ಪರಿಸರ ಸ್ನೇಹಿ 'ಮಹೀಂದ್ರ ಇ2o' ಬಿಡುಗಡೆಗೆ ರೆಡಿ
ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್ ತನ್ನ ಬಹುನಿರೀಕ್ಷಿತ ಮುಂದಿನ ಜನಾಂಗದ ವಿದ್ಯುತ್ ಚಾಲಿತ ರೇವಾ ಕಾರನ್ನು 'ಮಹೀಂದ್ರ ಇ2o' ಎಂದು ಹೆಸರಿಸಿದೆ.
'ಫ್ಯೂಚರ್ ಆಫ್ ಮೊಬಿಲಿಟಿ' ಎಂಬ ವಿಷನ್ ಅಡಿಯಲ್ಲಿ ಮಹೀಂದ್ರ ಇ2o ತಯಾರಿಸಲಾಗಿದೆ. ಅಲ್ಲದೆ ಶೀಘ್ರದಲ್ಲೇ ಲಾಂಚ್ ಮಾಡುವ ಇರಾದೆಯನ್ನು ಕಂಪನಿ ಹೊಂದಿದ್ದು, ಮೂಲಕ ಪ್ರಕಾರ ಎಪ್ರಿಲ್ ವೇಳೆಯಲ್ಲಿ ದೇಶದ ರಸ್ತೆಗಿಳಿಯಲಿದೆ.
ಇತ್ತೇಚೆಗಷ್ಟೇ ಬೆಂಗಳೂರಿನಲ್ಲಿ ಅನಾವರಣ ಮಾಡಲಾಗಿದ್ದ ಘಟಕದಲ್ಲಿ ಮಹೀಂದ್ರ ರೇವಾ ವಿದ್ಯುತ್ ಚಾಲಿತ ಕಾರಿನ ಉತ್ಪಾದನೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
ಸಂಪೂರ್ಣವಾಗಿ ಪರಿಸರ ಸ್ನೇಹಿ ಕಾರು ಆಗಿರುವುದರಿಂದ ಗ್ರಾಹಕರಿಂದ ಹೆಚ್ಚಿನ ಪ್ರತಿಕ್ರಿಯೆ ದೊರಕುವ ವಿಶ್ವಾಸವನ್ನು ಕಂಪನಿ ಹೊಂದಿದೆ. ಹಾಗೆಯೇ ಮುಂದಿನ ಸಾಲಿನ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಕೇಂದ್ರ ಸರಕಾರವು ಸಬ್ಸಿಡಿ ದರ ಘೋಷಿಸಲಿರುವುದರಿಂದ ಇದು ಬಹುದೊಡ್ಡ ಉತ್ತೇಜನೆಯಾಗಲಿದೆ. ಇದರಿಂದ ದರಗಳಲ್ಲಿ ಭಾರಿ ಇಳಿಕೆ ಕಂಡುಬರಲಿದೆ.
ಪ್ರಮುಖವಾಗಿಯೂ ನಗರ ಪ್ರದೇಶಗಳಲ್ಲಿ ಪ್ರಯಾಣವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಇದರ ಲಿಥಿಯಮ್ ಇಯಾನ್ ಬ್ಯಾಟರಿಗಳು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 12o ಕಿ.ಮೀ. ಪ್ರಯಾಣಿಸಲು ನೆರವಾಗಲಿದೆ. ಹಾಗೆಯೇ ಮನೆಯಲ್ಲಿರುವ ಅಥವಾ ಕಾರ್ಯಸ್ಥಳದಲ್ಲಿರುವ ಯಾವುದೇ 15 ಆಂಪೈರ್ ಪ್ಲಗ್ ಪಾಯಿಂಟ್‌ನಿಂದ ಚಾರ್ಜ್ ಮಾಡಬಹುದಾಗಿದೆ.
ಮಹೀಂದ್ರ ಎನ್ಎಕ್ಸ್‌ಆರ್ ಪ್ರೊಜೆಕ್ಟ್‌ನಲ್ಲಿ ನಿರ್ಮಾಣವಾಗಿರುವ 'ಇ2o' ವಿಶ್ಲೇಷಣೆ ರೂಪ ಇಂತಿದೆ. ಇದರಲ್ಲಿ 'ಇ' ಎಂಬುದು ಸೂರ್ಯ ಕಿರಣದ ಶಕ್ತಿಯ ಸಂಕೇತ. ಹಾಗೆಯೇ '2' ಎಂಬುದು ಕಾರಿನಲ್ಲಿನ ಸಂಪರ್ಕ ತಂತ್ರಜ್ಞಾನ ಮತ್ತು 'o' ಎಂಬುದು ಓಕ್ಸಿಜನ್ ಪ್ರತೀಕವಾಗಿದೆ.

ಮಹೀಂದ್ರ ಇ2o
ನಾಲ್ಕು ಸೀಟಿನ ಮಹೀಂದ್ರ ಇ2o ವಿಶಾಲ ಸ್ಥಳಾವಕಾಶವನ್ನು ಹೊಂದಿರಲಿದೆ. ಪರಿಸರ ಸ್ನೇಹಿ ಮಹೀಂದ್ರ ಇ2o ಪರಿಸರವನ್ನು ಸಂರಕ್ಷಿಸಲು ನೆರವಾಗಲಿದೆ.

ಮಹೀಂದ್ರ ಇ2o
ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ದರ ಗಣನೀಯ ವರ್ಧಿಸುತ್ತಿರುವುದರಿಂದ ವಿದ್ಯುತ್ ಚಾಲಿತ ವಾಹನಗಳನ್ನು ಗ್ರಾಹಕರು ಆಯ್ಕೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಮಹೀಂದ್ರ ಇ2o ಉತ್ತಮ ಆಯ್ಕೆಯಾಗಿರಲಿದೆ.

ಮಹೀಂದ್ರ ಇ2o
ಈಗಿರುವ ಮಾಹಿತಿಯಂತೆ ಮಹೀಂದ್ರ ಇ2o ನಾಲ್ಕು ಲಕ್ಷ ಅಸುಪಾಸಿನಲ್ಲಿ ದೊರಕಲಿದೆ. ಆದರೆ ಕೇಂದ್ರ ಸರಕಾರವು ಸಬ್ಸಿಡಿ ಘೋಷಿಸುವ ಸಾಧ್ಯೆತೆಯಿರುವುದರಿಂದ ದರ ಇನ್ನಷ್ಟು ಅಗ್ಗವಾಗಲಿದೆ. ಇದು ಗ್ರಾಹಕರಿಗೆ ನೆರವಾಗಲಿದೆ.

ಮಹೀಂದ್ರ ಇ2o
ಇದರ ಜತೆ ಫ್ಯೂಚರಿಸ್ಟಿಕ್ ಇಕೊಸಿಸ್ಟಂ 'ಸನ್2ಕಾರ್' ಅಡಿಯಲ್ಲಿ ನೇರವಾಗಿ ಸೂರ್ಯ ಪ್ರಕಾಶದಿಂದ ಚಾರ್ಜ್ ಮಾಡುವ ಸಾಮರ್ಥ್ಯವನ್ನು ಹೊಂದಿರಲಿದೆ.

ಮಹೀಂದ್ರ ಇ2o

ಮಹೀಂದ್ರ ಇ2o

ಮಹೀಂದ್ರ ಇ2o

ಮಹೀಂದ್ರ ಇ2o

ಮಹೀಂದ್ರ ಇ2o

ಮಹೀಂದ್ರ ಇ2o



Click it and Unblock the Notifications








