ ಬಲ; ಮಾರಾಟ ಹೆಚ್ಚಳ

By Nagaraja

ಕಳೆದ ಕೆಲವು ತಿಂಗಳುಗಳಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸುತ್ತಿರುವ ಜನಪ್ರಿಯ ಡಸ್ಟರ್ ನೆರವಿನಿಂದ ಫ್ರಾನ್ಸ್‌ನ ವಾಹನ ತಯಾರಕ ಕಂಪನಿಯಾದ ರೆನೊ ದೇಶದ ಮಾರುಕಟ್ಟೆಯಲ್ಲಿ ಭಾರಿ ಪ್ರಗತಿ ಸಾಧಿಸಿದೆ.

ಕಳೆದ ಸಾಲಿಗೆ ಹೋಲಿಸಿದರೆ 2012 ಡಿಸೆಂಬರ್‌ನಲ್ಲಿ ರೆನೊ ಇಂಡಿಯಾವು ಮಾರಾಟದಲ್ಲಿ ಶೇಕಡಾ 422ರಷ್ಟು ಭಾರಿ ನೆಗೆತವನ್ನು ಕಂಡಿದೆ. ಖಂಡಿತವಾಗಿಯೂ ರೆನೊ ಡಸ್ಟರ್ ಜನಪ್ರಿಯತೆ ಬಗ್ಗೆ ಎರಡು ಮಾತಿಲ್ಲ.

ಈ ಅವಧಿಯಲ್ಲಿ ಒಟ್ಟು 5,924 ಕಾರುಗಳು ಮಾರಾಟವಾಗಿವೆ. ಕಳೆದ ಬಾರಿಯಿದು 1,401 ಯುನಿಟ್‌ಗಳಾಗಿದ್ದವು. ಅಂದರೆ ಈ ವರ್ಷ ಡಿಸೆಂಬರ್‌ನಲ್ಲಿ ಮಾರಾಟವಾದ 5,924 ಕಾರುಗಳ ಪೈಕಿ ಡಸ್ಟರ್ ಅಧಿಪತ್ಯವನ್ನು ಸಾಧಿಸಿದ್ದು 4,485 ಕಾರುಗಳು ಮಾರಾಟವಾಗಿವೆ.

ಇನ್ನು ರೆನೊ ಪ್ರೀಮಿಯಂ ಕಾರುಗಳಾದ Fluence ಸೆಡಾನ್ ಹಾಗೂ Koleos ಆವೃತ್ತಿಗಳು ಅನುಕ್ರಮವಾಗಿ 68 ಹಾಗೂ 36 ಯುನಿಟ್‌ಗಳು ಮಾರಾಟವಾಗಿದೆ. ದೇಶದಲ್ಲಿ ಡಸ್ಟರ್ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡುತ್ತಿರುವುದೇ ಇಷ್ಟೊಂದು ಯಶ ಸಾಧಿಸಲು ನೆರವಾಗಿದೆ. ಡಸ್ಟರ್ ಪ್ರಾರಂಭಿಕ ಎಕ್ಸ್ ಶೋ ರೂಂ ದರ ಭಾರತೀಯ ರುಪಾಯಿ ಪ್ರಕಾರ ಏಳು ಲಕ್ಷದಿಂದ ಆರಂಭವಾಗುತ್ತದೆ.

ರೆನೊ ಡಸ್ಟರ್

ರೆನೊ ಡಸ್ಟರ್

ಅದೇ ಹೊತ್ತಿಗೆ 2012ನೇ ಸಾಲಿನಲ್ಲಿ ಮಾರಾಟವಾದ ಒಟ್ಟು ಕಾರುಗಳ ಸಂಖ್ಯೆಯನ್ನು ಸಹ ರೆನೊ ಇಂಡಿಯಾ ಬಹಿರಂಗಪಡಿಸಿದ್ದು, ಈ ಅವಧಿಯಲ್ಲಿ 35,052 ಕಾರುಗಳು ಮಾರಾಟವಾಗಿವೆ.

ರೆನೊ ಡಸ್ಟರ್

ರೆನೊ ಡಸ್ಟರ್

ರೆನೊ ಡಸ್ಟರ್ ಪೆಟ್ರೋಲ್ ಮತ್ತು ಎರಡು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಈ ಆಕರ್ಷಕ ಎಸ್‌ಯುವಿ ಆರಂಭಿಕ ದರ 7.99 ಲಕ್ಷ ರುಪಾಯಿಗಳಾಗಿವೆ.

ರೆನೊ ಡಸ್ಟರ್

ರೆನೊ ಡಸ್ಟರ್

ಅಗ್ಗದ ದರದೊಂದಿಗೆ ಆಗಮಿಸಿರುವ ನೂತನ ಡಸ್ಟರ್ ಕಾರು ಮಹೀಂದ್ರ ಸ್ಕಾರ್ಪಿಯೊ ಮತ್ತು ಟಾಟಾ ಸಫಾರಿ ಕಾರುಗಳಿಗೆ ಮಾರಾಟದಲ್ಲಿ ಸ್ಪರ್ಧೆ ಒಡ್ಡುತ್ತಿದೆ.

ರೆನೊ ಡಸ್ಟರ್

ರೆನೊ ಡಸ್ಟರ್

ರೆನೊ ಡಸ್ಟರ್ ಪೆಟ್ರೋಲ್ 1.6 ಲೀಟರಿನ ಪೆಟ್ರೋಲ್ ಎಂಜಿನ್ 104 ಹಾರ್ಸ್ ಪವರ್ ಮತ್ತು 145 ಟಾರ್ಕ್ ಪವರ್ ನೀಡಲಿದೆ. 1.5 ಲೀಟರಿನ ಕೆ9ಕೆ ಡೀಸೆಲ್ ಎಂಜಿನ್ 85 ಅಶ್ವಶಕ್ತಿ ಮತ್ತು 110 ಟಾರ್ಕ್ ನೀಡಲಿದೆ. ಇದು 5 ಮತ್ತು ಆರು ಸ್ಫೀಡಿನ ಮ್ಯಾನುಯಲ್ ಗೇರ್ ಆಯ್ಕೆಯಲ್ಲಿ ದೊರಕಲಿದೆ.

ರೆನೊ ಡಸ್ಟರ್

ರೆನೊ ಡಸ್ಟರ್

ನೂತನ ರೆನೊ ಡಸ್ಟರ್ ಒಟ್ಟು ಆರು ಆವೃತ್ತಿಗಳಲ್ಲಿ ಲಭ್ಯವಿದೆ. ಅದರಲ್ಲಿ ಎರಡು ಪೆಟ್ರೋಲ್ ಆವೃತ್ತಿ. ನಾಲ್ಕು ಡೀಸೆಲ್ ಆವೃತ್ತಿ. ಈ ಕಾರಿನ ಒಟ್ಟಾರೆ ಉದ್ದ 4315 ಎಂಎಂ.

ರೆನೊ ಡಸ್ಟರ್

ರೆನೊ ಡಸ್ಟರ್

ರಿಯರ್ ವ್ಯೂ

ರೆನೊ ಡಸ್ಟರ್

ರೆನೊ ಡಸ್ಟರ್

More from DriveSpark

Article Published On: Saturday, January 5, 2013, 16:30 [IST]
English summary
Renault India has reported that it sold 5,924 vehicles in December 2012 as against the 1,401 cars it sold in the same month last year. This is a massive 422% increase and the one single reason is the Duster.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+