ನಗರ ಸಾರಿಗೆ ವಾಹನ ಹೇಗಿರಬೇಕು?
ಸ್ವಿಜರ್ಲೆಂಡ್‌ನ ವಾಹನ ತಯಾರಕ ಕಂಪನಿಯಾದ ರಿನ್‌ಸ್ಪೀಡ್, ಅತಿ ನೂತನ 'ಮೈಕ್ರೋಮ್ಯಾಕ್ಸ್' ನಗರ ಸಾರಿಗೆ ಕಾನ್ಸೆಪ್ಟ್ ವಾಹನವನ್ನು ಅನಾವರಣಗೊಳಿಸಿದೆ.
ಆಧುನಿಕ ಕಾರುಗಳನ್ನು ಪರಿಷ್ಕೃತಗೊಳಿಸುವುದರಲ್ಲಿ ಹೆಸರುವಾಸಿಯಾಗಿರುವ ರಿನ್‌ಸ್ಪೀಡ್, ಮುಂಬರುವ ಜಿನೆವಾ ಮೋಟಾರ್ ಶೋದಲ್ಲಿ ಮ್ರೈಕ್ರೋಮ್ಯಾಕ್ಸ್ ಕಾನ್ಸೆಪ್ಟ್ ಅನಾವರಣಗೊಳಿಸಲಿದೆ. ಆದರೆ ಯಾವಾಗ ಉತ್ಪಾದಕ ವರ್ಷನ್ ಬಿಡುಗಡೆಯಾಗಲಿದೆ ಎಂಬುದು ತಿಳಿದು ಬಂದಿಲ್ಲ.
ಭವಿಷ್ಯದ ಕಾನ್ಸೆಪ್ಟ್ ರೂಪಿಸುವುದರಲ್ಲಿ ರಿನ್‌ಸ್ಪೀಡ್ ಅತಿ ಹೆಚ್ಚಿನ ಗಮನ ಕೇಂದ್ರಿತವಾಗಿದೆ. ಅದೇ ರೀತಿ ಮೈಕ್ರೋಮ್ಯಾಕ್ ಎಲೆಕ್ಟ್ರಿಕ್ ವಾಹನವಾಗಿದ್ದು, ಆಲ್ ಎಲೆಕ್ಟ್ರಿಕ್ ಫೋರ್ಕ್‌ಲಿಫ್ಟ್ ಡ್ರೈವ್ ಸಿಸ್ಟಂನಿಂದ ನಿಯಂತ್ರಿಸ್ಪಡಲಿದೆ. ನಗರ ಸಾರಿಗೆ ವಾಹನವಾಗಿದ್ದರಿಂದ ಇದರ ಉತ್ಪಾದಕ ವರ್ಷನ್ ಬಂದರೆ ಹೇಗೆ ಯಶ ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ರಿನ್‌ಸ್ಪೀಡ್ ನಗರ ಸಾರಿಗೆ ವಾಹನದಲ್ಲಿ ಸ್ವಾರ್ಮ್ ಇಂಟೆಲಿಜೆನ್ಸ್ ಸಿಸ್ಟಂ ಆಳವಡಿಸಲಾಗಿದೆ. ಇದರಿಂದ ಪರಸ್ಪರ ಸಂವಹನ ಸಾಧ್ಯವಾಗಲಿದ್ದು, ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ.

ಹರ್ಮಾನ್ ಅರ್ಬನ್ ಸ್ವಾರ್ಮ್ ಕಾನ್ಸೆಪ್ಟ್ ತಂತ್ರಜ್ಞಾನ ನೆರನವಿಂದ ರಿನ್‌ಸ್ಪೀಡ್ ಮೈಕ್ರೋಮ್ಯಾಕ್ಸ್ ಕಾನ್ಸೆಪ್ಟ್ ತಯಾರಿಸಲಾಗಿದೆ.

ವೇಗ, ದೂರ ಸೇರಿದಂತೆ ಇತರ ಪೂರಕ ಮಾಹಿತಿಗಳನ್ನು ಈ ರಿನ್ ಸ್ಪೀಡ್ ಕಾನ್ಸೆಪ್ಟ್ ಚಾಲಕನಿಗೆ ಒದಗಿಸಲಿದೆ.

ಇದರ ತೆರೆದ ವಿನ್ಯಾಸ ಎಲ್ಲರನ್ನು ಆಕರ್ಷಿಸುವಂತಿದೆ. ಇದರ ಇಂಟಿರಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ವಿನ್ಯಾಸವು ಮನ ಸೆಳೆಯುವಂತಿದೆ.

ಒಳಗಡೆ ನಾಲ್ಕು ಜನರಿಗೆ ಕುಳಿತುಕೊಳ್ಳುವ ಸಿಟ್ಟಿಂಗ್ ವ್ಯವಸ್ಥೆ ಒದಗಿಸಲಾಗಿದೆ. ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಸೀಟ್ ಬೆಲ್ಟ್ ಕೂಡಾ ಆಳವಡಿಸಲಾಗಿದೆ.

ಮಾಹಿತಿ ಹಾಗೂ ಮನರಂಜನೆಗೂ ಹೆಚ್ಚಿನ ಒತ್ತು ಕೊಡಲಾಗಿದ್ದು, ಅನಿಯಮಿತ ಅಂತರ್ಜಾಲ ಸೇವೆ ಲಭ್ಯವಿರಲಿದೆ.

ಪ್ರಸ್ತುತ ಕಾನ್ಸೆಪ್ಟ್ ವಾಹನದಲ್ಲಿ ಫ್ರಿಡ್ಜ್ ಜತೆ ಕಾಫಿ ಮೆಕರ್ ಮೆಷಿನ್ ಕೂಡಾ ಇರಲಿದೆ. ಹಾಗೆಯೇ ಪ್ರಸ್ತುತ ವಾಹನ 3.7 ಮೀಟರ್ ಉದ್ದ ಹಾಗೂ 2.2 ಮೀಟರ್ ಎತ್ತರವಿರಲಿದೆ.

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ರಿನ್‌ಸ್ಪೀಡ್ ಮೈಕ್ರೋಮ್ಯಾಕ್ಸ್ ದರ 3ರಿಂದ 4 ಲಕ್ಷ ಅಸುಪಾಸಿನಲ್ಲಿರಲಿದೆ.

ರಿನ್‌ಸ್ಪೀಡ್ ಮೈಕ್ರೋಮ್ಯಾಕ್ಸ್ ಕಾನ್ಸೆಪ್ಟ್



Click it and Unblock the Notifications








