ಸದ್ಯದಲ್ಲೇ ಬರಲಿದೆ ರೆನೊ ಸ್ಕಾಲಾ ಆಟೋಮ್ಯಾಟಿಕ್
ನಗರ ಪ್ರದೇಶದಲ್ಲಿ ವಾಹನ ದಟ್ಟಣೆಯಿಂದಾಗಿ ಬೆಸತ್ತು ಹೋಗಿರುವ ಗ್ರಾಹಕರಿಗಾಗಿ ಈ ಆಟೋಮ್ಯಾಟಿಕ್ ವರ್ಷನ್ ಉತ್ತಮ ಬದಲಿ ವ್ಯವಸ್ಥೆಯಾಗಿರಲಿದೆ ಎಂದು ಫ್ರಾನ್ಸ್‌ನ ಈ ಮುಂಚೂಣಿಯ ವಾಹನ ತಯಾರಕ ಸಂಸ್ಥೆ ತಿಳಿಸಿದೆ.
ಸಾಂಪ್ರದಾಯಿಕ ಆಟೋಮ್ಯಾಟಿಕ್ ಸಿಸ್ಟಂ ಬದಲು ಸ್ಕಾಲಾ ಆಟೋಮ್ಯಾಟಿಕ್ ವರ್ಷನ್ ಕಾರಲ್ಲಿ ಎಕ್ಸ್-ಟ್ರಾನಿಕ್ ಸಿವಿಟಿ ಗೇರ್ ಬಾಕ್ಸ್ ಆಳವಡಿಸಲಾಗುವುದು ಎಂಬುದನ್ನು ಸಹ ಕಂಪನಿ ಖಾತ್ರಿಪಡಿಸಿದೆ. ಆದರೆ ರೆನೊ ಸ್ಕಾಲಾ ಪೆಟ್ರೋಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿರಲಿದೆ. ಅಂದರೆ ಆರ್‌ಎಕ್ಸ್ಎಲ್ ಹಾಗೂ ಆರ್‌ಎಕ್ಸ್‌ಝಡ್ ಪೆಟ್ರೋಲ್ ವೆರಿಯಂಟ್ ಕಾರುಗಳಲ್ಲಿ ಸಿವಿಟಿ ಗೇರ್ ಬಾಕ್ಸ್ ಆಳವಡಿಸಲಾಗುವುದು.
ಹಾಗಿದ್ದರೂ ಸ್ಕಾಲಾ ಆಟೋಮ್ಯಾಟಿಕ್ ವರ್ಷನ್ ದರದ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ. ಇದರ 1.5 ಲೀಟರ್ ಪೆಟ್ರೋಲ್ ಎಂಜಿನ್ 100 ಬಿಎಚ್‌ಪಿ ಪೀಕ್ ಪವರ್ ಹಾಗೂ 134 ಎನ್‌ಎಂ ಟರ್ಕ್ಯೂ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಹಾಗೆಯೇ ARAI ಮಾರ್ಗದರ್ಶನದ ಅನ್ವಯ ಪ್ರಸ್ತುತ ಕಾರು ಪ್ರತಿ ಲೀಟರ್‌ಗೆ 17.97 ಕೀ. ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.


Click it and Unblock the Notifications









