ಸಲ್ಮಾನ್‌ಗೆ ತಲೆನೋವಾಗಿ ಪರಿಣಮಿಸಿದ ರೇಂಜ್ ರೋವರ್
ಇತರ ತಾರೆಗಳಂತೆಯೇ ಬಾಲಿವುಡ್ ಚಿತ್ರರಂಗದ ಅತಿ ಬೇಡಿಕೆಯ ನಟ ಸಲ್ಮಾನ್ ಖಾನ್ ಸಹ ಐಷಾರಾಮಿ ಪಯಣವನ್ನು ಇಷ್ಟಪಡುತ್ತಾರೆ. ಈ ನಿಟ್ಟಿನಲ್ಲಿ ಬೆಲೆ ಬಾಳುವ ರೇಂಜ್ ರೋವರ್ ಕಾರು ತಮ್ಮದಾಗಿಸಿಕೊಂಡಿದ್ದರು.
ಆದರೆ ಇದೀಗ ಈ ಮುತ್ತಿನಂತಹ ಕಾರೇ ಸಲ್ಮಾನ್‌ಗೆ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ಸಲ್ಮಾನ್ ಅವರ ಈ ದುಬಾರಿ ಕಾರು ಪದೇ ಪದೇ ಸಮಸ್ಯೆಗೆ ಸಿಲುಕುತ್ತಿರುವುದು ಸೆಲೆಬ್ರಿಟಿಯನ್ನು ಪೇಚಿಗೆ ಸಿಲುಕಿಸಿದೆ. ಇನ್ನು ಕಸ್ಟಮರ್ ಸರ್ವೀಸ್ ಅಂತೂ ಸಲ್ಮಾನ್ ಅವಕೃಪೆಗೆ ಒಳಗಾಗಿದೆ. ಅಷ್ಟಕ್ಕೂ ರೇಂಜ್ ರೋವರ್‌ನಲ್ಲಿ ಸಲ್ಮಾನ್ ಎದುರಿಸುತ್ತಿರುವ ಸಮಸ್ಯೆಯಾದರೂ ಏನು? ಈ ಬಗ್ಗೆ ನಟ ನಡೆಸಿದ ಗದ್ದಲದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಸ್ಲೈಡರ್‌ನತ್ತ ಮುಂದುವರಿಯಿರಿ...

ಶ್ರೀಮಂತರಲ್ಲಿ ಅತಿ ಶ್ರೀಮಂತರು ಮಾತ್ರ ಕೋಟಿ ಬೆಳೆಬಾಳುವ ರೇಂಜ್ ರೋವರ್ ಕಾರನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಹಾಗಿರುವಾಗ ಉತ್ತಮ ಕಸ್ಟಮರ್ ಸರ್ವೀಸ್ ನೀವುವುದು ಕಂಪನಿಯ ಕರ್ತವ್ಯವಾಗಿರುತ್ತದೆ. ಇವೆಲ್ಲವನ್ನು ನಿಭಾಯಿಸುವಲ್ಲಿ ಲ್ಯಾಂಡ್ ರೋವರ್ ವಿಫಲವಾಗಿದೆ ಎಂಬುದು ಸಲ್ಮಾನ್ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಹಾಗೂ ಫೇಸ್‌ಬುಕ್ ಖಾತೆಯಲ್ಲಿ ಉಲ್ಲೇಖಿಸಿರುವ ಸಲ್ಮಾನ್, ಕಳೆದ ಒಂದುವರೆ ವರ್ಷಗಳಲ್ಲಿ ರೇಂಜ್ ರೋವರ್ ಒಂಬತ್ತು ಬಾರಿ ಬ್ರೇಕ್ ಡೌನ್ ಆಗಿದೆ. ಒಂದು ಬಾರಿಯಂತೂ ಸಂಪೂರ್ಣ ಸಸ್ಫೆಷನ್ ಬದಲಾಯಿಸಲಾಗಿತ್ತು ಎಂದಿದ್ದಾರೆ.

ತಮ್ಮ ಎರಡನೇ ಟ್ವೀಟ್‌ನಲ್ಲಿ ಇನ್ನು ವಿಸ್ತಾರವಾಗಿ ಬರೆದಿರುವ ಸಲ್ಮಾನ್, ಈ ಬಗ್ಗೆ ಕಸ್ಟಮರ್ ಸರ್ವೀಸ್ ಸೆಂಟರ್‌ನಲ್ಲಿ ವಿಚಾರಿಸಿದಾಗ, ಹೆಚ್ಚು ಭಾರವಿರುವ ಕಾರುಗಳಲ್ಲಿ ಈ ಸಮಸ್ಯೆಗಳು ಸಾಮಾನ್ಯ ಎಂಬ ಬೇಜವಾಬ್ದಾರಿಯ ಉತ್ತರ ಲಭಿಸಿದೆ. ಹಾಗಿದ್ದರೆ ಬಸ್ಸು, ಟ್ರಕ್, ರೈಲು ಹಾಗೂ ವಿಮಾನಗಳಲ್ಲಿ ಬ್ರೇಕ್ ಪ್ಯಾಡ್ ದೈನಂದಿನ ಬದಲಾಯಿಸುತ್ತಿರಬೇಕೇ? ಎಂದು ಮರು ಪ್ರಶ್ನೆ ಹಾಕಿದ್ದಾರೆ.

ಸಲ್ಮಾನ್ ಕೋಪ ಇಲ್ಲಿಗೂ ತಣ್ಣವಾಗಿಲ್ಲ. ಅವರ ಮುಂದಿನ ಬಾಣ ನೇರವಾಗಿ ಲ್ಯಾಂಡ್ ರೋವರ್ ಇಂಡಿಯಾದ ಕಸ್ಟಮರ್ ಸರ್ವೀಸನ್ನು ಬೊಟ್ಟು ಮಾಡುವಂತಿತ್ತು. ರೇಂಜ್ ರೋವರ್ ಕಸ್ಟಮರ್ ಸರ್ವೀಸ್‌ನಿಂದ ನಾನು ತುಂಬಾನೇ ಅಸಂತೃಪ್ತಿ ಹೊಂದಿದ್ದೇನೆ. ಅವರಿಗೆ ಕಸ್ಟಮರ್ ಸರ್ವೀಸ್ ಕಾನ್ಸೆಪ್ಟ್ ಇಲ್ಲದಂತಾಗಿದೆ ಎಂದು ಆರೋಪ ಮಾಡಿದ್ದಾರೆ.

ಸಲ್ಮಾನ್ ಆರೋಪದ ಬಗ್ಗೆ ರೇಂಜ್ ರೋವರ್‌ನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆಗಳು ಇದುವರೆಗೆ ಬಂದಿಲ್ಲ. ಹಾಗಿದ್ದರೂ ವಿಶ್ವದಲ್ಲೇ ಅತ್ಯುತ್ತಮ ಎಸ್‌ಯುವಿಗಳಲ್ಲೇ ಒಂದಾಗಿರುವ ರೇಂಜ್ ರೋವರ್ ಬಗ್ಗೆ ಈ ರೀತಿಯ ಆರೋಪಗಳು ಬಂದಿರುವುದು ಕಂಪನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸದ್ಯ ಜಾಗ್ವಾರ್ ಲ್ಯಾಂಡ್ ರೋವರ್ ಗಾಯಕ್ಕೆ ತೇಪೆ ಹಚ್ಚುವ ಪ್ರಯತ್ನದಲ್ಲಿದೆ.

ಕೊನೆಗೂ ತಮ್ಮ ವ್ಯಂಗ್ಯ ಶೈಲಿಯಲ್ಲಿ ದಾಳಿ ಮುಂದುವರಿಸಿರುವ ಸಲ್ಮಾನ್ ಕಳೆದ ರಾತ್ರಿ ರೇಂಜ್ ರೋವರ್ ಬ್ರೇಕ್ ಡೌನ್ ಆಗಿದ್ದಾಗ ಆಟೋ ರಿಕ್ಷಾದಲ್ಲಿ ತೆರಳಿ ಮನೆಗೆ ಸೇರಿಕೊಂಡೆ ಎಂದಿದ್ದಾರೆ. ಈ ಮೂಲಕ ರೇಂಜ್ ರೋವರ್ ಐಷಾರಾಮಿ ಸೌಲಭ್ಯಗಳ ಬಗ್ಗೆಯೂ ತಗಾದೆ ಎತ್ತಿದ್ದಾರೆ.


Click it and Unblock the Notifications








